ಕಲ್ಲು ಕ್ವಾರಿಯಲ್ಲಿ ಬಿದ್ದು ವಿದ್ಯಾರ್ಥಿ ಸಾವು
ರಾಣೇಬೆನ್ನೂರು 27: ತಾಲೂಕಿನ ವೆಂಕಟಾಪುರ ಗ್ರಾಮದ ವಿದ್ಯಾರ್ಥಿ ಕಲ್ಲು ಕ್ವಾರಿಯಲ್ಲಿ ಬಿದ್ದು ಸಾವಿಗಿಡಾಗಿದ್ದಾನೆ. ಹೊಲಕ್ಕೆ ಹೊಗುತ್ತಿದ್ದ ವಿದ್ಯಾರ್ಥಿಗಳಿಬ್ಬರು ಕಾಲುಜಾರಿ ಕ್ವಾರಿಯಲ್ಲಿ ಬಿದ್ದಿದ್ದಾರೆ.ಒಬ್ಬ ವಿದ್ಯಾರ್ಥಿ ಇಜಿ ಪ್ರಾಣಾಪಾಯದಿಂದ ಪಾರಾಗಿದ್ದು..ಮತ್ತೊಬ್ಬ ವಿದ್ಯಾರ್ಥಿಯ..ಶವ ಪತ್ತೆಗಾಗಿ ಅಗ್ನಿಶಾಮಕ ಹಾಗೂ ಪೊಲೀಸ ಇಲಾಖೆಯವರು ಶೋಧ ನಡೆಸಿದ್ದಾರೆ.
ವೆಂಕಟಾಪುರ ಬುಡಪನಹಳ್ಳಿ ಮಾರ್ಗ ಪಕ್ಕ ಇರುವ ಕಲ್ಲು ಕ್ವಾರಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ.ಹೌದು ಗಣೇಶ್ ಮಲ್ಲೇಶಪ್ಪ ಲಮಾಣಿ 17 ವರ್ಷದ ವಿದ್ಯಾರ್ಥಿಯು ಹೊಲಕ್ಕೆ ಹೋಗುತ್ತಿದ್ದ ಸಮಯದಲ್ಲಿ ಕಲ್ಲು ಕ್ವಾರಿಯಲ್ಲಿ ಕಾಲು ಜಾರಿ ಬಿದ್ದು ಸಾವಿಗಿಡಾದ ಧಾರುಣ ಘಟನೆ ಗುರುವಾರ ಮದ್ಯಾಹ್ನ ಜರುಗಿದೆ.ಮಾಹಿತಿ ತಿಳಿದ ಕೂಡಲೆ ಬ್ಯಾಡಗಿ ಅಗ್ನಿಶಾಮಕ ಸಿಬ್ಬಂದಿಗಳು ಶವ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
ರಾಣೆಬೆನ್ನೂರ ಆರಕ್ಷಕ ಸಿಬ್ಬಂದಿ ಅವರು ಮಾಹಿತಿ ಪಡೆದು.ತನಿಖೆ ನಡೆಸಿದ್ದಾರೆ.ಬಾಳಿ ಬದುಕಬೇಕಾಗಿದ್ದ ಜೀವ ನೀರಿನಲ್ಲಿ ಹೋಮ ಹೋದಂತೆ ಕಲ್ಲುಕ್ವಾರಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದೆ. ಇನ್ನು ಹೆತ್ತವರ, ಗ್ರಾಮಸ್ಥರ ಹಾಗೂ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.. ಇನ್ನಾದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಎಚೆತ್ತು ಇಂತ ಘಟನೆ ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಇನ್ನು ಎಷ್ಟು ಜೀವ ಇಲ್ಲಿ ಬಲಿ ತೆಗೆದುಕೊಳ್ಳುತ್ತದೆ ಏನೋ...ಕಲ್ಲು ಕ್ವಾರಿಯಲ್ಲಿ ಬಿದ್ದು ವಿದ್ಯಾರ್ಥಿ ಸಾವು.ಗಣೇಶ್ ಮಲ್ಲೇಶಪ್ಪ ಲಮಾಣಿ ಸಾವೀಗೀಡಾದ ವಿದ್ಯಾರ್ಥಿ.ಬಾಳಿ ಬದುಕಬೇಕಾಗಿದ್ದ ಜೀವ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದೆ.ಹೆತ್ತವರು ಹಾಗೂ ಗ್ರಾಮಸ್ಥರು ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ.