ಧಾರವಾಡ - ಹುಬ್ಬಳ್ಳಿ

ಇಂದು ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ

ಇಂದು ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ

 ಧಾರವಾಡ 25: ಕುಮಾರೇಶ್ವರನಗರದ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು  ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ದಿನಾಂಕ 26 ಸಂಜೆ 5:30ಕ್ಕೆ ಶ್ರೀ ಕರಿಯಮ್ಮದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯರಾದ ಅನಿತಾ ಚಳಗೇರಿ ಅವರು ಉದ್ಘಾಟಿಸುವರು, ಶ್ರೀ ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಎನ್‌.ಬಿ. ಪಾಟೀಲ್, ಉಪಾಧ್ಯಕ್ಷ ಜೆ.ವಾಯ್‌.ತೋಟದ, ಕಾರ್ಯದರ್ಶಿ ಜಿ.ಎಂ. ಹುಲ್ಲೂರ್ ಉಪಸ್ಥಿತರಿರುವರು.   

ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ  ವಿದುಷಿ ಸುಜಾತಾ ಕಮ್ಮಾರ ಗುರವ, ವಿದುಷಿ ಭಾರ್ಗವಿ ಕುಲಕರ್ಣಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ದರ್ಬಾರ್ ಸಂಗೀತ ವಿದ್ಯಾಲಯ, ಲಯ ಫೌಂಡೇಶನ್ ವತಿಯಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.  ದಿನಾಂಕ 27 ರಂದು ಮುಂಜಾನೆ 8.00 ಗಂಟೆಗೆ ಶ್ರೀ ಕರಿಯಮ್ಮ ದೇವಿಗೆ ಸುಮಂಗಲೆಯರಿಂದ ಉಡಿತುಂಬುವುದು, ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದ ಕಾರ್ಯಕ್ರಮವನ್ನು ಏರಿ​‍್ಡಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಪ್ರಭು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ