ಅಂಬೇಡ್ಕರ್ ಜೀವನ ಅವರ ಸಾಧನೆ ಇಂದಿನ ಪೀಳಿಗೆಗೆ ಮಾರ್ಗದರ್ಶಕ
ಲೋಕದರ್ಶನ ವರದಿ
ಇಂಡಿ: ಅಂಬೇಡ್ಕರ್ ಅವರ ಜೀವನ ಮತ್ತು ಅವರ ಸಾಧನೆ ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ಅವರ ಸಿದ್ಧಾಂತ ಹಾಗೂ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಲು ಪ್ರಯತ್ನಿಸಬೇಕು ಎಂದು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.
ಶುಕ್ರವಾರ ಪಟ್ಟಣದ ಮಿನಿವಿಧಾನಸೌಧಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ದಲಿತರ ಮೇಲೆ ಹಿಂದೂ ಧರ್ಮದಲ್ಲಿ ನಡೆಯುತ್ತಿದ್ದ ದೌರ್ಜನ್ಯದ ವಿರೋಧಿಸಿ ಧರ್ಮವನ್ನೇ ತ್ಯಜಿಸಿ ಬೌದ್ಧ ಧರ್ಮ ಅನುಯಾಯಿಯಾದರು. ಅವರ ಇಡೀ ಜೀವನ ಎಲ್ಲ ಜಾತಿ, ಧರ್ಮದವರು ಅನುಸರಿಸುವಂತೆ ಆದರ್ಶಮಯ ಎಂದು ಹೇಳಿದರು.
ತಹಶೀಲ್ದಾರ ನಾಗಯ್ಯ ಹಿರೇಮಠ, ಸಮಾಜ ಕಲ್ಯಾ ಅಧಿಕಾರಿ ಬಿ.ಜೆ. ಇಂಡಿ, ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ ಕೆ, ಎಸ್.ಆರ್. ಮುಜಗೊಂಡ, ಶಿವಾನಂದ ಮೂರಮನ, ಸಂತೊಷ ಹೊಟಕರ, ಚಂದ್ರಶೇಖರ ಹೊಸಮನಿ, ಡಿಎಸ್ಪಿ ಚಂದ್ರಕಾಂತ ನಂದರಟ್ಟಿ, ಸಿಪಿಐ ರತನಕುಮಾರ ಜಿರಗಿಹಾಳ, ಮಹಾದೇವ ಶಿರಹಟ್ಟಿ, ಆರ್.ವಿ. ಪಾಟೀಲ ಇದ್ದರು.