ರಾಜಕೀಯ

ಯಾವ ಮೈತ್ರಿಕೂಟದತ್ತ ಬಿಹಾರಿ ಬಾಬುಗಳ ಚಿತ ್ತ!!.

ಯಾವ ಮೈತ್ರಿಕೂಟದತ್ತ ಬಿಹಾರಿ ಬಾಬುಗಳ ಚಿತ ್ತ!!.

ದೇಶಾದ್ಯಂತ ತ್ರೀರ್ವ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಯಾವ ಪಕ್ಷದತ್ತ ಬಿಹಾರಿನ ಮತದಾರ ಪ್ರಭುವಿನ ಚಿತ್ತ ಎನ್ನುವುದನ್ನು ಅವಲೋಕಿಸಿದಾಗ ಸದ್ಯದ ಪರಿಸ್ಥಿತಿಯಲ್ಲಿ ಸಿ.ಎಂ. ನಿತೀಶಕುಮಾರ ನೇತೃತ್ವದ ಎನ್.ಡಿಎ. ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಲಕ್ಷಣಗಳು ಹೆಚ್ಚಾಗಿ ಗೋಚರಿಸುತ್ತಿವೆ. 2015ರ ಚುನಾವಣೆಯಲ್ಲಿ ಮಹಾಘಟಬಂಧನ ಎನ್ನುವ ಮಹಾಮೈತ್ರಿಕೂಟ ರಚಿಸಿಕೊಂಡಿದ್ದ ಆರ್.ಜೆ.ಡಿ., ಜೆ.ಡಿಯು ಕಾಂಗೈ ಪಕ್ಷಗಳು ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದಿದ್ದವು. ಆಗ ಜೆ.ಡಿಯು.-71, ಆರ್.ಜೆ.ಡಿ.-80, ಕಾಂಗೈ-27 ಸ್ಥಾನಗಳನ್ನು ಗಳಿಸಿದ್ದರೆ ವಿರೋಧಿ ಎನ್.ಡಿ.ಎ. ಪಾಳೆಯದಲ್ಲಿ ಬಿ.ಜೆ.ಪಿ.-53, ಎಲ್.ಜೆ.ಪಿ.-02 ಆರ್.ಎಲ್.ಎಸ್.ಪಿ-02, ಹಿಂದೂಸ್ತಾನ ಆವಾಮಿ ಮೋಚರ್ಾ-1 ಸ್ಥಾನಗಳನ್ನು ಗಳಿಸಿದರೆ ಇನ್ನಿ ಸಿ.ಪಿ.ಐ.-03, ಸಿ.ಪಿ.ಎಂ.-1 ಸ್ಥಾನಗಳನ್ನು ಗಳಿಸಿದ್ದವು. ಆಗ ಬಿಹಾರದಲ್ಲಿ ನಿತೀಶಕುಮಾರ ಮತ್ತು ಲಾಲೂ ಪ್ರಸಾದ ಯಾದವ ಒಂದುಗೂಡಿದ್ದರು ಹಾಗೂ ಜಾತಿ ಸಮೀಕರಣದವಾದ ಯಾದವ, ಮುಸ್ಲಿಂ ಮಹಾದಲಿತ ಮತಗಳು ಕೈ ಹಿಡಿದ ಪರಿಣಾಮ ಈ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು. ನಂತರ ಕೆಲ ದಿನಗಳಲ್ಲಿ ಈ ಮೈತ್ರಿಕೂಟದಲ್ಲಿನ ಬಿರುಕು ಹಾಗೂ ಲಾಲೂ ಪ್ರಸಾದ ಯಾದವ ಕುಟುಂಬದ ಮೇಲೆ ಕೇಳಿ ಬಂದ ಭ್ರಷ್ಟಾಚಾರ ಆರೋಪ ಕಾರಣ ನಿತೀಶಕುಮಾರ ಮೈತ್ರಿಯನ್ನು ಮುರಿದುಕೊಡು ಪುನಃ ಬಿ.ಜೆ.ಪಿ. ಜೊತೆಗೂಡಿ ಸಕರ್ಾರ ರಚಿಸಿದ್ದು ಈಗ ಇತಿಹಾಸ. ಆಗ ಜಾತ್ಯಾತೀತ ಪಕ್ಷಗಳು ಒಂದುಗೂಡಿದ ಪರಿಣಾಮ ಬಿ.ಜೆ.ಪಿ. ಪಕ್ಷದ ನೇತೃತ್ವದ ಎನ್.ಡಿ.ಎ.ಗೆ ಹಿನ್ನಡೆ ಉಂಟಾಗಿತ್ತು. ಆದರೆ ಈ ಸಲ ಪರಿಸ್ಥಿತಿ ತೀರ ಭಿನ್ನವಾಗಿದೆ.

ಈ ಬಾರಿಯ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಸಿ.ಎಂ. ನಿತೀಶಕುಮಾರ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ್ತೆ ಮರಳಿ ಅಧಿಕಾರ ಪಡೆಯಲ ಇರುವ ಅನೂಕೂಲಕರ ಅಂಶದತ್ತ ಗಮನಿಸಿದಾಗ ಮೊದಲನೆಯದು ಸಿ.ಎಂ. ನಿತೀಶಕುಮಾರ ಅವರ ಜನಪ್ರಿಯತೆ ಬಿಹಾರ ರಾಜ್ಯದ ತುಂಬಾ ನಿತೀಶಕುಮಾರ ಅವರು ಹೊಂದಿರುವ ಜನಪ್ರಿಯತೆ ಈ ಚುನಾವಣೆಯಲ್ಲಿ ಎನ್.ಡಿ.ಎ.ಗೆ ವರವಾಗಬಹುದು. ಏಕೆಂದರೆ ವಿರೋಧಿ ಪಕ್ಷಗಳ ಪಾಳೆಯದಲ್ಲಿ ನಿತೀಶಕುಮಾರನ್ನು ಹಿಂದುಕ್ಕುವ ಸಿ.ಎಂ. ಅಭ್ಯಥರ್ಿಗಳು ಇಲ್ಲದೆ ಇರುವುದು ಎನ್.ಡಿ.ಎ.ಗೆ ಪ್ಲಸ್ ಪಾಯಿಂಟ್ ಆದರೆ ವಿರೋಧಿ ಪಕ್ಷಗಳಿಗೆ ಹಿನ್ನಡೆ ತರುವ ಅಂಶವಾಗಿದೆ.

ಇನ್ನು ಸಿ.ಎಂ. ನಿತೀಶಕುಮಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕೂಡಾ ಎನ್.ಡಿ.ಎ. ಮೈತ್ರಿಕೂಟಕ್ಕೆ ವರವಾಗುವ ಇನ್ನೊಂದು ಪ್ರಮುಖ ಅಂಶವಾಗಿದೆ. ಸಿ.ಎಂ. ನಿತೀಶಕುಮಾರ ನೇತೃತ್ವದ ಸಕರ್ಾರ ಕೈಗೊಂಡ ಜನಪ್ರಿಯ ಅಭಿವೃದ್ಧಿ ಕಾರ್ಯಗಳಿಂದ ಬಿಹಾರ ಜನತೆಗೆ ಸ್ವಲ್ಪ ಮಟ್ಟಿನ ತೃಪ್ತಿ ಹೊಂದಿದ್ದಾರೆ. ಉದಾಹರಣೆಗೆ ಮುಖ್ಯಮಂತ್ರಿ ನಿಶ್ಚೆ ಸ್ವಯಮ ಸಹೈತಾ ಯೋಜನೆಯಡಿ ಬಿಹಾರದ 20 ರಿಂದ 25 ವರ್ಷದೊಳಗಿನ ಯುವಕರಿಗೆ ಪ್ರತಿ ತಿಂಗಳ 1000 ರೂ. ನಿರುದ್ಯೋಗ ಭತ್ಯೆ ಎರಡು ವರ್ಷಗಳವರೆಗೆ ನೀಡುತ್ತಿರುವುದು ಮತ್ತು ಬಿಹಾರ ವಿದ್ಯಾಥರ್ಿ ಕ್ರೆಡಿಟ್ ಕಾರ್ಡ ಯೋಜನೆಯಡಿಯಲ್ಲಿ ಪ್ರತಿ 12 ನೇ ತರಗತಿ ಪಾಸ ಅದವರಿಗೆ ಉನ್ನತ ಶಿಕ್ಷಣಕ್ಕಾಗಿ 4 ಲಕ್ಷ ರೂ. ಸಾಲದ ರೂಪದಲ್ಲಿ ಬಡ ವಿದ್ಯಾಥರ್ಿಗಳಿಗೆ ನೆರವು ನೀಡುತ್ತಿರುವುದು ಹಾಗೂ ಕುಶಾಲ್ ಯುವ ಕಾರ್ಯಕ್ರಮ ಎಂಬ ಹೆಸರಿನ ಯೋಜನೆಯ ಮೂಲಕ 15 ರಿಂದ 25 ವರ್ಷದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಕೌಶಲ್ಯ ಹೆಚ್ಚಳದ ತರಬೇತಿ ಯೋಜನೆ ಅದರಲ್ಲಿ ಎಸ್.ಸಿ., ಎಸ್.ಟಿ., ವಿಕಲಚೇತನರಿಗೆ ವಿಶೇಷವಾಗಿ ತರಬೇತಿ ನೀಡುವುದು ಇದರ ಉದ್ದೇಶ. ಈ ಕೆಲ ಯೋಜನೆಗಳಿಂದ  ವಿಶೇಷವಾಗಿ ಬಿಹಾರದ ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿದ ಯೋಜನೆಗಳು ಇವುಗಳಿಂದ ಸಹಜವಾಗಿ ನಿತೀಶಕುಮಾರ ಯುವಕರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಇದು ಅಲ್ಲದೆ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಬಿಹಾರದ ಸಮಾಜ ಕಲ್ಯಾಣ ಇಲಾಖೆಯು ಬಡವರಿಗಾಗಿ ವಿದ್ವಾ ಪೆನ್ಸನ್, ವಿಕ್ಲಾಂಗ್ ಪೆನ್ಸನ್, ವೃದ್ಧಾ ವೇತನದ ಮೂಲಕ ನೆರವು ಒದಗಿಸುವ ಯೋಜನೆಗಳು ನಿತೀಶಕುಮಾರರ ಇಮೇಜ್ ಹೆಚ್ಚಿಗೆ ಮಾಡಿದೆ. ಇದು ಅಲ್ಲದೆ ಇತ್ತೀಚೆಗೆ ಬಿಹಾರದಲ್ಲಿ ಸ್ವಲ್ಪಮಟ್ಟಿಗೆ ರಸ್ತೆಗಳ ಅಭಿವೃದ್ಧಿಯಾಗುತ್ತಿವೆ. ಹಿಂದೆ ಲಾಲೂ ಪ್ರಸಾದ ಮತ್ತು ರಾಬ್ಢಿದೇವಿ ಕಾಲದಲ್ಲಿ ಬಿಹಾರಕ್ಕೆ ಜಂಗಲ್ ರಾಜ್ಯ ಎಂಬ ಹಾಗೂ ಹಿಂದುಳಿದ ರಾಜ್ಯ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಇತ್ತ ನಿತೀಶಕುಮಾರ ಸಿ.ಎಂ. ಆದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎನ್ನುವ ಅಭಿಪ್ರಾಯ ಬಿಹಾರದ ಜನತೆಯದು ಅದು ಅಲ್ಲದೆ ಬಿಹಾರದಲ್ಲಿ ಈಗ ಮೂಲಭೂತ ಸೌಕರ್ಯಗಳಾದ ವಸತಿ, ಶಿಕ್ಷಣ, ವಿದ್ಯುತ್ ಗ್ರಾಮೀಣ ಪ್ರದೇಶಗಳ ರಸ್ತೆಗಳ ವಿಷಯದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯಾಗುತ್ತಿವೆ ಎನ್ನುವ ವಾತಾವರಣ ಬಿಹಾರದಲ್ಲಿ ಇದೆ. ಈ ಅಂಶವು ಜೆ.ಡಿ.ಯು. ಪಕ್ಷದ ನೇತಾರ ಸಿ.ಎಂ. ನಿತೀಶಕುಮಾರ ನೆರವಿಗೆ ಈ ಚುನಾವಣೆಯಲ್ಲಿ ಬರುತ್ತವೆ ಎನ್ನುವ ಆಶಾವಾದ ಬಿ.ಜೆ.ಪಿ. ಸೇರಿದಂತೆ ಎನ್.ಡಿ.ಎ. ಕೂಟದ ಪಕ್ಷಗಳದ್ದು.

ಈ ಚುನಾವಣೆಯಲ್ಲಿ ನಿತೀಶಕುಮಾರಗೆ ವರವಾಗುವ ಇನ್ನೊಂದು ಅಂಶವೆಂದರೆ ಅದು ಬಿ.ಜೆ.ಪಿ. ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಬಿ.ಜೆ.ಪಿ. ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಬಿ.ಜೆ.ಪಿ. ಪಕ್ಷದ ಸಾಂಪ್ರದಾಯಿಕ ಮತಗಳು ನಿತೀಶಗೆ ದೊರೆಯುತ್ತವೆ. ಅಲ್ಲದೆ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳಾದ ರಾಮವಿಲಾಸ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷ ಹಾಗೂ ಚಿತಿನರಾಯ ವಾಂಜಿ ಅವರ ಹಿಂದೂಸ್ತಾನ ಆವಾಮಿ ಮೋಚರ್ಾಗಳಿಂದ ಮಹಾದಲಿತ ಮತಗಳನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಒಂದು ಕಡೆ ಇದ್ದರೆ, ಉಪೇಂದ್ರ ಕುಶ್ವಾಹಾ ಅವರ ಅರ್.ಎಲ್.ಜಿ.ಪಿ. ಪಕ್ಷಗಳಿಂದ ಸ್ವಲ್ಪ ಮಟ್ಟಿನ ಲಾಭವಾಗುತ್ತದೆ ಎನ್ನುವ ಅಂಶ ಒಂದು ಕಡೆ. ಆದರೆ ಕೇಂದ್ರದಲ್ಲಿ ಬಿ.ಜೆ.ಪಿ. ಪಕ್ಷದ ಸಕರ್ಾರವಿದೆ. ರಾಜ್ಯದಲ್ಲಿ ಎನ್.ಡಿ.ಎ. ಕೂಟ ಅಧಿಕಾರಕ್ಕೆ ಬಂದರೆ ಕೆಂದ್ರದಿಂದ ಹೆಚ್ಚಿನ ಅನುದಾನ ತಂದು ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಈ ಅಂಶವು ಈ ಬಾರಿ ಬಿಹಾರದಲ್ಲಿ ಮತ್ತೆ ನಿತೀಶಕುಮಾರರಿಗೆ ಅಧಿಕಾರದ ಕನಸು ಕಾಣುವಂತೆ ಮಾಡಿದೆ.

ಇನ್ನು ಬಿಹಾರ ರಾಜ್ಯದಲ್ಲ ಆರ್.ಜೆ.ಡಿ. ಪಕ್ಷವು ಲಾಲೂ ಪ್ರಸಾದ ನಾಯಕತ್ವವಿಲ್ಲದೆ ಸೊರಗುತ್ತಿದೆ. ಆದರಲ್ಲಿ ಲಾಲೂ ಪ್ರಸಾದ ಯಾದವ ಕುಟುಂಬದಲ್ಲಿನ ಒಡಕು ಅವರ ಇಬ್ಬರು ಮಕ್ಕಳಾದ ತೇಜಸ್ ಯಾದವ ಮತ್ತು ತೇಜ್ ಪ್ರತಾಪ ಯಾದವ ನಡುವಿನ ಯಾದವಿ ಕಲಹ ಈ ಚುನಾವಣೆಯಲ್ಲಿ ಸಹಜವಾಗಿ ಈ ಅಂಶವು ಎನ್.ಡಿ.ಎ.ಗೆ ವರವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತ್ತಿಲ್ಲ. ಇದು ಅಲ್ಲದೆ ಇತ್ತೀಚೆಗೆ ಆರ್.ಜೆ.ಡಿ.ಯ ಹಿರಿಯ ನಾಯಕ ರಘುವನ ಪ್ರಸಾದ ಸಿಂಗ ಸೇರಿದಂತೆ ಕೆಲ ನಾಯಕರು ಪಕ್ಷ ಬಿಟ್ಟ ನಿತೀಶಕುಮಾರ ಬಣದ ಜೆ.ಡಿ.ಯು. ಪಕ್ಷವನ್ನು ಸೇರಿದ್ದ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ. ಈ ಆಂಶವು ನಿತೀಶಕುಮಾರಗೆ ಸ್ವಲ್ಪಮಟ್ಟಿನ ಲಾಭ ತರುವ ಅಂಶವಾಗಿದೆ. ಇನ್ನು ಲಾಲೂ ಪ್ರಸಾದ ಯಾದವ ಇಲ್ಲದೆ ಆರ್.ಜೆ.ಡಿ. ಪಕ್ಷದ ಸಂಘಟನೆ ದುರ್ಬಲವಾಗಿದೆ. ಒಂದು ಕಾಲದಲ್ಲಿ ಜಬ್ ತಕ್ಕ ಸಮೋಸಾ ಮೇ ಅಲೂ ರಹೇಗಾ ತಬ್ ತಕ್ಕ ಬಿಹಾರ ಮೇ ಲಾಲೂ ರಹೇಗಾ ಎಂಬ ಲಾಲೂ ಅವರ ಘೋಷಣೆಗೆ ಈಗ ಬಿಹಾರದಲ್ಲಿ ಅಷ್ಟು ಬೆಂಬಲ ಸಿಗುತ್ತಿಲ್ಲ. ಲಾಲೂ ಪ್ರಸಾದ ಜನಪ್ರಿಯತೆ ಈಗ ಕಡಿಮೆ ಅಗುತ್ತಿದೆ. ಈ ಆಂಶವು ಬಿಹಾರದಲ್ಲಿ ಎನ್.ಡಿ.ಎ.ಗೆ ಅನುಕೂಲ ತರುವ ಅಂಶವಾಗಿದೆ.

ಇನ್ನು ರಾಜ್ಯದಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯತೆಯ ಅಭಿಮಾನ ದೇಶದಲ್ಲಿನ ಇತ್ತೀಚಿನ ಬೆಳವಣಿಗೆಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದ ಪರಿಣಾಮ ಈ ಚುನಾವಣೆಯಲ್ಲಿ ತಕ್ಕಮಟ್ಟದ ಮತಗಳನ್ನು ಎನ್.ಡಿ.ಎ. ಕೂಟಕ್ಕೆ ತರಬಲ್ಲವು. ಕೇಂದ್ರ ಸಕರ್ಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಬಿಹಾರದ ಕೃಷಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಈ ಅಂಶವು ಸಹಜವಾಗಿ ಬಿಹಾರದಲ್ಲಿ ಎನ್.ಡಿ.ಎ.ಗೆ ವರವಾಗಬಹುದು. ಇನ್ನೊಂದು ಪ್ರಮುಖ ಅಂಶವೆಂದರೆ ನಿತೀಶಕುಮಾರ ಅವರ ಕ್ಲೀನ್ ಇಮೇಜ್ ಯಾವುದೇ ಗಂಭೀರವಾದ ಭಷ್ಟಾಚಾರದ ಅರೋಪ ಅವರ ಮೇಲೆ ಕೇಳಿ ಬರದೆ ಇರುವುದು ಮತ್ತು ಭ್ರಷ್ಟಾಚಾರರದ ವಿಷಯವಾಗಿಯೇ ಆರ್.ಜೆ.ಡಿ. ಸಂಪರ್ಕ ಕಳೆದುಕೊಂಡು ಮತ್ತೆ ಬಿ.ಜೆ.ಪಿ. ಜೊತೆಗೆ ನಿತೀಶ ಕೈ ಜೋಡಿಸಿದ್ದು ಈ ಅಂಶವು ನಿತೀಶರ ನೆರವಿಗೆ ಬರಬಹುದು. ಇನ್ನು ನಿತೀಶಕುಮಾರ ಅವರಿಗೆ  ಬಿಹಾರದಲ್ಲಿ ಮೇಲವರ್ಗದ, ಹಿಂದುಳಿದ ವರ್ಗದ ಮತ್ತು ದಲಿತ ವರ್ಗಗಳ ಬೆಂಬಲ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಸಹಜವಾಗಿ ನಿತೀಶಕುಮಾರಿಗೆ ಈ ಚುನಾವಣೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಈ ಮೇಲಿನ ಅಂಶಗಳಿಂದ ಸಹಜವಾಗಿ ಈ ಬಾರಿಯು ನಿತೀಶಕುಮಾರ ನೇತೃತ್ವದ ಎನ್.ಡಿ.ಎ.ಗೆ ಮತ್ತೆ ಅಧಿಕಾರದ ಕನಸು ಕಾಣುವಂತೆ ಮಾಡಿದೆ.

ಇನ್ನು ಇನ್ನೊಂದು ಗಮನಿಸುವ ಅಂಶವೆಂದರೆ ಬಿಹಾರ ಎಂದಾಗ ಜಾತಿ ರಾಜಕೀಯ ಎದ್ದು ಕಾಣುತ್ತಿದೆ. ಸದ್ಯದ ಜಾತಿ ಸಮೀಕರಣವನ್ನು ನೋಡಿದಾಗ ಯಾದವ ಮತ್ತು ಮುಸ್ಲಿಂ ಮತಗಳು ಆರ್.ಜೆ.ಡಿ. ಮತ್ತು ಕಾಂಗೈ ಪಕ್ಷಗಳತ್ತ ವಾಲಬಹುದು. ಮೇಲವರ್ಗದ ಹಿಂದುಳಿದ ಮತ್ತು ಸ್ವಲ್ಪಮಟ್ಟಿನ ದಲಿತ ಮತಗಳು ಎನ್.ಡಿ.ಎ. ಪಾಲು ಆಗುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಈ ಚುನಾವಣೆಯಲ್ಲಿ ಆರ್.ಜೆ.ಡಿ. ಕಾಂಗೈ ಮತ್ತು ಇತರೆ ಜಾತ್ಯಾತೀತ ಪಕ್ಷಗಳು ಸೇರಿ ಮಹಾಮೈತ್ರಿಕೂಟ ರಚಿಸಿಕೊಂಡರೆ ಆಗ ಎನ್.ಡಿ.ಎ.ಗೆ ಪ್ರಬಲ ಪೈಪೋಟಿ ನೀಡಬಹುದು. ಲಾಲೂ ಪ್ರಸಾದ ಯಾದವರ ಅರ್.ಜೆ.ಡಿ. ಪಕ್ಷವು ಈಗಲೂ ಬಿಹಾರದಲ್ಲಿ ಯಾದವ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಮೇಲೆ ಹಿಡಿತ ಹೊಂದಿದೆ. ಇದರ ಜೊತೆಗೆ ದಲಿತ ಮತಗಳನ್ನು ಸೆಳೆದರೆ ಆಗ ಎನ್.ಡಿ.ಎ.ಗೆ ಸವಾಲು ಆಗಬಹುದು. ಈ ಅಂಶವು ವಿರೋಧಿ ಪಕ್ಷಗಳಾದ ಆರ್.ಜೆ.ಡಿ. ಮತ್ತು ಕಾಂಗೈ ಇತರೆ ಜಾತ್ಯಾತೀತ ಪಕ್ಷಗಳಿಗೆ ವರವಾಗುವ ಸಾಧ್ಯತೆಯೂ ಇದೆ. ಆದರೆ ನಿತೀಶಕುಮಾರ ನಾಯಕತ್ವ ಮುಂದೆ ಈ ಜಾತಿ ಸಮೀಕರಣವು ಕೆಲಸ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗಬಹುದು.

ಇನ್ನು ರಾಜ್ಯದಲ್ಲಿನ ಆಡಳಿತ ವಿರೋಧಿ ಅಲೆಯಿಂದ ಸಹಜವಾಗಿ ಎನ್.ಡಿ.ಎ. ಪಕ್ಷಗಳಿಗೆ ಹಿನ್ನಡೆ ತರುವ ಅಂಶವಾದರೆ ಇದರ ಲಾಭದ ನಿರೀಕ್ಷೆಯಲ್ಲಿ ವಿರೋಧಿ ಪಕ್ಷಗಳಾದ ಆರ್.ಜೆ.ಡಿ. ಮತ್ತು ಕಾಂಗೈ ಪಕ್ಷಗಳಿವೆ. ಆದರೆ ಈ ಸದ್ಯಕ್ಕೆ ನಿತೀಶಕುಮಾರ ಅವರ ಮೇಲೆ ಅಷ್ಟಾಗಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗದೆ ಇರುವುದು ಎನ್.ಡಿ.ಎ.ಗೆ ನೆಮ್ಮದಿ ತರುವ ಅಂಶವಾಗಿದೆ. ಇನ್ನು 2015ರಲ್ಲಿ ಜಾತ್ಯಾತೀತ ಮೈತ್ರಿಕೂಟದ ಸಕರ್ಾರವಿರಬೇಕು ಕೋಮುವಾದ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಕಾರಣದಿಂದ ಮಹಾಘಟಬಂಧನ ಅಧಿಕಾರಕ್ಕೆ ಬಂದಿತ್ತು. ಆದರೆ ನಿತೀಶಕುಮಾರ ಈ ಜನರ ಭಾವನೆಯ ವಿರೋಧವಾಗಿ ಮತ್ತೆ ಬಿ.ಜೆ.ಪಿ.ಯೊಂದಿಗೆ ಕೈ ಜೋಡಿಸಿದ್ದು ವಿಶೇಷವಾಗಿ ಮುಸ್ಲಿಂ ಮತ್ತು ಯಾದವರಲ್ಲಿ ನಿತೀಶಕುಮಾರ ಮೇಲೆ ಕೋಪವಿದೆ. ಈ ಅಂಶದ ಲಾಭದ ಲೆಕ್ಕಾಚಾರದಲ್ಲಿ ಆರ್.ಜೆ.ಡಿ. ಮತ್ತು ಕಾಂಗೈ ಪಕ್ಷಗಳಿವೆ ಮತ್ತು ಈ ಅಂಶಗಳಿಂದಾಗಿ ಬಿಹಾರ ಜೆ.ಡಿಯು. ಎರಡು ಹೋಳಾಗಿದ್ದು. ಒಂದು ನಿತೀಶಕುಮಾರ ನೇತೃತ್ವದ ಜೆ.ಡಿ.ಯು. ಇನ್ನೊಂದು ಶರದ ಯಾದವ ನೇತೃತ್ವದ ಜೆ.ಡಿ.ಯು. ಆಗಿ ಪಕ್ಷ ವಿಭಜನೆಯಾಗಿದ್ದು. ಇದರ ಲಾಭ ತಮಗೆ ಆಗಬಹುದು ಎನ್ನುವ ಲೆಕ್ಕಾಚಾರ ವಿರೋಧಿ ಪಕ್ಷಗಳಾದ ಆರ್.ಜೆ.ಡಿ. ಮತ್ತು ಜಾತ್ಯಾತೀತ ಪಕ್ಷಗಳದ್ದು. ಅದರೆ ಜೆ.ಡಿ.ಯು. ಪಕ್ಷದ ವಿಭಜನೆಯಾದರೂ ಹೆಚ್ಚಿನ ಕಾರ್ಯಕರ್ತರು ಮತ್ತು ಮುಖಂಡರ ಬೆಂಬಲ ನಿತೀಶಕುಮಾರ ಕಡೆಗೆ ಇರುವುದು ಎನ್.ಡಿ.ಎ.ಗೆ ಸಮಾಧಾನ ತರುವ ಅಂಶವಾಗಿದೆ. ಇನ್ನೊಂದು ಗಮನಿಸುವ ಅಂಶವೆಂದರೆ ಎನ್.ಡಿ.ಎ.ದ ಮಿತ್ರ ಪಕ್ಷಗಳಾದ ರಾಮ ವಿಲಾಸ ಪಾಸ್ವಾನರ ಲೋಕಜನಶಕ್ತಿ ಪಕ್ಷ ಮತ್ತು ಚಿತಿನರಾಯವಾಂಜಿ ಅವರ ಹಿಂದೂಸ್ತಾನ ಆವಾಮಿ ಮೋಚರ್ಾಗಳಿಂದ ಕಳೆದ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ. ಹೆಚ್ಚಿನ ಮಹಾದಲಿತ ಮತಗಳನ್ನು ತರುವಲ್ಲಿ ಈ ಪಕ್ಷಗಳು ಯಶಸ್ವಿಯಾಗಿರಲಿಲ್ಲ. ಈ ಸಲವು ಅದೇ ರೀತಿಯಾಗಿ ದಲಿತ ಮತಗಳನ್ನು ಹೆಚ್ಚಾಗಿ ಸೆಳೆಯಬಹುದು ಎನ್ನುವ ಲೆಕ್ಕಾಚಾರ ಜಾತ್ಯಾತೀತ ಪಕ್ಷಗಳಾದ ಆರ್.ಜೆ.ಡಿ. ಮತ್ತು ಕಾಂಗೈ ಪಕ್ಷಗಳ ಲೆಕ್ಕಾಚಾರ ಇದೆ. ಆದರೆ ಆಗ ನಿತೀಶಕುಮಾರ ಜೊತೆಗೆ ಇದ್ದರು. ಈ ಸಲ ನಿತೀಶಕುಮಾರ ಬೇರೆಯಾಗಿದ್ದಾರೆ. ಹೀಗಾಗಿ ಇಲ್ಲಿಯೂ ಹೆಚ್ಚಿನ ನಿರೀಕ್ಷೆ ವಿರೋಧ ಪಕ್ಷಗಳು ಇಟ್ಟುಕೊಳ್ಳುವಂತೆ ಇಲ್ಲ ಎನ್ನುವ ವಾದವಿದೆ. ಈ ಕೆಲ ಅಂಶಗಳು ಅಡಳಿತಾರೂಢ ಎನ್.ಡಿ.ಎ. ಪಕ್ಷಕ್ಕೆ ಹಿನ್ನಡೆಯನ್ನು ತರುವ ಅಂಶಗಳಾದರೂ ಮುಖ್ಯವಾಗಿ ಈ ಅಂಶಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ ಮತ್ತು ಮಹಾಘಟಬಂಧನದ ರಚನೆಯ ಮೇಲೆಯೇ ಈ ಅಂಶವು ಅವಲಂಬಿಸಿದೆ.

ಒಟ್ಟಿನಲ್ಲಿ ಈ ಮೇಲಿನ ಅಂಶಗಳನ್ನು ಪರಿಶೀಲಿಸಿದಾಗ ಬಿಹಾರದಲ್ಲಿನ ಒಟ್ಟು 243 ವಿಧಾನಸಭೆಯ ಸ್ಥಾನಗಳಲ್ಲಿ ಯಾವುದೇ ಪಕ್ಷವು ಮ್ಯಾಜಿಕ್ ಸಂಖ್ಯೆಯಾದ 122 ತಲುಪುವದಿಲ್ಲ. ಆದರೆ ನಿತೀಶಕುಮಾರ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟವು ಪುನಃ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಲಕ್ಷಣಗಳು ಹೆಚ್ಚಾಗಿ ಗೋಚರಿಸುತ್ತಿವೆ. ಒಟ್ಟಿನಲ್ಲಿ ಬಿಹಾರ 6.68 ಕೋಟಿ ಬಿಹಾರಿ ಬಾಬುಗಳ ಚಿತ್ರ ಯಾವ ಮೈತ್ರಕೂಟದತ್ತ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಫಲಿತಾಂಶದವರಿಗೂ ಕಾಯಲೇಬೇಕು.......!

ಡಾ. ಸತೀಶ ಕೆ. ಪಾಟೀಲ. 

ಚಡಚಣ (ವಿಜಯಪುರ) 

ಸುದ್ದಿ ಓದಿ