ನಿಂಬೆ ನಾಡಲ್ಲಿ ಕೃಷಿ ಚಟುವಟಿಕೆ ಸಿದ್ಧತೆ
ಇಂಡಿ: ತಾಲೂಕಿನಲ್ಲಿ ಮುಂಗಾರು ಮಳೆ ಆರಂಭಕ್ಕೂ ಮುನ್ನ ರೈತ ಸಜ್ಜುಗೊಂಡಿದ್ದಾನೆ. ವಾಡಿಕೆಯಂತೆ ಮುಂಗಾರು ಮಳೆ ಜೂನ ಮೊದಲವಾರ ಆರಂಭ ಗೊಳ್ಳುವ ನೀರೀಕ್ಷೆ ಇದೆ. ಇಂಡಿ ತಾಲೂಕಿನಲ್ಲಿ ಈ ಬಾರಿ ಇನ್ನೂ ಮಳೆ ಬಾರದ ಕಾರಣ ಭೂಮಿಯಲ್ಲಿ ನೀರಿನ ಮಟ್ಟ ಸಹ ಕಡಿಮೆಗೊಂಡಿದೆ. ಆದರೂ ರೈತರು ಮಾತ್ರ ಹೊಲ ಉಳಿಮೆಯಿಂದ ಹಿಡಿದು ಸಾವಯುವ ಗೊಬ್ಬರ ಹಾಕುವ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇಂಡಿ ತಾಲೂಕಿನ್ಯಾದಂತ ರೈತರು ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತಲ್ಲಿನರಾಗಿರುವ ದೃಶ್ಯ ಕಂಡು ಬರುತ್ತಿದೆ. ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಇಂಡಿ ತಾಲೂಕಿನಲ್ಲಿ ಒಂದು ಲಕ್ಷ 60 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಒಂದು ಲಕ್ಷ ಹತ್ತು ಸಾವಿರ ಹೇಕ್ಟರ್ ಕ್ಷೇತ್ರದಲ್ಲಿ ತೊಗರಿ, ಕಬ್ಬು ಈಗಾಗಲೇ 20 ಸಾವಿರ ಪ್ರದೇಶದಲ್ಲಿದ್ದು, ಇನ್ನೂ 12 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಹೊಸದಾಗಿ ನಾಟಿ ಮಾಡಲಿದ್ದಾರೆ.
ಹೆಸರು 2000 ಹೇ, ಸೂರ್ಯಪಾನ 2000 ಹೇ, ಉದ್ದು ಒಂದು ಸಾವಿರ, ಮೆಕ್ಕೆಜೋಳ 12 ಸಾವಿರ, ಹತ್ತಿ 5 ಸಾವಿರ, ಸಜ್ಜೆ 4 ಸಾವಿರ ಹೇ, ಹುರುಳಿ 50 ಹೇ, ಮುಕಣಿ 50 ಹೇ, ನವಣಿ 20 ಹೇ, ಬರಗು 20 ಹೇ ಪ್ರದೇಶದಲ್ಲಿ ಗುರಿ ಹೊಂದಲಾಗಿದೆ ಎಂದರು.
ಹೊಲ ತಯಾರು ಮಾಡಲು ಸೂಕ್ತ ಸಮಯ ಭೂಮಿ ಹದ ಆಗಿದೆ. ಮುಂಗಾರು ಹಂಗಾಮಿಗೆ ಉಳಿಮೆ ಮಾಡಿಕೊಳ್ಳಲು ಅನುಕೂಲಕರ ವಾತಾವರಣ ಇದೆ. ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು ಜೂನ್ ಮೊದಲನೆಯ ವಾರ ಮಳೆ ಆದ ನಂತರ ಸಿದ್ದತೆ ಮಾಡಿ ಕೊಳ್ಳಿ ಎಂದು ತಿಳಿಸಿದರು.
ಗೊಬ್ಬರ ದಾಸ್ತಾನು ಪ್ರಾರಂಭವಾಗಿದೆ. ವಿವಿಧ ರಸ ಗೊಬ್ಬರ ಖಾಸಗಿ ಮಳಿಗೆಗಳಲ್ಲಿ ಲಭ್ಯವಿದೆ. ಬೀಜ ದಾಸ್ತಾನು ಮಾಡುತ್ತಿದ್ದೇವೆ, ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಬೀಜ ಲಭ್ಯ ಇವೆ ಎಂದರು.
ಇ-ಕೆವೈಸಿ ಕಡ್ಡಾಯ:
ಪಿ.ಎಂ.ಕಿಸಾನ ಯೋಜನೆಯ 14 ನೇ ಕಂತು ಜಮೆ ಆಗಲು ಇ-ಕೆವೈಸಿ ಕಡ್ಡಾಯ. ತಾಲೂಕಿನಲ್ಲಿ 61634 ರೈತರು ಅರ್ಹರಿದ್ದು ಅದರಲ್ಲಿ 41212 ರೈತರು ಈ ಕೆವೈಸಿ ಮಾಡಿಸಿದ್ದು, ಇನ್ನು 20422 ರೈತರು ಇ-ಕೆವೈಸಿ ಮಾಡಬೇಕಾಗಿದೆ. ಇಲ್ಲದಿದ್ದರೆ ಹಣ ಬರುವದಿಲ್ಲ ಎಂದರು.