ಬೈಲಹೊಂಗಲ

ದೊಡವಾಡ ಐತಿಹಾಸಿಕ ದೊಡ್ಡಬಾವಿಯಲ್ಲಿ ಅದ್ದೂರಿ ತೆಪ್ಪೋತ್ಸವ

ದೊಡವಾಡ ಐತಿಹಾಸಿಕ ದೊಡ್ಡಬಾವಿಯಲ್ಲಿ ಅದ್ದೂರಿ ತೆಪ್ಪೋತ್ಸವ

ಬೈಲಹೊಂಗಲ 07: ತಾಲೂಕಿನ ದೊಡವಾಡ ಗ್ರಾಮದ ಮಹಾಬಳೇಶ್ವರ ದೇವಸ್ಥಾನದ ಬಳಿ ಇರುವ ಐತಿಹಾಸಿಕ ದೊಡ್ಡಬಾವಿಯಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಾನುವಾರ ತೆಪ್ಪೋತ್ಸವ ಜಾತ್ರೆ ಅದ್ದೂರಿಯಿಂದ ಜರುಗಿತು.  

ಮಹಾಬಳೇಶ್ವರ ದೇವಸ್ಥಾನ ಮತ್ತು ದೊಡ್ಡಬಾವಿಗೆ ವಿದ್ಯುದೀಪಗಳಿಂದ ಅಲಂಕರಿಸಲಾಗಿತ್ತು. ಹಿರೇಮಠದ ಜಡಿಸಿದ್ದೇಶ್ವರ ಸ್ವಾಮಿಜಿಯವರು ತೇರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.  

ದೊಡ್ಡಬಾವಿ ಸುತ್ತಲೂ ಮಣ್ಣಿನ ಪಣತೆಗಳಲ್ಲಿ ಹಚ್ಚಿಟ್ಟಿದ್ದ ನೂರಾರು ದೀಪಗಳು ತೆಪ್ಪದ ತೇರಿನ ಜಾತ್ರೆಗೆ ಮೆರಗು ತಂದಿದ್ದವು. ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರ ಹರ ಹರ ಮಹಾದೇವ ಜಯಘೋಷದೊಂದಿಗೆ ತೇರು ಎಳೆಯಲಾಯಿತು. 

ಬಾವಿಕಟ್ಟಿ ಓಣಿಯ ಯುವಕರು, ಹಿರಿಯರು ಹಾಗೂ ಮಹಾಬಳೇಶ್ವರ ದೇವಸ್ಥಾನ ಸಮಿತಿಯವರು ತೆಪ್ಪದ ತೇರಿನ ಜಾತ್ರೆ ಯಶಸ್ಸಿಗೆ ಶ್ರಮಿಸಿದರು. ಇದೇ ವೇಳೆ ಭಕ್ತರಿಗೆ ಅನ್ನ ಸಂತರೆ​‍್ಣ ಕಾರ್ಯಕ್ರಮ ನಡೆಯಿತು. 


ಸುದ್ದಿ ಓದಿ