ರಾಜಕೀಯ

ಲಜ್ಜೆಗೆಟ್ಟವರು; ಮಾನ ಮಯರ್ಾದೆ ಬಿಟ್ಟವರು; ನಮ್ಮ ನಮ್ಮ ಶಾಸಕರು

ಲಜ್ಜೆಗೆಟ್ಟವರು; ಮಾನ ಮಯರ್ಾದೆ ಬಿಟ್ಟವರು; ನಮ್ಮ ನಮ್ಮ ಶಾಸಕರು


ಎಂತಹ ಅದ್ಭುತ ಮಾತುಗಳು! ಕೇಳಲೂ ಇಂಪು, ನೋಡಲಂತೂ ಸವಿಗಂಪು. ನಮ್ಮ ಮುಖಂಡರುಗಳು ಅಧಿಕಾರದ ಗದ್ದುಗೆಗಾಗಿ ಆಡುತ್ತಿರುವ ನಾಟಕಗಳು, ಹೇಳುತ್ತಿರುವ ಮಾತುಗಳು ಬಹು ಸೊಗಸು. ಕನ್ನಡದ ಜನ ನಿಜಕ್ಕೂ ಪುಣ್ಯಶಾಲಿಗಳು; ಇಂತಹ ಸೊಗಸುಗಾರರನ್ನು ಪಡೆದ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ. 

ಸ್ಪಷ್ಟ ಬಹುಮತವಿಲ್ಲದೆ ಹೊರಬಿದ್ದ ಫಲಿತಾಂಶದ ಪ್ರತಿದಿನವೂ ಕನರ್ಾಟಕದಲ್ಲಿ ನಾಟಕ ನಡೆಯುತ್ತಿದೆ; ಯಾರು! ಎಲ್ಲಿ! ಏನು? ಎಂಬ ಅಸ್ಪಷ್ಟ ಸ್ಥಿತಿ ಪ್ರತಿವಾರವೂ ಕಾಣುತ್ತಿದೆ. ಕುಚರ್ಿಯನ್ನು ಹಿಡಿಯುವ ಆತುರದಲ್ಲಿ ನಮ್ಮ ನಾಯಕರುಗಳು ತಮ್ಮನ್ನು ತಾವೇ ಮರೆತುಬಿಟ್ಟಿದ್ದಾರೆ; ಎಲ್ಲರ ಗೋಲು ಒಂದೇ, ವಿಧಾನಸೌಧದ ಮೂರನೇ ಮಹಡಿಯ ಕುಚರ್ಿ ಹಿಡಿಯುವುದು. ಹಾಗಾಗಿ ಆಡಬಾರದ ಆಟಗಳು, ನೋಡಬಾರದ ನೋಟಗಳನ್ನು ನಮ್ಮ ವಿದ್ಯುನ್ಮಾನ ವಾಹಿನಿಗಳು ತೋರಿಸುತ್ತಿವೆ. ಅಲ್ಲಿಯ ನಿರೂಪಕರು ತಾವೇ ಸ್ವಯಂ ನ್ಯಾಯಾಧೀಶರಾಗಿ, ತಮಗೆ ಕುಚರ್ಿ ದಯಪಾಲಿಸಿ ಧ್ವನಿವರ್ಧಕವನ್ನು ನೀಡಿರುವ ಮಾಲೀಕರ ಮಜರ್ಿಗನುಗುಣವಾಗಿ ತಾವೇ ವಿಶ್ಲೇಷಿಸುತ್ತಾರೆ; ತಮಗೆ ಬೇಕಾದವರ ಮುಖವನ್ನು ತೋರಿಸಿ ಬ್ರೇಕಿಂಗ್ ನ್ಯೂಸ್ಗಳ ನಡುವೆ ನಮ್ಮನ್ನು ಮತ್ತಷ್ಟು ದಮನೀಯರನ್ನಾಗಿಸುತ್ತಿದ್ದಾರೆ. 

ಸತ್ತರೂ ಮುಖ್ಯಮಂತ್ರಿಯಾಗಲ್ಲ! ಅವರಪ್ಪರಾಣೆ ಅವನು ಮುಖ್ಯಮಂತ್ರಿಯಾಗಲ್ಲ; ಇದು ಚುನಾವಣೆಗೆ ಮುಂಚೆ ನಮ್ಮ ಪ್ರಮುಖ ರಾಜಕೀಯ ನಾಯಕರು ಹೇಳುತ್ತಿದ್ದ ಮಾತು. ಅವರಪ್ಪರಾಣೆ ಹೇಳಿದವರೇ ಅಪ್ಪನ ಬಳಿಗೆ ಹೋಗಿ ಮಗ ಮುಖ್ಯಮಂತ್ರಿಯಾಗಲು ಬೇಷರತ್ತು ಬೆಂಬಲ ಸೂಚಿಸಿ ಟವಲ್ ಹಾಸಿದ ಕ್ಷಣ! ನಾಡಿಗರಿಗೆ ವಿಶೇಷ ಮನರಂಜನೆ. ಮೋದಿಯೆಂಬ ಮಹಾಪ್ರಭುವನ್ನು ಮಣಿಸಲು 'ಬಿ ಟೀಮ್ ಎಂದು ಸ್ವತಃ ಕರೆದ ಯುವರಾಜ ರಾಹುಲ್, ಕೊನೆಗೆ ಅದೇ ಬಿ ಟೀಮ್ನ ಅಪ್ಪಮಕ್ಕಳಿಗೆ ಹಸಿರು ತೋರಣ ಹಾಸಿ ಹೂಗಳನ್ನು ಅಲಂಕರಿಸಿ ಮುಖ್ಯಮಂತ್ರಿ ಕುಚರ್ಿ ಕೊಟ್ಟ ಸಂದರ್ಭವದು. ಅಂದಿನಿಂದ ಇಂದಿನವರೆಗೂ ತೆರೆಮರೆಯ ಮಸುಕು ನಡೆಯುತ್ತಲೇ ಇದೆ. ಮಾಜಿ ಮಿತ್ರರು ಹಾಲಿ ಮಿತ್ರರಾಗಿ ಬಾಂಧವ್ಯ ಕುದುರಿದಂತೆ ತೋರಿಕೆ ಕೊಟ್ಟರೂ, ಒಳಗಿನ ಮುಸುಕು ಮರೆಯಾಗಿಲ್ಲ. ಅದರ ಪರಿಣಾಮವೇ ಈ ಭಯಂಕರ ರೆಸಾಟರ್್ ರಾಜಕೀಯ. ಲೋಕಸಭಾ ಚುನಾವಣೆವರೆಗೆ ಮುಂದೂಡಬಹುದಾಗಿದ್ದ ಸಂಪುಟ ವಿಸ್ತರಣೆಯನ್ನು ಬೇಕೆಂತಲೇ ಮುನ್ನವೇ ಮಾಡಿಸಿ ತಮ್ಮ ಶಿಷ್ಯರುಗಳ ಕೈಯ್ಯಿಂದಲೇ ಬಂಡಾಯ ಬಾವುಟ ಹಾರಿಸಿ, ಕೊನೆಗೆ ತಾವೇ ಕರೆಮಾಡಿ ಸಂತೈಸಿದಂತೆ ನಾಟಕ ಮಾಡುತ್ತಿರುವ ಸಮಾಜವಾದಿ ಸಿದ್ದರಾಮಯ್ಯ ಭಯಂಕರ ಮಾತನಾಡುತ್ತಿದ್ದಾರೆ. ಮಾತನಾಡುವುದು ಇದೀಗ ಅನಿವಾರ್ಯ. ಏಕೆಂದರೆ ಹೈಕಮಾಂಡೂ ಅವರನ್ನು ನೋಡುತ್ತಿದೆ, ಮೈತ್ರಿ ಪಕ್ಷವೂ ಕೂಡ ಗಮನಿಸುತ್ತಿದೆ. ಹಾಗಾಗಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿಂತ ಹತ್ತು ಹೆಜ್ಜೆ ಮುಂದೆ ಹೋಗಿ, ತಮ್ಮ ಸ್ಥಾನಮಾನವನ್ನೇ ಮರೆತು ಮಾತನಾಡುತ್ತಿದ್ದಾರೆ. ಹಾಗಾಗಿಯೇ ಈ ಅಣಿಮುತ್ತುಗಳು - ಲಜ್ಜೆಗೆಟ್ಟವರು, ಮಾನ ಮಯರ್ಾದೆ ಬಿಟ್ಟವರು, ಸತ್ತರೂ ಮುಖ್ಯಮಂತ್ರಿಯಾಗುವುದಿಲ್ಲ, ವಯಸ್ಸಾಯ್ತು, ಆದ್ರೂ ಬುದ್ದಿ ಬರಲಿಲ್ಲ . . . ಮೊದಲಾದ ಅಮೂಲ್ಯ ಮಣಿಮುತ್ತುಗಳನ್ನು ಸಿದ್ದರಾಮಯ್ಯ ಉದುರಿಸುತ್ತಿದ್ದಾರೆ. ತಮ್ಮ ಎಂದಿನ ಶೈಲಿಯನ್ನು ಕಾಪಾಡಿಕೊಳ್ಳುವ ಭರಾಟೆಯಲ್ಲಿದ್ದಾರೆ. ತಮ್ಮ ಆಪ್ತ ಶಿಷ್ಯ ಬಸವಕಲ್ಯಾಣದ ನಾರಾಯಣರಾವ್ರನ್ನು 'ಹೇ, ನಾರಾಯಣರಾವ್, ಎಲ್ಲಿದ್ದಿಯಾ, ಜಲ್ದಿ ಬಾ . .' ಎಂದು ಮೊಬೈಲ್ನಲ್ಲಿ ಕೂಗಿ ಕರೆಯುವ ನಾಟಕ ಮಾಡುತ್ತಿದ್ದಾರೆ. ಇದೀಗ ಬಂಡಾಯದ ಬಾವುಟ ಹಾರಿಸಿರುವ ಎಲ್ಲರೂ ಸಿದ್ರಾಮಯ್ಯನವರ ಆಪ್ತವಲಯದವರೇ! ಸ್ವತಃ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಆಪ್ತರಾದರೆ, ಇದೀಗ ಮತ್ತೆ ಸಿಎಲ್ಪಿಯಲ್ಲಿ ಪ್ರತ್ಯಕ್ಷವಾಗಿರುವ ಹೊಸಪೇಟೆಯ ಆನಂದ ಸಿಂಗ್ ಸಿದ್ದರಾಮಯ್ಯನವರ ಆತ್ಮೀಯ ಆಮಂತ್ರಣಕ್ಕೆ ಮನಸೋತು ಬಿಜೆಪಿಗೆ ಬಂದವರು. ಬಳ್ಳಾರಿಯ ಮತ್ತೊಬ್ಬ ಅದ್ಭುತ ಶಾಸಕ ನಾಗೇಂದ್ರ ಸಹ ಸಿದ್ದರಾಮಯ್ಯನ ಆಹ್ವಾನಕ್ಕೆ ಕಾಂಗೈಗೆ ಬಂದವರು. ಇನ್ನೂ ಬಳ್ಳಾರಿಯ ಮತ್ತೊಬ್ಬ ಭೀಮಾನಾಯ್ಕ, ಜೆಡಿಎಸ್ ಬಿಟ್ಟು ಸಿದ್ದರಾಮಯ್ಯನವರ  ಅಮೋಘ ನಾಯಕತ್ವಕ್ಕೆ ಮನಸೋತು ಬಂದವರು. ರಾಯಚೂರಿನ ಪ್ರತಾಪ್ಗೌಡ ಸಹ ಸಿದ್ದರಾಮಯ್ಯನವರ ಬೆಂಬಲಿಗನೇ! ಹಾಗಾಗಿ ಸಿದ್ದರಾಮಯ್ಯ ಕಿರುಚಬೇಕಾಗಿದೆ; ಮತ್ತಷ್ಟು, ಮಗದಷ್ಟು ಯಡಿಯೂರಪ್ಪನವರನ್ನು ಬೈಯ್ಯಬೇಕಾಗಿದೆ. ಹಾಗಾಗಿ ಅದ್ಭುತ ಕನ್ನಡದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ; ಅವರ ಸೊಗಸು ನುಡಿ - ಲಜ್ಜೆಗೆಟ್ಟವರು ರಾಜ್ಯಾದ್ಯಂತ ಓಡುತ್ತಿದೆ. 

ಇನ್ನೂ ಪರಮೇಶ್ವರ್! ಸಿಕ್ಕ ಅಧಿಕಾರವನ್ನು ಬಳಸಿಕೊಳ್ಳುವ ಎಲ್ಲ ತಯಾರಿಯಲ್ಲಿದ್ದಾರೆ. ಉಪ ಮುಖ್ಯಮಂತ್ರಿಯಾದರೂ ಪ್ರಮುಖ ಖಾತೆ ಕಳೆದುಕೊಂಡು ಕಳಾಹೀನರಾಗಿದ್ದಾರೆ. ಸ್ವತಃ ರಾಹುಲ್ ಗಾಂಧಿಯವರ ಪೇಮೆಂಟ್ನಲ್ಲಿರುವ ಎಂ.ಬಿ. ಪಾಟೀಲರ ಶಕ್ತಿಯ ಮುಂದೆ ಪರಮೇಶ್ವರರದು ಅಸಹಾಯಕ ಸ್ಥಿತಿ. ಹಾಗಾಗಿ ಜೊತೆಗಿರುವ ಬೆಂಗಳೂರು ಅಭಿವೃದ್ಧಿಯನ್ನೇ ತಮ್ಮ ಅಭಿವೃದ್ದಿಯ ಮೆಟ್ಟಿಲಾಗಿ ಸ್ಟೀಲ್ ಬ್ರಿಡ್ಜ್ ತಯಾರಿಯಲ್ಲಿದ್ದಾರೆ. ತುಮಕೂರಿನ ಮಧುಗಿರಿಯಿಂದ ಸತತವಾಗಿ ವಿಧಾನಸಭೆಗೆ ಆರಿಸಿ ಬರುತ್ತಿದ್ದ ಪರಮೇಶ್ವರ್ ಕೊರಟಗೆರೆಯಲ್ಲಿ ಕಳೆದ ಬಾರಿ ಪರಾಭವಗೊಂಡ ಅನುಭವದಿಂದ ತುಮಕೂರಿನ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಬೆಂಗಳೂರಿಗರಾಗಿದ್ದಾರೆ. ಹಾಗಾಗಿ ಅವರದು ಬರೀ ಡಿಪ್ಲೋಮ್ಯಾಟಿಕ್ ರಾಜಕಾರಣ. ಸಾಕಲ್ಲ; ಹೇಗಿದ್ರೂ ಡಿಸಿಎಂ ಪಟ್ಟ ಸಿಕ್ಕಿದೆಯಲ್ಲಾಲ ಎಲ್ಲರಿಗೂ ಆದದ್ದು ನನಗೂ ಆಗುತ್ತದೆ ಎಂಬ ನಿರಾತಂಕದಲ್ಲಿ ಸ್ಲೋ ಮೋಷನ್ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. 

ಯಡಿರಯೂರಪ್ಪನವರದು ಭಯಂಕರ ಹಸಿವು! ಎಷ್ಟರ ಮಟ್ಟಿಗೆ ಎಂದರೆ ಬಹುಶಃ ಆರು ತಿಂಗಳು ನಿದ್ರೆಯಲ್ಲಿದ್ದು ಎದ್ದು ಕುಳಿತ ಕುಂಭಕರ್ಣನಂತದ್ದು! ಹಾಗಾಗಿ. ಹೇಗಾದರೂ ಮಾಡಿ ವಿಧಾನಸಭೆಯ ಮೂರನೇ ಮಹಡಿ ಪ್ರವೇಶ ಮಾಡಿಬಿಡಬೇಕು ಎಂಬ   ಅದದಳ ಛಲ. ಹಾಗಾಗಿ ಛಲದಂಕಮಲ್ಲನಾಗಿ ಮತ್ತೆ ಮತ್ತೆ ಸಾಹಸ ಮಾಡುತ್ತಲೇ ಇದ್ದಾರೆ! ಫೇಲ್ ಆಗುತ್ತಲೇ ಇದ್ದಾರೆ. ಅನಾಯಾಸವಾಗಿ ಈ ಹಿಂದೆ ತಮಗೆ ಸಿಕ್ಕಿದ್ದ ಮುಖ್ಯಮಂತ್ರಿ ಪಟ್ಟವನ್ನು ಸ್ವತಃ ತಮ್ಮ ಕೈಯ್ಯಾರೆ ಹಾಳು ಮಾಡಿಕೊಂಡು ಇದೀಗ ಭಯಾನಕ ಸಾಹಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಸಾಥಿಯೇ ಇಲ್ಲಾ! ಮಾತೇ ಮಾಡದ ಜಗದೀಶ ಶೆಟ್ಟರ್; ಸದಾ ನಗುವ ಸದಾನಂದಗೌಡ; ಮುಖವನ್ನೇ ತೋರಿಸದ ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಕೆಂಪೇಗೌಡ ಆರ್. ಅಶೋಕ್, ಮಾತನಾಡಿ ಮರ್ಯಾದೆ ಕಳೆಯುವ ಮತ್ತೊಬ್ಬ ಉಪಮುಖ್ಯಮಂತ್ರಿ ಈಶ್ವರಪ್ಪ, ಮುಂದೆ ಉಪಮುಖ್ಯಮಂತ್ರಿಯ ಕನಸು ಕಾಣುವ ಗೋವಿಂದ ಕಾರಜೋಳ, ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿ ಹೊಸ ಒಕ್ಕಲಿಗ ನಾಯಕ ಡಾ. ಅಶ್ವತ್ಥನಾರಾಯಣ . .  ರೊಂದಿಗೆ ಎಂದಿನಂತೆ ಕನರ್ಾಟಕದ ಜಯಲಲಿತ ಕುಮಾರಿ ಶೋಭ ಕರಂದಾಜ್ಲೆ ಯಡ್ಯೂರಪ್ಪನವರ ಪ್ರಮುಖ ಸೇನಾನಿಯಾಗಿದ್ದಾರೆ. ನಿಷ್ಟಾವಂತ ಶಾಸಕರು ತಮ್ಮ ಪಾಡಿಗೆ ತಾವು ಕುಳಿತು ಯಡ್ಯೂರಪ್ಪನವರ ಬಗ್ಗೆ ಕರುಣೆ ತೋರುತ್ತಾ ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟು ಕೆಟ್ಟರೂ ಬುದ್ದಿ ಬರಲಿಲ್ಲ, ಬಿಜೆಪಿಗೆ ಮಾನ ಇರೋದಿಲ್ಲಾ . .  ಅವರ ಮಾತುಗಳು. 

ಇದಕ್ಕಿಂತ ವಿಭಿನ್ನ ದೈವಕೃಪೆಯಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರ ವರಸೆ! ಸ್ವತಃ ತಮ್ಮ ಕುಚರ್ಿಗೆ ಕಂಟಕ ಬರುತ್ತಿದ್ದರೂ ಟೆನ್ಷನ್ ಮಾಡಿಕೊಳ್ಳದೇ ಮಗನ ಕುರುಕ್ಷೇತ್ರ ಚಿತ್ರದ ಟ್ರಯಲರ್ ನೋಡುವ ಅದ್ಭುತ ಸಾಹಸಿಗರು ಅವರು. ಕೊಂಚವೂ ಅಳುಕಿಲ್ಲದೆ ಸಾಲಮನ್ನಾ ಕುರಿತ ತಮ್ಮ ಆಣೆ ಪ್ರಮಾಣಗಳನ್ನೇ ಚಿಂತಿಸುತ್ತಾ; ಮಗನ ಚಲನಚಿತ್ರ ಭವಿಷ್ಯ ದೊಡ್ಡದೋ, ಅಥವಾ ರಾಜಕೀಯ ಭವಿಷ್ಯ ಮುಖ್ಯವೋ ಎಂಬ ಚಿಂತೆ ಮಾತ್ರ ಅವರದ್ದು. ಹಾಗಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಮಗನನ್ನು ಸ್ಪಧರ್ಿಸಲು ಎಲ್ಲ ತಯಾರಿ ಮಾಡಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಹೇಗಿದ್ದರೂ ತಮ್ಮ ಜನಾಂಗ ತಮ್ಮ ಕೈ ಹಿಡಿಯುತ್ತದೆ ಎಂಬ ಅದಮ್ಯ ಭರವಸೆಯಿಂದ ಚಿಂತಾಮುಕ್ತರಾಗಿದ್ದಾರೆ. ಕಾಂಗ್ರೆಸ್ನ ಶಾಸಕರನ್ನು ತಮ್ಮ ರಾಜಕೀಯ ಕಾರ್ಯದಶರ್ಿಯನ್ನಾಗಿ, ಹಾಗೂ ಮತ್ತಷ್ಟು ಶಾಸಕರನ್ನು ಸಂಸದೀಯ ಕಾರ್ಯದಶರ್ಿಗಳನ್ನಾಗಿ ಮಾಡಿಕೊಂಡು, ನಿಗಮ ಮಂಡಳಿಗಳಿಗೆ ಖಚರ್ು ಮಾಡುವ ಶಾಸಕರನ್ನು ನೇಮಕ ಮಾಡಿ; ಹಿರಿಯಣ್ಣ ಹೆಚ್.ಡಿ. ರೇವಣ್ಣನವರ ನೇತೃತ್ವದಲ್ಲಿ ವಗರ್ಾವಣೆ ದಂಧೆಯ ಮೂಲಕ ಸಂಪನ್ಮೂಲ ಸಂಗ್ರಹವೇ ಅವರ ಏಕೈಕ ಗುರಿಯಾಗಿದೆ. 

ಅವರು ಹರ್ಯಾಣದ ಗುರುಗಾಂ ರೆಸಾಟರ್್ನಲ್ಲಿ;  ಇವರು ಬಿಡದಿಯ ಈಗಲ್ಟನ್ನಲ್ಲಿ; ನಡುವೆ ಬರದಲ್ಲಿ ಬೇಯುತ್ತಿರುವ  ಗ್ರಾಮೀಣ ಜನ; ಉದ್ಯೋಗವಿಲ್ಲದ ಕುಳಿತ ಯುವ ಜನ - ಕಣ್ ಕಣ್ ಬಿಟ್ಟು ತಮ್ಮ ಜನಪ್ರತಿನಿಧಿಗಳ ಹುಚ್ಚಾಟಗಳನ್ನು ನೋಡುತ್ತಾ ಕುಳಿತಿದ್ದಾರೆ. 150ಕ್ಕೂ ಹೆಚ್ಚು ತಾಲ್ಲೂಕುಗಳು ಕುಡಿಯಲು ನೀರಿಲ್ಲದೆ, ಮಳೆ ಬೆಳೆಯಿಲ್ಲದೆ ಬರಗೆಟ್ಟಿವೆ; ಜನ ಕಂಗಾಲಾಗಿದ್ದಾರೆ. ಭೀಕರ ಅತಿವೃಷ್ಟಿಯಿಂದ ತಮ್ಮ ಸಮಸ್ತವನ್ನೂ ಕಳೆದುಕೊಂಡ ಕೊಡಗಿನ ಜನ ಬದುಕಿನ ಭೀಕರ ಬವಣೆಯಲ್ಲಿ ಬೇಯುತ್ತಿದ್ದಾರೆ. ಉದ್ಯೋಗಗಳಿಲ್ಲದೆ ಯುವಜನತೆ ಔಟ್ಸೋಸರ್್ ಮೂಲಕ ಏಳೆಂಟು ಸಾವಿರಗಳಿಗೆ ದುಡಿಯುತ್ತಾ ತಮ್ಮ ಬದುಕನ್ನು ದೂಡುವ ಪ್ರಕ್ರಿಯೆಯಲ್ಲಿದ್ದರೆ, ವಿದಾನಸೌಧದ ಮಂತ್ರಿ ಮಹೋದಯರ ಆಪ್ತರು ಚೀಲಗಳಲ್ಲಿ ಕಂತೆ ಕಂತೆ ದುಡ್ಡನ್ನು ಪೇರಿಸಿಕೊಂಡು ಅಡ್ಡಾಡುತ್ತಿದ್ದಾರೆ. ಇದು ಒಬ್ಬ ಮಂತ್ರಿಯ ಕತೆಯಲ್ಲ; ಬಹುತೇಕ ಎಲ್ಲ ಮಂತ್ರಿಮಾನ್ಯರ ಆಪ್ತರು ಇದೇ ಸಂಗ್ರಹ ಕಾರ್ಯದಲ್ಲಿದ್ಧರೆ ಎಂಬುದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಹಿರಂಗವಾಗಿ ಹೇಳಿದ್ದಾರೆ. ಹಣ ಸಂಗ್ರಹಣೆಯ ಕೇಂದ್ರಗಳು ವಿಧಾನಸೌಧ - ವಿಕಾಸಸೌಧ ಎಂದು ಮುಖ್ಯಮಂತ್ರಿಯಾದ ಹೊಸತರಲ್ಲಿಯೇ ಕುಮಾರಸ್ವಾಮಿ ಹೇಳಿರುವುದು ಸತ್ಯವಾಗಿದೆ. ಆ ಸತ್ಯದ ಭೀಕರತೆಯಲ್ಲಿ ಬೇಯುತ್ತಾ ನರಳುತ್ತಿರುವ ಜನ ಒಂದೆಡೆಯಾದರೆ, ರೆಸಾಟರ್್ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಶಾಸಕರುಗಳು ಮತ್ತೊಂದೆಡೆ; ವಿದೇಶ ಪ್ರವಾಸದಲ್ಲಿ ಲೋಕೋಪಯೋಗಿಯಲ್ಲಿ ಇನ್ನೆಷ್ಟು ವಗರ್ಾವಣೆ ಆದೀತು ಎಂದು ಲೆಕ್ಕಾಚಾರ ಹಾಕುವ ಅಘೋಷಿತ ಮುಖ್ಯಮಂತ್ರಿ! ಕನರ್ಾಟಕದ ಭಾಗ್ಯಕ್ಕೆ ಇನ್ನೇನು ಬೇಕು!

-ಪಿನಾಕಪಾ 

ಸುದ್ದಿ ಓದಿ