ರಾಣೆಬೆನ್ನೂರ

ವಿವಿಧ ಘಟಕಗಳ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ

ವಿವಿಧ ಘಟಕಗಳ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ

ರಾಣೆಬೆನ್ನೂರ 23: ತಾಲೂಕಿನ 86 ಹಳ್ಳಿಗಳಲ್ಲಿ ಇತ್ತೀಚಿಗೆ ನಡೆಸಿದ ಒಂದು ತಿಂಗಳ ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಮತದಾರರಿಂದ ಉತ್ತಮ ಬೆಂಬಲ ಹಾಗೂ ಸಹಕಾರ ದೊರೆತಿದ್ದು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಅಭಿಪ್ರಾಯಗಳು ಮೂಡಿಬಂದಿವೆ ಎಂದು ಸ್ಥಳೀಯ ವಿಧಾನಸಭೆಯ ಜೆಡಿಎಸ್ ಅಭ್ಯಥರ್ಿ ಮಂಜುನಾಥ ಗೌಡ ಶಿವಣ್ಣನವರ ವಿಶ್ವಾಸ ವ್ಯಕ್ತಪಡಿಸಿದರು. 

ಅವರು ರವಿವಾರ ನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ತಾಲೂಕ ಮತ್ತು ನಗರ ಘಟಕಗಳ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸಾವಿರಾರು ಸಮಸ್ಯೆಗಳು ಮೂಡಿ ಬಂದವು. ಬಹುತೇಕ ಜನರಿಗೆ  ಬಿಜೆಪಿ ಕಾಂಗ್ರೆಸ್ ನಿಂದ ಯಾವುದೇ ರೀತಿಯ ಸಹಕಾರ ಅಭಿವೃದ್ಧಿ ಕಾರ್ಯಗಳು ಆಗಿಲ್ಲವೆಂದು ಜನರು ಆರೋಪಿಸಿದರು. ಜೆಡಿಎಸ್ ಉತ್ತಮ ಪಕ್ಷವಾಗಿದ್ದು ರೈತರ ಸಾಲ ಮನ್ನಾ ಸೇರಿದಂತೆ ಇತರ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಈ ಬಾರಿ ರಾಣೆಬೆನ್ನೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಅಸಂಖ್ಯಾತರು ಭರವಸೆ ನೀಡಿದ್ದಾರೆಂದು  ಹೇಳಿದರು. 

ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ ವಿಧಾನಸಭೆ, ಲೋಕಸಭೆ, ಜಿ.ಪಂ, ತಾಪಂ, ಗ್ರಾಪಂ, ನಗರಸಭೆ ಸೇರಿದಂತೆ ಬಿಜೆಪಿಯ ಅಭ್ಯಥರ್ಿಯ ಗೆಲುವಿಗಾಗಿ ಸ್ವಂತ ಹಣ ಖರ್ಚು  ಮಾಡಿ ಅವರ ಗೆಲುವಿಗೆ  ಶೃಮಿಸಿದ್ದೆ, ಆದರೆ ನನಗೆ ಬಹಳಷ್ಟು ಅನ್ಯಾಯ ಮಾಡಿದೆ ಎಂದು ಮಂಜುನಾಥ ಆರೋಪಿಸಿದರು. ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಭ್ರಷ್ಟಾಚಾರರಹಿತ ಮತ್ತು ಲಂಚದ ಹಾವಳಿ ತಪ್ಪಿಸಿ ಉತ್ತಮ ಆಡಳಿತ ಮಾಡುವುದರ ಮೂಲಕ ಜನರೊಂದಿಗೆ ಬೆರೆತು ಪ್ರಾಮಾಣಿಕ ಸೇವೆ ಮಾಡುವುದಾಗಿ ಅವರು  ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಮಹೇಶ ಹೊನ್ನಜ್ಜೇರ, ಶಶಿಕಲಾ ಗೌಡಶಿವಣ್ಣನವರ, ತಾಲೂಕ ಅಧ್ಯಕ್ಷ ಸುಭಾಷ್ ಗೌಡ ರಾಮಲಿಂಗಣ್ಣನವರ, ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಲಮಾಣಿ, ನಗರ ಅಧ್ಯಕ್ಷೆ ವಿದ್ಯಾ ಮಡಿವಾಳರ, ಬಸನಗೌಡ ಎಂ ಎ ಚೌದರಿ, ಮಲ್ಲಿಕಾರ್ಜುನ ಹಲಗೇರಿ , ಬಸವಣ್ಣೆಪ್ಪ ನಲವಾಗಲ, ಮಲ್ಲಿಕಾರ್ಜುನ ತಗ್ಗಿನ ಸೇರಿದಂತೆ ಜೆಡಿಎಸ್ಸಿನ ಜಿಲ್ಲಾ ,ತಾಲೂಕು, ನಗರ ಪದಾಧಿಕಾರಿಗಳು ಮುಖಂಡರು ಮತ್ತಿತರ ಗಣ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು. 

ವಿವಿಧ ಪಕ್ಷಗಳಿಂದ ಹೂರಬಂಧ 50ಕ್ಕೂ ಹೆಚ್ಚು ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ, ಅವರಿಗೆ ಪಕ್ಷದ ಶಾಲನ್ನು ಹೂದಿಸಿ, ಗೌರವಿಸಲಾಯಿತು 

ಸುದ್ದಿ ಓದಿ