ಪಾಕಿಸ್ತಾನದಲ್ಲಿ 45 ಮಕ್ಕಳು ಪೊಲಿಯೋಗೆ ಬಲಿ
ಇಸ್ಲಾಮಾಬಾದ್, ಜುಲೈ 15 (ಯುಎನ್ಐ) ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತೂನ್ ಪ್ರಾಂತ್ಯದಲ್ಲಿ ನಾಲ್ಕು ಪೊಲಿಯೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲ್ಲಿಯವರೆಗೆ ದೇಶದಲ್ಲಿ 45 ಮಕ್ಕಳು ಪೊಲಿಯೋಗೆ ಬಲಿಯಾಗಿರುವುದು ವರದಿಯಾಗಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಹೆಚ್) ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಲಾಹೋರ್, ಜೇಲಂ, ಬನು ಹಾಗೂ ಲಕ್ಕಿ ಮರ್ವತ್ ಎಂಬಲ್ಲಿ ಇತ್ತೀಚೆಗೆ ನಾಲ್ಕು ಪೊಲಿಯೋ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಲಾಹೋರ್ ನಲ್ಲಿ 9 ತಿಂಗಳ ಗಂಡು ಮಗು, ಜೇಲಂನಲ್ಲಿ ನಾಲ್ಕು ವರ್ಷದ ಬಾಲಕ, ಬನುದಲ್ಲಿ 6 ತಿಂಗಳ ಗಂಡು ಮಗು ಹಾಗೂ ಲಕ್ಕಿ ಮರ್ವತ್ ನ ಒಂದು ವರ್ಷದ ಬಾಲಕಿ ಪೊಲಿಯೋಗೆ ಬಲಿಯಾಗಿದ್ದಾರೆಂದು ರವಿವಾರ ತಿಳಿದು ಬಂದಿದೆ. ಇಡೀ ದೇಶದಲ್ಲಿ ಇದುವರೆಗೆ ಸುಮಾರು 45 ಪೊಲಿಯೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ವರ್ಷ 12 ಪ್ರಕರಣಗಳು ವರದಿಯಾಗಿದ್ದವು. ಪೊಲಿಯೋ ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯ ಕುರಿತು ಗಂಭೀರ ಚಿಂತನೆ ನಡೆಸಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 