ರಾಜಕೀಯ

ಬಿಜೆಪಿ ಗುಮ್ಮನ ತೋರಿಸಿ ಬ್ಲಾಕ್ಮೇಲ್ ಮಾಡುವ ಸಮ್ಮಿಶ್ರ ನಾಯಕರು ಸಂಪುಟ ವಿಸ್ತರಣೆಯದ್ರೂ ಕಡಿಮೆಯಾಗಲಿಲ್ಲ ಕಾಂಗ್ರೆಸ್ ಬೇಗುದಿ

ಬಿಜೆಪಿ ಗುಮ್ಮನ ತೋರಿಸಿ ಬ್ಲಾಕ್ಮೇಲ್ ಮಾಡುವ ಸಮ್ಮಿಶ್ರ ನಾಯಕರು  ಸಂಪುಟ ವಿಸ್ತರಣೆಯದ್ರೂ ಕಡಿಮೆಯಾಗಲಿಲ್ಲ ಕಾಂಗ್ರೆಸ್ ಬೇಗುದಿ

ಪಿನಾಕಪಾನಿ

ಅಪ್ಪಿ! ಚಿನ್ನೂ, ನನ್ನ ಬಂಗಾರ; ಸುಮ್ಮನಿರು, ತಗೋ, ತಿಂಡಿ ತಿನ್ನು, ಒಂದ್ ತುತ್ತು, ಎರಡ್ ತುತ್ತು, . . .  ಇದು ತಾಯಂದಿರು, ಅಜ್ಜಿಯಂದಿರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಊಟ ಮಾಡಿಸಲು ಮಾಡುವ ಕಸರತ್ತು. ಆಗೋ ಅಲ್ಲಿ, ಚಂದ್ರ ಮಾಮ, ಎಷ್ಟು ಚಂದ ಇದೆ, ಪಳಪಳ ಹೊಳೆಯೋ ಶುಕ್ರ ಗ್ರಹ ಅದು . . . ಎಂದು ಆಕಾಶದತ್ತ ತೋರಿಸುವ ತಾಯಂದಿರು ನಮ್ಮಲ್ಲಿದ್ದಾರೆ. ಅಂತೆಯೇ ನೋಡೀಗ, ಗುಮ್ಮ ಬರ್ತದೆ, ಅಮ್ಮ ಹೇಳ್ದಂಗೆ ಕೇಳ್ ದಿದ್ರೆ ಎತ್ಕೋಂಡ್ ಹೋಗ್ತದೆ; ಹುಷಾರ್, ಅಲ್ಲಿಗ್ ಹೋಗಬೇಡ, ಭೂತ ಇದೆ, ಕಚ್ ಬಿಡ್ತದೆ; ಏ, ಸುಮ್ಮನಿರು, ಎಷ್ಟು ಸಾರಿ ಹೇಳೋದ್, ನಾನ್ ಹೇಳ್ದಂಗೆ ಕೇಳ್ದಿದ್ರೆ ನೋಡು ಆಮೇಲೆ, ದೆವ್ವ ಬರ್ತದೆ, ಹೊಡತ್ ಹಾಕ್ತದೆ . . .  ಈ ಮಾತುಗಳೂ ರಾಜಧಾನಿಯ ಸುತ್ತಮುತ್ತಲ ಭಾಗದ ತಾಯಂದಿರು ಹೇಳುವ ಮಾತುಗಳು. ಇಂತಹ ಮಾತುಗಳು ಮತ್ತೆ ಮತ್ತೆ ಇದೀಗ ನೆನೆಪಾಗುತ್ತಿವೆ. ಏಕೆಂದರೆ ಕನರ್ಾಟಕವನ್ನು ಆಳುತ್ತಿರುವ ಸಮ್ಮಿಶ್ರ ನಾಯಕರು ನಡೆದುಕೊಳ್ಳುತ್ತಿರುವ ರೀತಿ, ಆಡುತ್ತಿರುವ ಮಾತುಗಳು, ಹಾಕುತ್ತಿರುವ ಹೆಜ್ಜೆಗಳು ತಾಯಂದಿರು ತೋರುವ ಗುಮ್ಮ, ಭೂತ, ದೆವ್ವಗಳ ರೀತಿ ಇವೆ. ಸಕರ್ಾರ ರಚನೆಯಾದಾಗಿನಿಂದಲೂ ಇವರಿಗೆ ಸಿಕ್ಕರುವುದು ಬಿಜೆಪಿ ಎಂಬ ಗುಮ್ಮ. ಸ್ಥಾನ ಸಿಗದವರೆಲ್ಲ ಬಿಜೆಪಿ ಗುಮ್ಮನನ್ನು ತೋರಿಸಿ ತಮ್ಮ ಕೆಲಸ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಇಂದು ಸಾದರ ಲಿಂಗಾಯತ ಟ್ರಂಪ್ಕಾಡರ್್ ಪ್ರಯೋಗಿಸಿರುವ ಬಿ.ಸಿ. ಪಾಟೀಲ್ ಎಂಬ ಮಾಜಿ ಪೋಲೀಸ್ ಅಧಿಕಾರಿ, ಹಾಲಿ ಹಿರೇಕೆರೂರು ಶಾಸಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾಗುತ್ತಿದೆ ಎನ್ನುವ ಸಾಮಾನ್ಯ ಅಂಶ ಅರಿವಾಗುತ್ತಲೇ ಯಡ್ಯೂರಪ್ಪ ನನಗೆ ಕರೆ ಮಾಡಿದ್ದರು, ಆಮಿಷ ಒಡ್ಡಿದ್ದರು ಎಂದು ಯಡ್ಡಿ ಗುಮ್ಮನನ್ನು ತೋರಿಸಿದ್ದರು. ಅಷ್ಟೇ ಅಲ್ಲ, ಈಗ ನಾನು ಲಿಂಗಾಯತ ಎನ್ನುವುದು ಅರಿವಾಯ್ತೆ ಎಂದು ಯಡ್ಯೂರಪ್ಪನವರ ಮೇಲೆ ಮುಗಿಬಿದ್ದರು. ಆ ತೀವ್ರತೆಯಿಂದ ಸಚಿವ ಸ್ಥಾನ ಗ್ಯಾರಂಟಿ ಎಂಬ ಹುಸಿ ಕನಸು ಅವರದಾಗಿತ್ತು. ಆದರೆ ಅವರ ಯಡ್ಡಿ ಗುಮ್ಮ ಇನ್ನೂ ಫಲಪ್ರದವಾಗಿಲ್ಲ. ಪಾಪ! ಅವರಿನ್ನೂ ಸಚಿವರಾಗಿಲ್ಲ, ಆದರೆ ಇದೀಗ ಅವರು ಬಿಜೆಪಿ ಗುಮ್ಮನ ತೋರಿಸುವಂತಿಲ್ಲ, ಆಗಾಗಿ ಈಗ ಅವರದು ಸಾದರ ಲಿಂಗಾಯತ ಗುಮ್ಮ! 

ಇನ್ನೂ ರಾಜಶೇಖರ ಪಾಟೀಲರು; ಹುಮ್ನಾಬಾದ್ ಶಾಸಕರು. ರೆಸಾಟರ್್ನಿಂದ ಒಂದು ದಿನ ಜಾಗ ಖಾಲಿ ಮಾಡಿದರು. ಬಿಜೆಪಿ ಗುಮ್ಮ ಅವರ ಮಡಿಲಲ್ಲಿತ್ತು. ಮಾಧ್ಯಮಗಳು ಪ್ರಶ್ನೆ ಹಾಕಿದಾಗ; ತಡಬಡಾಯಿಸಿ ಹಾರಿಕೆ ಉತ್ತರ ಕೊಟ್ಟರು. ಆಗಾಗಿ ಸಚಿವ ಸ್ಥಾನದ ಚಾಕೋಲೇಟ್ ಅವರನ್ನು ಅಪ್ಪಿಕೊಂಡಿತು. ಅವರು ಇದೀಗ ಸಚಿವರು. ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್; ತಾವು ಹಿರಿಯ ಶಾಸಕರು, ಈ ಸಿದ್ದರಾಮಯ್ಯ ನನಗೆ ಕೈ ಕೊಟ್ಟು, ಉತ್ತರ ಕನರ್ಾಟಕದ ಕುರುಬರನ್ನು ಬೆಳೆಸುತ್ತಿದ್ದಾನೆ ಎಂದು ಬಹಿರಂಗವಾಗಿ ತೋಡಿಕೊಂಡಿದ್ದರು. ಚೆನೈ ಪ್ರಯಾಣದ ಸುಳಿವನ್ನೂ ಈ ಹಿಂದೆಯೇ ನೀಡಿದ್ದರು. ಸ್ಥಾನ ಸಿಗದಿದ್ದರೆ ಖಾಲಿ ಗ್ಯಾರಂಟಿ ಎಂದು ಗುಟುರು ಹಾಕಿದ್ದರು. ಅಗಾಗಿ ಇವರು ಇದೀಗ ಸಚಿವರು. ಇನ್ನೂ ಅದ್ಭುತ ಎಂದರೆ ಜಾರಕಿಹೊಳೆ ಪಡೆ. ಡಿ.ಕೆ.ಶಿ. ಎಂಬ ಮೇಧಾವಿಯ ಪ್ರಭಾವವನ್ನು ಸಹಿಸಿಕೊಳ್ಳಲಾಗದೆ ಗುಡುಗುಡುತ್ತಿದ್ದ ಸಹೋದರರು ತೋರಿಸುತ್ತಿದ್ದದ್ದು ಬಿಜೆಪಿ ಗುಮ್ಮನನ್ನೇ! ಲಕ್ಷ್ಮಿ ಹೆಬ್ಬಾಳ್ಕರ್ ಎಂಬ ಹೆಣ್ಣು ಮಗಳು ಡಿಕೆಶಿ ಸಂಪರ್ಕದಲ್ಲಿ ಬೆಳೆದು ದೊಡ್ಡ ನಾಯಕಿಯಾಗುವ ಸರ್ವ ಲಕ್ಷಣಗಳು ತೋರುತ್ತಿದ್ದಾಗ ಗುಟುರು ಹಾಕಿದ ಜಾರಕಿಹೊಳಿ ಸಹೋದರರು ಸಕರ್ಾರದಲ್ಲಿ ತಮ್ಮ ಕೆಲಸಗಳನ್ನು ಚಕ್ ಎಂದು ಮಾಡಿಕೊಂಡರು. ಬಳ್ಳಾರಿಯಲ್ಲಿ ತಮ್ಮ ನೆಲೆ ಸ್ಥಾಪಿಸಲು ಹೆಣಗಾಡುತ್ತಿದ್ದಾಗ, ಮತ್ತೆ ಎದುರಾದ ಡಿಕೆಶಿಯನ್ನು ಮಣಿಸಲು ಸರ್ವಪ್ರಯತ್ನ ನಡೆಸಿ ವಿಫಲರಾದ ಜಾರಕಿಹೊಳಿ ಸೋದರರಿಗೆ ಟಾಂಗ್ ಕೊಟ್ಟಿದ್ದು ಶಿವಕುಮಾರರ ಲೀಲೆ! ಸ್ವಸ್ಥಳ ಬೆಳಗಾವಿಗೇ ಬಂದು, ಉಪವಾಸ ಕುಳಿತಿದ್ದ ರೈತರಿಗೆ ನಿಂಬೆಪಾನಕ ನೀಡಿ ಯಶಸ್ವಿ ಕಾಯರ್ಾಚರಣೆ ಮಾಡಿದ ಡಿಕೆಶಿ ವಿರುದ್ದ ಏನೂ ಕಿಸಿಯಲಾಗದ ಜಾರಕಿಹೊಳಿ ಸಹೋದರರು ಇದೀಗ ವಿಭಿನ್ನ. ಅಣ್ಣತಮ್ಮ ಒಂದಾಗಿ ಕೊಡುತ್ತಿದ್ದ ಫೋಸ್ ಈಗ ಇಲ್ಲ. ಅಣ್ಣನನ್ನು ಚ್ಯುತಗೊಳಿಸಿ ತಮ್ಮನಿಗೆ ಗದ್ದಿಗೆ ನೀಡಿದ ಸಕರ್ಾರದ ನಡೆಗೆ ಇದೀಗ ಅಣ್ಣ ರಮೇಶ್ ಜಾರಕಿಹೊಳಿ ಸಿಡಿಸಿಡಿಯಾಗಿದ್ದಾರೆ. ಆಗಾಗಿ ಅವರಿಗೆ ಈಗ ಬಿಜೆಪಿ ಬರೀ ಗುಮ್ಮ ಮಾತ್ರವಲ್ಲ; ಅದು ಭೂತವೂ ಹೌದು, ದೆವ್ವವೂ ಹೌದು; ಇದೀಗ ದೇವರೂ ಕೂಡಾ! ಆಗಾಗಿ ರಮೇಶ್ ಜಾರಕಿಹೊಳಿ ಪೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ, ಸ್ವಂತ ತಮ್ಮನಿಗೆ, ನಾಯಕ ಸಿದ್ದರಾಮಯ್ಯನವರಿಗೆ ಕೂಡ ಅವರನ್ನು ಸಂಪಕರ್ಿಸಲು ಆಗುತ್ತಿಲ್ಲ ಆದರೆ ಅದೇ ಜಾರಕಿಹೊಳಿ ಮರಾಠ ಸಾಮ್ರಾಟ ಫಡ್ನವೀಸರ ಬಳಿ ಇದ್ದಾರೆ. ನೇರವಾಗಿ ಶಿವಾಜಿ ನೆಲೆಯಿಂದ ಕೆಂಪೇಗೌಡನ ನೆಲೆಗೆ ಬರುತ್ತಾರಂತೆ! ಇದೂ ಬಿಜೆಪಿ ಗುಮ್ಮನ ಮಹಿಮೆ. 

ಇನ್ನು, ರಮೇಶ್ರಂತೆ ಆರು ತಿಂಗಳಿಗೆ ಮಾಜಿಯಾದ ಬೆಂಗಳೂರು ಮಹಾನಗರಪಾಲಿಕೆ ಮಾಜಿ ಉಪ ಮೇಯರ್, ರಾಣಿಬೆನ್ನೂರಿನ ಹಾಲಿ ಶಾಸಕ ಶಂಕರ್ ಇದೀಗ ಮತ್ತೆ ಬಿಜೆಪಿ ಗುಮ್ಮನ ಸೆರಗು ಹಿಡಿದಿದ್ದಾರೆ. ನಾನು ಮಾಡಿದ ಪಾಪವಾದರೂ ಏನು? ಎನ್ನುವುದು ಅವರ ಪ್ರಶ್ನೆ? ಪಾಪ! ಅವರಿಗೆ ಮರೆತುಹೋಗಿದೆ. ಗೆದ್ದ ತಕ್ಷಣ ಅವರು ಹೋಗಿದ್ದು ಈಶ್ವರಪ್ಪನವರ ಸೆರಗಿಗೆ! ಆದರೆ ಅದು ಹಾಲಿಲ್ಲದ ಸೆರಗು ಎನ್ನುವುದು ಅರಿವಾಗುತ್ತಲೇ, ಸೀಮೆಹಸುವಿನ ಕೆಚ್ಚಲುಗಳಂತೆ ಕಂಡ ಕಾಂಗ್ರೆಸ್ಗೆ ಬಂದರು. ಕೈ ಹಿಡಿದರು. ಆದರೆ; ಅದೃಷ್ಟ ಕೈ ಕೊಟ್ಟಿತು! ಇದೀಗ ಮತ್ತೆ ಬಿಜೆಪಿ ಗುಮ್ಮನದೇ ಅವರ ನೆನಪು!

ಮತ್ತೊಂದು ಸೀಮೆಹಸು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ. ಅದರ ಅಧ್ಯಕ್ಷತೆಗೆ ಕೋಟಿಕೋಟಿಗಳು ಓಡುತ್ತವೆ! ಸಕತ್ತಾದ ಸೀಮೆ ಅದು! ಸದಾ ಗುಟುರು ಹಾಕುತ್ತಿದ್ದ ಶಾಸಕ ಸುಧಾಕರರನ್ನು ಕಟ್ಟಿಹಾಕಲು ಕಾಂಗ್ರೆಸ್ ಕೊಡಬಯಸ್ಸಿದ್ದು ಈ ಸೀಮೆ ನಿಯಂತ್ರಣ ಮಂಡಳಿಯನ್ನು. ಆದರೆ ಪಾಪ! ಸುಧಾಕರ್ಗೆ ಯಾಕೋ ಅದೃಷ್ಟ ಇಲ್ಲ! ನಿಯಮಗಳ ಕಾರಣವೊಡ್ಡಿ ಜೆಡಿಎಸ್ ಇದಕ್ಕೆ ತಡೆ ಒಡ್ಡಿದೆ. ಏಕೆಂದರೆ ಇದು ಸಮೃದ್ದ ಹುಲ್ಲುಗಾವಲು. ಅದಕ್ಕಾಗಿಯೇ ಜೆಡಿಎಸ್ನಲ್ಲಿ ಒಂದು ದೊಡ್ಡ ಪ್ರಾಣಿ, ತಿನ್ನುವುದೇ ಅದರ ಮೂಲ ಮತ್ತು ಪೂರ್ಣ ಕಸುಬು. ಮುಕ್ತ ವಿಶ್ವವಿದ್ಯಾಲಯವನ್ನು ಮೇದ ಆ ಸೀಮೇಹಸು ಇದೀಗ ಪರಿಸರಕ್ಕೆ ಕಾಲಿಡಲು ಕಾಯುತ್ತಿದೆ. ಹಾಗಾಗಿ ಮತ್ತೆ ಇದೀಗ ಸುಧಾಕರರದು ಬಿಜೆಪಿ ಗುಮ್ಮ! ಏಕೆಂದರೆ ಒಕ್ಕಲಿಗರ ಪ್ರಾಬಲ್ಯದ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಜೆಡಿಎಸ್ ಶಾಸಕರೇ ಇಲ್ಲ, ಅಲ್ಲಿ ಗೆದ್ದಿರುವುದು ಕಾಂಗ್ರೆಸ್ ಒಕ್ಕಲಿಗರು - ರೆಡ್ಡಿಗಳು. ಅವರಿಗೆ ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ. ಹಾಗಾಗಿ ಸುಧಾಕರ್ ಬಿಜೆಪಿಗೆ ಬಂದರೆ ಭರ್ಜರಿ ಖಾತೆ ಗ್ಯಾರಂಟಿ ಎನ್ನುವುದು ಅವರ ಅಭಿಮಾನಿಗಳ ಮನದಾಳದ ಮಾತುಗಳು. 

ಇನ್ನೂ ಕಾರವಾರ ಭಾಗದಲ್ಲಿ ಕಾಯುತ್ತಲೇ ಇರುವ ಸಜ್ಜನ ಶಿವರಾಮ ಹೆಬ್ಬಾರರು, ಶಿವಮೊಗ್ಗದಲ್ಲಿ ಹೆಚ್ಚು ಓಟು ಕೊಡಿಸಿ ಕಾದಿರುವ ಸಂಗಮೇಶ್ವರರು ಬಿಜೆಪಿ ಗುಮ್ಮನನ್ನು ತೋರಿಸಿಲ್ಲ. ಆದರೂ ಸಿಸರ್ಿ ಭಾಗದಲ್ಲಿ ಕಮಲದ ಕಂಪಿದೆ ಎನ್ನುತ್ತಾರೆ ರಾಜಕೀಯ ವಿಮರ್ಶಕರು. ರಾಜಧಾನಿಯಲ್ಲಿ ಸತತವಾಗಿ ಗೆಲ್ಲುತ್ತಾ, ಬಿಜೆಪಿ ಹೃದಯವಾಗಿದ್ದ ಜಯನಗರದಲ್ಲಿಯೂ ಕೈಯ ವಿಜಯಪತಾಕೆ ಹಾರಿಸಿ ಮಗಳನ್ನು ಗೆಲ್ಲಿಸಿಕೊಂಡು ಬಂದ ರಾಮಲಿಂಗರೆಡ್ಡಿ ಮಾತ್ರ ಇದಕ್ಕೆ ಅಪವಾದ! ಅವರಲ್ಲಿ ಗುಮ್ಮನ ಪಾತ್ರವಿಲ್ಲ. ಏಕೆಂದರೆ ಅವರದು ಕಾಂಗ್ರೆಸ್ ರಕ್ತ. ಅವರ ತಂದೆ ಕಾಂಗ್ರೆಸ್ ಪಕ್ಷದಿಂದ ಕಾಪರ್ೊರೇಟರ್ ಆಗಿದ್ದವರು. ರೆಡ್ಡಿ ಅವರೂ ಸಹ ಮೊದಲಿಗೆ ಬೆಂಗಳೂರು ಮಹಾನಗರಪಾಲಿಕೆ ಸದಸ್ಯರು. ಆನಂತರ ಸತತವಾಗಿ ವಿಧಾನಸಭಾ ಸದಸ್ಯರು. ತೃಪ್ತರಾದರೂ ಅತೃಪ್ತರೂ. ಕಾಂಗ್ರೆಸ್ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿದಾಗಲೆಲ್ಲ ಅವರ ಶಿಷ್ಯಕೊಟಿಯೇ ಮೇ-ಯರ್ಗಳು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರುಗಳು. ಸೀನಿಯರ್ ಲೆಕ್ಕಾಚಾರದಲ್ಲಿ ದೇಶಪಾಂಡೆಗೆ ಅಧಿಕಾರ, ನನಗಿಲ್ಲ; ಆ ಜೂನಿಯರ್ ಕೃಷ್ಣಬೈರೇಗೌಡರಿಗೆ ಅಧಿಕಾರ, ನನ್ನದಿಲ್ಲ. ಜಾಜರ್್, ಡಿಕೆಶಿ ಸಹ ಸೀನಿಯರ್. ಅವರುಗಳಿಗೆ ಒಂದು ಲೆಕ್ಕ, ನನಗೆ ಮಾತ್ರ ಇನ್ನೊಂದು ಲೆಕ್ಕವೇ? ರಾಮಲಿಂಗರೆಡ್ಡಿ ಅವರ ಪ್ರಶ್ನೆ. ಅವರ ಸ್ವಕ್ಷೇತ್ರ ಬರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರರು ಸದಾ ವಿಜಯಶಾಲಿಗಳಾಗಿದ್ದರು? ಇದೀಗ ಏನು? ಎಂಬುದು ಎಲ್ಲರ ಪ್ರಶ್ನೆ. 

. . . . ಇದೆಲ್ಲಾ ಕಾಂಗ್ರೆಸ್ ಅತೃಪ್ತರು ಬಿಜೆಪಿ ಎಂಬ ಗುಮ್ಮನ ತೋರಿಸಿ ನಡೆಯುವ ಪರಿಯಾಯ್ತು? ಆದರೆ ರಾಜಧಾನಿಯ ರಾಜಕೀಯ ಪಂಡಿತರಲ್ಲಿ ಈಗ ಜೆಡಿಎಸ್ ಅಧಿಕಾರಸ್ಥರೂ ಸಹ ಬಿಜೆಪಿ ಗುಮ್ಮನನ್ನು ತೋರಿಸಿ ಕೈಯನ್ನು ಹೆದರಿಸುತ್ತಿದ್ದಾರೆಂಬ ಗುಲ್ಲು ಹರಡಿದೆ. ಮೋದಿಯವರನ್ನು ಬಾಯಿಗೆ ಬಂದಂತೆ ಬೈದಿದ್ದ ಕುಮಾರಸ್ವಾಮಿ ಸಂಗಡಿಗರು ಇದೀಗ ನವದೆಹಲಿಯಲ್ಲಿ ಮೋದಿಗೆ ಪೇಟ ತೊಡಿಸಿ ಶಾಲು ಹೊದಿಸಿ ಅಪ್ಪಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇನೋ ದೇಶದ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಸಲ್ಲಬೇಕಾಗಿರುವ ಅನುದಾನಗಳ ಕುರಿತು ಮನವಿ ಮಾಡಿದರು. ಆದರೆ ಅವರು ಜೊತೆ ಯಾವ ಕಾಂಗ್ರೆಸ್ ಸಚಿವರೂ ಇರಲಿಲ್ಲ. ಇದ್ದದ್ದು ಅಘೋಷಿತ ಮುಖ್ಯಮಂತ್ರಿ ಹೆಚ್.ಡಿ. ರೇವಣ್ಣ. ಇಬ್ಬರೂ ಪ್ರಧಾನಿ ಮಾತ್ರವಲ್ಲ, ಬಿಜೆಪಿ ಚಾಣಕ್ಯ ಅಮಿತ್ ಷಾಗೆ ಆಪ್ತರಾದ ಕೇಂದ್ರ ಸಚಿವ ಪಿಯೂಷ್ ಗೋಯಲರನ್ನು ಸಂಧಿಸಿದ್ದಾರೆ; ಮತ್ತೊಬ್ಬ ಮೋದಿ ಆಪ್ತ ಅರುಣ್ ಜೈಟ್ಲಿಯವರನ್ನು ಕಂಡಿದ್ದಾರೆ. ನೀವು ಕೈ ಕೊಟ್ಟರೆ ನಾವು ಕಮಲಾರಕ್ಷೆಯಲ್ಲಿ! ಇದು ಅಣ್ಣತಮ್ಮಂದಿರ ಬಿಜೆಪಿ ಗುಮ್ಮ. ಇನ್ನೂ ಮಹಾಘಟಬಂಧನ ಒಡೆದು ದೆಹಲಿ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಯಾವ ತ್ಯಾಗಕ್ಕಾದರೂ ಸಿದ್ದರಿರುವ ಮೋದಿಪಡೆ; ಯಡಿಯೂರಪ್ಪ ಎಂಬ ಹುಂಬನಿಗೆ ಕೈಕೊಟ್ಟು ತಮ್ಮ ತಲೆಪೇಟವನ್ನು ಸರಿಪಡಿಸಿಕೊಳ್ಳಲು ತಯಾರಿದ್ದಾರೆ. ಏಕೆಂದರೆ ಬಿಜೆಪಿಗೆ ಯಡ್ಯೂರಪ್ಪ ಒಂದು ಮುಖವಾಡವಷ್ಟೇ; ಮುತ್ಸದಿಯಲ್ಲ. ಸುಮ್ಮನೆ ಲಿಂಗಾಯತ ವೀರಶೈವರ ಓಟಿಗಾಗಿ ಯಡ್ಯೂರಪ್ಪ; ಇಲ್ಲದಿದ್ದರೆ ಅವರಿಗೂ ಅಡ್ವಾನಿಗಾದ ಗತಿಯೇ! ಹಾಗಾಗಿ ಇದೀಗ ಜೆಡಿಎಸ್ ನವರದೂ ಬಿಜೆಪಿ ಗುಮ್ಮ; ಕೈನ ಕಡೆಗೆ!

ಜಾತ್ಯತೀತ ವರಿಷ್ಟ ನಾಯಕ ದೇವೇಗೌಡರೇ ಅಸಂತುಷ್ಟರಾಗಿದ್ದಾರೆ. 37 ಮಾಕ್ಸರ್್ ತೆಗೆದುಕೊಂಡು ಗೋಲ್ಡನ್ನು ಜೇಬಿಗಿಳಿಸಿಕೊಂಡ ಜೆಡಿಎಸ್; ಪ್ರಥಮದಜರ್ೆಯಲ್ಲಿ 70 ಅಂಕ ಗಳಿಸಿದ ಕಾಂಗ್ರೆಸ್ನವರು ಮುಖ್ಯಮಂತ್ರಿಗೆ ರಾಜಕೀಯ ಕಾರ್ಯದಶರ್ಿ ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಜೆಡಿಎಸ್ಗೆ ಕಾಂಗ್ರೆಸ್ ಕಾರ್ಯದಶರ್ಿಯೇ? ಅವರ ಪ್ರಶ್ನೆ. ಇನ್ನೂ ನಿಗಮ ನೇಮಕಗಳು ಅವರನ್ನು ಮತ್ತಷ್ಟು ಅಸಂತುಷ್ಟಿಗೊಳಿಸಿವೆ. ಯಾರನ್ನು ಕೇಳಿ ನೇಮಕ ಮಾಡಿದಿರಿ? ಅವರ ಪ್ರಶ್ನೆ. ಈ ಹಿಂದೆ ನವದೆಹಲಿಯ ಪ್ರತಿನಿಧಿಯಾಗಿ ತಮ್ಮ ಪರಾಜಿತ ಅಭ್ಯಥರ್ಿಯನ್ನು ನೇಮಕ ಮಾಡಿದ್ದನ್ನು ಮರೆಯುವ ಜೆಡಿಎಸ್ ಜನ; ಇದೀಗ ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅದು ಹೇಗೇ ಮಾಡುತ್ತಾರೋ ನೋಡೋಣ ಎಂದು ಪ್ರಶ್ನೆ ಮಾಡುವ ಅಘೋಷಿತ ಮುಖ್ಯಮಂತ್ರಿ ಹೆಚ್.ಡಿ. ರೇವಣ್ಣ ತಾವು ಇತರ ಇಲಾಖೆಗಳ ವಗರ್ಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಾರೆ ಎಂದರೆ; ಅದು ಮೈತ್ರಿಯ ಪರಮೋಅಧರ್ಮ  ಎಂದು ಪಕ್ಕಾ ಕಾಂಗ್ರೆಸ್ಸಿಗರು ಅಣಕವಾಡುತ್ತಾರೆ. ಸೂರ್ಯನ ಬೆಳಕಿನಂತೆ ಕಂಗೊಳಿಸುವ ರೇವಣ್ಣನವರ ತೆನೆಗೆ ಸಾಕ್ಷಿ ಬೇಕೆ? ಎನ್ನುವುದು ಅವರ ಪ್ರಶ್ನೆ. 

ಇನ್ನೂ ಕಾಂಗ್ರೆಸ್ಸಿನಲ್ಲಿಯಂತೂ ಬೇಗುದಿ ತಾರಕಕ್ಕೇರಿದೆ! ಖಾತೆ ಹಂಚಿಕೆಯ ವಿಳಂಬವೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ರಾಜಧಾನಿಯ ರಾಜಕೀಯ ವಿಮರ್ಶಕರು. ಗಜಪ್ರಸವದಂತೆ ಆದ ಸಂಪುಟ ವಿಸ್ತರಣೆಯ ನಂತರದ ಬೆಳವಣಿಗಳು ಕಾಂಗ್ರೆಸ್ಸಿಗೆ ಪೂರಕವಂತೂ ಅಲ್ಲ ಎನ್ನುತ್ತಾರೆ ಪಕ್ಕಾ ಕಾಂಗ್ರೆಸ್ಸಿಗರು. ಯಾರು ವಿಸ್ತರಣೆ ಮಾಡಿದ್ದರೋ; ಅವರೇ ಬೇಗುದಿ ಸರಿಪಡಿಸುತ್ತಾರೆ! ಎಂಬ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾಜರ್ುನ ಖಗರ್ೆ ಅವರ ಮಾತು ಇದಕ್ಕೆ ಸಾಕ್ಷಿಯಾಗಿದೆ. ಗೃಹ ಖಾತೆ ಬಿಟ್ಟುಕೊಡದ ಪರಮೇಶ್ವರ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರ ನಡುವೆ ಭೀಕರ ವಾಕ್ಸಮರ ನಡೆದದ್ದು ಗೋಡೆಯ ಮೇಲಿನ ಬರಹದಷ್ಟೇ ಸತ್ಯವಾದರೂ, ಪತ್ರಿಕಾಗೋಷ್ಠಿಯಲ್ಲಿ ನಗೆಮೊಗದ ಮುಖವಾಡ ಧರಿಸಿ ಸುಳ್ಳಿನ ಕಂತೆ ಬಿಚ್ಚಿಡುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಧ್ಯಮಗಳನ್ನು ದೂರುತ್ತಾರೆ. ರೇವಣ್ಣ 'ದಲಿತ ಡಿಸಿಎಂ ಕಾಂಗ್ರೆಸ್ಸಿಗೆ ಇಷ್ಟವಿಲ್ಲ ಎಂದರೆ, ತಾವು ಸಚಿವ ಸ್ಥಾನದಿಂದ ಚ್ಯುತವಾಗಿರುವುದೂ ಸ್ವತಃ ದೇವೇಗೌಡರದಿಂದಲೇ ಎನ್ನುವುದು ಗೊತ್ತಿದ್ದರೂ, ಹಿರಿಯ ನಾಯಕ ಬಸವರಾಜ ಹೊರಟ್ಟಿ ಅದನ್ನು ಸಿದ್ದರಾಮಯ್ಯ ಹೆಗಲಿಗೆ ಜಾರಿಸಿ, ದೂರ ಇಟ್ಟರೂ ಹತ್ತಿರವಾಗುವ ಇರಾದೆ ತೋರುತ್ತಾರೆ. ತಮ್ಮ ಸ್ವಸಾಮಥ್ರ್ಯದಿಂದ ಸತತವಾಗಿ ಆರನೇ ಬಾರಿ ವಿಜಯಶಾಲಿಯಾಗಿದ್ದರೂ ಗೌಡಮಕ್ಕಳ ಮುಂದೆ ಸೇವಕರಾಗಿ ಕೈಕಟ್ಟಿ ನಿಲ್ಲುವ ಬಸವರಾಜ ಹೊರಟ್ಟಿಯವರನ್ನು ಕಂಡು ಧಾರವಾಡದ ಜನ ಮಮ್ಮಲ ಮರಗುತ್ತಿದ್ದಾರೆ ಎನ್ನುತ್ತಾರೆ ಹುಬ್ಬಳಿ ವಿಮರ್ಶಕರು. 

ಅಂತೂ ದೆಹಲಿ ಗದ್ದುಗೆ ಮೇಲೆ ಕಣ್ಣಿಟ್ಟು ಬಿ ಟೀಂ ಜೆಡಿಎಸ್ಗೆ ಮುಖ್ಯಮಂತ್ರಿ ಕುಚರ್ಿ ನೀಡಿ ಕೈಕಟ್ಟಿ ನಿಂತಿರುವ ರಾಹುಲ್ ಪಡೆ ಒಂದು ಕಡೆಯಾದರೆ, ವಿರೋಧಪಕ್ಷಗಳ ಮಹಾಘಟಬಂಧನವನ್ನು ಯಾವ ತ್ಯಾಗದಿಂದಲಾದರೂ ಒಡೆಯಲು ಸನ್ನದ್ದರಾಗಿ ಜೆಡಿಎಸ್ಗೆ ಚಿನ್ನದ ತಟ್ಟೆ ನೀಡಲು ಸಜ್ಜಾಗಿರುವ ಮೋದಿಷಾ ಇನ್ನೊಂದು ಕಡೆ ಇದ್ದಾರೆ. ಇವರುಗಳ ನಡುವೆ ಜನಸಾಮಾನ್ಯರು ತಮ್ಮ ಬದುಕು ಸಾಗಿಸಲು ನಿತ್ಯ ಕಷ್ಟ ಪಡುತ್ತಿದ್ದಾರೆ. ಸ್ಥಾನಕ್ಕಾಗಿ ರಾಜಕಾರಣಿಗಳ ಬೇಗುದಿ ಒಂದು ಕಡೆಯಾದರೆ; ಮಾನಕ್ಕಾಗಿ ಶ್ರೀಸಾಮಾನ್ಯರ ಕಷ್ಟಗಳು ಇನ್ನೊಂದೆಡೆ ಇವೆ.

 

ಸುದ್ದಿ ಓದಿ