ಧಾರವಾಡ - ಹುಬ್ಬಳ್ಳಿ

"ವೀರಮಾತೆ ಕಿತ್ತೂರ ರಾಣಿ ಚನ್ನಮ್ಮಾಜಿಯ 202 ನೇ ವಿಜಯೋತ್ಸವ"

"ವೀರಮಾತೆ ಕಿತ್ತೂರ ರಾಣಿ ಚನ್ನಮ್ಮಾಜಿಯ 202 ನೇ ವಿಜಯೋತ್ಸವ"

ಧಾರವಾಡ 23 :  ನಮ್ಮ ಕಿತ್ತೂರ ನಾಡಿನ ಜನತೆ ಜೀತಕ್ಕಾಗಿ ದುಡಿಯುವವರಲ್ಲ  ದೇಶಕ್ಕಾಗಿ ದುಡಿಯುವವರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಧೀರ ಮಹಿಳೆ, ಚನ್ನಮ್ಮ ಸ್ವಾಭಿಮಾನದ ಪ್ರತೀಕ ಎಂದು ಶ್ರೀಮತಿ ಸುಧಾ ಎಸ್‌.ಕಬ್ಬೂರ ತಿಳಿಸಿದರು. ಅವರು  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವೀರಮಾತೆ ಕಿತ್ತೂರ ರಾಣಿ ಚನ್ನಮ್ಮಾಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ಲಿಂಗಾಯತ ಭವನದಲ್ಲಿ ಆಯೋಜಿಸಿದ ಕಿತ್ತೂರ ರಾಣಿ ಚನ್ನಮ್ಮಾಜಿಯ 202 ನೇ ವಿಜಯೋತ್ಸವದ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ  ಮಾತನಾಡಿದರು ನಂತರ ಹಿರಿಯ ವಕೀಲರಾದ ಸಿ.ಎಸ್‌.ನೇಗಿನಾಳ ಮಾತನಾಡಿ ಚನ್ನಮ್ಮನ ಶೌರ್ಯ ಸಾಹಸ ಯುವಪೀಳಿಗೆಗೆ ಸ್ಪೂರ್ತಿ ಎಂದರು, ಸಭೆಯ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್‌.ಶಿರಿಯಣ್ಣವರ ಮಾತನಾಡಿ ಚನ್ನಮ್ಮನವರು ಬಾಲ್ಯದಲ್ಲಿಯೇ ಶರಣ ಸಾಹಿತ್ಯ ದಾಸ ಸಾಹಿತ್ಯ ಹಾಗೂ ಅನೇಕ ವೀರ ಪರಂಪರೆಯ ಮಹನೀಯರ ಇತಿಹಾಸ ಅಭ್ಯಸಿಸುತ್ತಿದ್ದರು, ಬಾಲ್ಯದಲ್ಲಿಯೇ ಕತ್ತಿವರಸೆ, ಕುದುರೆ ಸವಾರಿ,ಮುಂತಾದ ಯುದ್ದಕಲೆಗಳನ್ನು ಕರಗತ ಮಾಡಿಕೊಂಡಿದ್ದರು ಎಂದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ ಭಾವಿಕಟ್ಟಿ ನೆರವೇರಿಸಿದರು, ಶಿವಶರಣ ಕಲಬಶೆಟ್ಟರ ಸ್ವಾಗತಿಸಿದರು ಬಸವರಾಜ ಗೋಲಪ್ಪನವರ  ಪ್ರಾಸ್ತಾವಿಕ ಮಾತನಾಡಿದರು, ರಾಜಶೇಖರ ಉಪ್ಪಿನ ವಂದಿಸಿದರು, ಕಾರ್ಯಕ್ರಮದಲ್ಲಿ ಪ್ರೊ.ವಿ.ಸಿ.ಸವಡಿ, ಶಂಕರ ಕುಂಬಿ, ನಿಂಗಪ್ಪ ಕರೀಕಟ್ಟಿ,ಬಸವರಾಜ ಸೂರಗೊಂಡ, ಸಿ.ಎನ್‌.ಸಾಲಿಗೌಡರ, ಡಾ.ಲಕ್ಕಪ್ಪ ಬಿರಾದಾರ, ಪ್ರೊ.ಡಿ.ಎಂ.ನಿಡವಣಿ, ಮಲ್ಲಿಕಾರ್ಜುನ ಹಳ್ಳಿಕೇರಿ, ಎಂ.ಆರ್‌.ಗಾಣಿಗೇರ ಸಿದ್ದಪ್ಪ ಸಪೂರಿ, ಶಿವನಗೌಡ ಪಾಟೀಲ್, ಎಸ್‌.ಜಿ.ವೀರನಗೌಡರ್  ಎನ್‌.ಎನ್‌.ಮುಶೆಪ್ಪನವರ ಬಸವರಾಜ ಕುರ್ಲಿ, ವೈ.ಎಸ್‌.ಸಣ್ಣಗೌಡರ, ಶಿವಾನಂದ ಶಿವಳ್ಳಿ, ಲಿಂಗರಾಜ ಕಮತರ, ಬಸವರಾಜ ನವಲಗುಂದ ನಾಗರಾಜ ತಿಗಡಿ, ಎಸ್‌.ವಿ.ಕೆಂಗಾನೂರ  ಮುಂತಾದ ಸಮಾಜ ಬಾಂಧವರು ಉಪಸ್ಥಿತರಿದ್ದರು. 


ಸುದ್ದಿ ಓದಿ