ಧಾರವಾಡ - ಹುಬ್ಬಳ್ಳಿ

ರಾಷ್ಟ್ರ ಕೀರ್ತಿ ಹೆಚ್ವಿಸಿರುವ ಕ್ರೀಡಾ ಪಟುಗಳ ಆದರ್ಶ ಅಳವಡಿಸಿಕೊಳ್ಳಿ; ಕ್ರೀಡಾಮನೋಭಾವವೇ ಜೀವನದ ಯಶಸ್ಸಿನ ಗುಟ್ಟು: ಸಂಗಮೇಶ ಬಬಲೇಶ್ವರ

ರಾಷ್ಟ್ರ ಕೀರ್ತಿ ಹೆಚ್ವಿಸಿರುವ ಕ್ರೀಡಾ ಪಟುಗಳ ಆದರ್ಶ ಅಳವಡಿಸಿಕೊಳ್ಳಿ; ಕ್ರೀಡಾಮನೋಭಾವವೇ ಜೀವನದ ಯಶಸ್ಸಿನ ಗುಟ್ಟು: ಸಂಗಮೇಶ ಬಬಲೇಶ್ವರ
Adopt the ideals of sportspersons who have brought glory to the nation; Sportsmanship is the secret

ರಾಷ್ಟ್ರ ಕೀರ್ತಿ ಹೆಚ್ವಿಸಿರುವ ಕ್ರೀಡಾ ಪಟುಗಳ ಆದರ್ಶ ಅಳವಡಿಸಿಕೊಳ್ಳಿ; ಕ್ರೀಡಾಮನೋಭಾವವೇ ಜೀವನದ ಯಶಸ್ಸಿನ ಗುಟ್ಟು: ಸಂಗಮೇಶ ಬಬಲೇಶ್ವರ 


ಧಾರವಾಡ ಆ.29: ಇಂದಿನ ಯುವ ಕ್ರೀಡಾಪಟುಗಳು ನಮ್ಮ ರಾಷ್ಟ್ರದ ಸಾಧಕ ಕ್ರೀಡಾಪಟುಗಳ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸೋಲು ಗೆಲವುಗಳನ್ನು ಸಮಾನವಾಗಿ ಕಾಣುವ ಕ್ರೀಡಾನೋಭಾವವೇ ಜೀವನದ ಯಶಸ್ಸಿನ ಗುಟ್ಟು. ಅದನ್ನು ಅರಿತು ನಡೆಯಬೇಕು ಎಂದು ಕರ್ನಾಟಕ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು. 

ಅವರು ಇಂದು (ಆ.29) ಬೆಳಿಗ್ಗೆ ಧಾರವಾಡ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಮೇಜರ್  ಧ್ಯಾನ್‌ಚ್‌ಂದ ರವರ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 


ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮದ ಕಟ್ಟಳೆಗಳಿಲ್ಲ, ಮೇಲು ಕೀಳು ಎಂಬ ಭೇದಭಾವ ಇಲ್ಲ, ಬಡವ ಶ್ರೀಮತ ಎಂಬುದಿಲ್ಲ. ಕ್ರೀಡಾ ಸಾಧಕರಿಗೆ, ಸ್ಪರ್ಧಾ ವಿಜೇತರಿಗೆ ಸಿನಿಮಾ ನಟಿಯರಿಗಿಂತ ಹೆಚ್ವು ಗೌರವ, ಅಭಿಮಾನವಿದೆ ಎಂದರು. 

ವಿವಿಧ ಸ್ಪರ್ಧೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಅನೇಕ ಭಾರತೀಯರು ವಿಶ್ವಮನ್ನಣೆ ಗಳಿಸಿದ್ದಾರೆ. ಅವರ ಸಾಧನೆ, ಜೀವನ ಮೌಲ್ಯಗಳು ನಮಗೆ, ನಮ್ಮ ಕ್ರೀಡಾಪಟುಗಳಿಗೆ ಸ್ಪೂರ್ತಿ ಆಗಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ಕ್ರೀಡಾ ಹವ್ಯಾಸವನ್ನು ಹೊಂದಿರಬೇಕು. ಮೇಜರ್ ಧ್ಯಾನ್‌ಚ್‌ಂದ ಅವರಂತೆ ಏಗ್ರಾತೆ, ಸಾಧನೆಗೆ ಅಚಲ ಮನಸ್ಸು, ತರಬೇತಿಯಲ್ಲಿನ ತನ್ಮಯತೆ ಮತ್ತು ನಿರ್ಧಿಷ್ಟ ಗುರಿ ಇರಬೇಕು. ಅಂದಾಗ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಸದೃಡ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ. ಕ್ರೀಡಾಪಟುಗಳಿಗೆ ಆಹಾರದ ಉತ್ತಮ ಹವ್ಯಾಸಗಳು ಇರುತ್ತವೆ. ಯಾವುದೇ ದುಷ್ಚಟಗಳಿಗೆ ಅಂಟಿಕೊಳ್ಳಬಾರದು ಎಂದರು. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರಕ್ಕೆ ವಿಶ್ವಮಟ್ಟದಲ್ಲಿ ಉತ್ತಮ ಹೆಸರು, ಕೀರ್ತಿ ಇದೆ. ನಮ್ಮ ಕ್ರೀಡಾಪಟುಗಳು ಇನ್ನೂ ಹೆಚ್ವಿನ ಸಾಧನೆ ಮಾಡುವ ಮೂಲಕ ಧಾರವಾಡ ಜಿಲ್ಲೆಗೆ ಕೀರ್ತಿ ತರಬೇಕೆಂದು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು. 

ದೈನಂದಿನ ವ್ಯಾಯಾಮ, ಕ್ರೀಡಾ ಚಟುವಟಿಕೆ ಮತ್ತು ಶಾರೀರಿಕ ಶ್ರಮವು ಜೀವನವನ್ನು ಸಂತೋಷಮಯವಾಗಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಆದರೆ ನಿರಂತರ ಅಭ್ಯಾಸ ಮತ್ತು ಶ್ರಮದಿಂದ ಸಾಧನೆ ಸಾಧ್ಯ ಎಂದು ಹೇಳಿದರು. 

ಕವಿವಿ ಕ್ರೀಡಾ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ.ಬಿ.ಎಂ.ಪಾಟೀಲ ಅವರು  ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪ್ರಭಾರಿ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಅವರು ಸ್ವಾಗತಿಸಿದರು. ಜಿನ್ನಪ್ಪ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಎಸ್‌.ಭಾವಿಕಟ್ಟಿ ಅವರು ವಂದಿಸಿದರು. 

ವೇದಿಕೆಯಲ್ಲಿ ಜಿಮ್ನಾಸ್ಟಿಕ್ ತರಬೇತಿದಾರ ವಿಠ್ಠಲ ಮೂರ್ತಗುಡ್ಡೆ, ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ, ಸಾಯಿ ಆಡಳಿತಾಧಿಕಾರಿ ರಾಮ ಬುಡಕಿ ಇದ್ದರು. 

ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರಿಗೆ, ಮಾಜಿ ಕ್ರೀಡಾ ತರಬೇತಿದಾರರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಹಾಗೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. 

ಕಾರ್ಯಕ್ರಮದಲ್ಲಿ ನಿವೃತ್ತ ಖೋಖೋ ತರಬೇತಿದಾರ ಕೆ.ಸುಜಯಕುಮಾರ, ನಿವೃತ್ತ ಹಾಕಿ ತರಬೇತಿದಾರ ಗಂಗಾಧರ ತಪಶಟ್ಟಿ, ನಿವೃತ್ತ ಬಾಸ್ಕೆಟಬಾಲ್ ತರಬೇತಿದಾರ ಗಣೇಶ ವಾಡಕರ್, ನಿವೃತ್ತ ಹಾಕಿ ತರಬೇತಿದಾರ ಸುರೇಶ ಆಡಿನ್, ಅಥ್ಲೇಟಿಕ್ಸ್‌ ತರಬೇತಿದಾರ ಆರ್‌.ಕೆ.ಪಡತಾರೆ ಸೇರಿದಂತೆ ಅನೇಕ ಕ್ರೀಡಾ ತರಬೇತಿದಾರರು, ಕ್ರೀಡಾಪಟುಗಳು, ಕ್ರೀಡಾಶಾಲೆಯ ವಿದ್ಯಾರ್ಥಿಗಳು, ಕ್ರೀಡಾ ಪ್ರೇಮಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ