ಭಾರತ ದೇಶ ಕಂಡ ಅಪ್ರತಿಮೆ ದೇಶಭಕ್ತ ಭೋಸರವರು: ಬಿರಾದಾರ
ಇಂಡಿ: ಪಟ್ಟಣದ ಎಸ್‌ಎಸ್‌ವಿವಿ ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಆಯ್‌ಕ್ಯೂಎಸಿ, ಎನ್‌ಎಸ್‌ಎಸ್, ಯುಥ್‌ರೆಡ್‌ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಅಡಿಯಲ್ಲಿ ಸೋಮವಾರ ‘ಸುಭಾಷಚಂದ್ರ ಭೋಸರ’ ಜನ್ಮ ದಿನಾಚರಣೆ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯ ಸಹ ಶಿಕ್ಷಕ ವಾಯ್.ಜಿ.ಬಿರಾದಾರ ಮಾತನಾಡಿ, ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ ನಮ್ಮೆಲ್ಲರ ಪ್ರೀತಿಯ ನೇತಾಜಿ ಸುಭಾಷಚಂದ್ರ ಭೋಸರ 125 ನೇ ಜನ್ಮ ದಿನದ ಅಂಗವಾಗಿ ನಾವೇಲ್ಲರೂ ಸೇರಿದ್ದು, ನೀವು ರಕ್ತ ಕೊಡಿ, ನಾನು ನಿಮಗೆ ಸ್ವತಂತ್ರ್ಯ ಕೊಡುತ್ತೇನೆ. ಎಂದು ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ಬ್ರೀಟಿಷರ ದಾಸ್ಯದಿಂದ ಮುಕ್ತ ಮಾಡಿದ್ದ ಭಾರತ ಮಾತೆಯ ನಿಜವಾದ ವೀರಪುತ್ರ ಹಾಗೂ ಸದಾ ಕ್ರಿಯಾಶೀಲರಾಗಿದ್ದು ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಿಟ್ಟ ಈ ವೀರ ಸೇನಾನಿ. ‘ಸ್ವಾತಂತ್ರ್ಯ ಯಾರು ಕೊಡುವುದಿಲ್ಲ ಅದನ್ನು ನಾವೇ ಪಡೆದುಕೊಳ್ಳಬೇಕು’ ಎಂಬ ಅವರ ಮಾತು ಇಂದಿನ ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚುವಂತಹದ್ದಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಮಹಾನ್ ನಾಯಕನ ಜಯಂತಿಯನ್ನು ಆಚರಿಸುವುದರ ಜೊತೆಗೆ ಸ್ವಾತಂತ್ರ್ಯ ನಮಗೆ ಸಿಕ್ಕಿದ್ದಲ್ಲ, ಅದನ್ನು ನಾವು ಗಳಿಸಿಕೊಂಡಿದ್ದು. ಅದನ್ನು ನಾವು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ.” ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಎಸ್.ಬಿ.ಜಾಧವ ಅವರು ‘ನೇತಾಜಿ ಸ್ಮರಣೆ, ನೇತಾಜಿ ಸಾಹಸಿ’ ಸ್ವರಚಿತ ಕವನ ವಾಚನ ಮಾಡುತ್ತ ಮಾತನಾಡಿದರು.
ಈ ಕಾರ್ಯಕ್ರಮದ ಅಂಗವಾಗಿ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಪ್ರಥಮ ಸ್ಥಾನ ಕಾಮನಗೌಡ ಬಿರಾದಾರ, ದ್ವಿತೀಯ ಸ್ಥಾನ ಗೀತಾ ಕರಬಂಟನಾಳ ಮತ್ತು ತೃತೀಯ ಸ್ಥಾನ ನಿಖತ ತೆನ್ನಳ್ಳಿ ಪಡೆದುಕೊಂಡರು.
ವೇದಿಕೆಯಲ್ಲಿ ಎಸ್.ವ್ಹಿ.ಹೊನ್ನಾಕಟ್ಟಿ, ನ್ಯಾಕ್ ಸಂಯೋಜಕರಾದ ಡಾ.ಪಿ.ಕೆ.ರಾಠೋಡ, ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥರು ಶ್ರೀಕಾಂತ ರಾಠೋಡ ಉಪಸ್ಥಿತರಿದ್ದರು.
ಡಾ.ಸುರೇಂದ್ರ ಕೆ, ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಎಮ್.ಆರ್.ಕೋಣದೆ, ಆರ್.ಪಿ.ಇಂಗನಾಳ, ಎಲ್ಲಾ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ನಿರೂಪಣೆಯನ್ನು ಸೋನಾಲಿ ಗೋಡಕೆ, ಪ್ರಾರ್ಥನಾ ಗೀತೆ ಐಶ್ವರ್ಯ ಕಂಬಾರ, ಸ್ವಾಗತ ಮತ್ತು ಪರಿಚಯವನ್ನು ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ವಿಶ್ವಾಸ ಕೋರವಾರ ವಂದನಾರೆ್ಣಯನ್ನು ಪ್ರೀಯಂಕಾ ಚವ್ಹಾಣ ಅವರು ನಿರ್ವಹಿಸಿದರು.