ವಿಶೇಷ ಚೇತನರಾದ ಮಕ್ಕಳನ್ನು ಗೌರವಿಸಿ: ಬಳಿಗಾರ
ಲೋಕದರ್ಶನ ವರದಿ
ಗೋಕಾಕ 28: ನಿಸರ್ಗದ ಕಾರಣದಿಂದ ವಿಶೇಷ ಚೇತನರಾದ ಮಕ್ಕಳನ್ನು ಗೌರವಿಸಿ, ಪ್ರೀತಿಸಿ, ಅವಕಾಶ ನೀಡಿ ಸರಕಾರದ ಸೌಲಭ್ಯಗಳ ಸದುಪಯೋಗದಿಂದ ಅವರ ಸವರ್ಾಂಗೀಣ ಬೆಳವಣಿಗೆಗೆ ಪಾಲಕರು ಶ್ರಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ ಹೇಳಿದರು.
ಮಂಗಳವಾರದಂದು ನಗರದ ನ್ಯೂ ಇಂಗ್ಲೀಷ ಸ್ಕೂಲ್ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗೋಕಾಕ ವಲಯದ 1ರಿಂದ 10ನೇ ತರಗತಿಯಲ್ಲಿ ಒದುತ್ತಿರುವ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಭಿರದಲ್ಲಿ ಪಾಲಕರಿಗೆ ಸರಕಾರದ ಸೌಲಭ್ಯಗಳ ಮಾಹಿತಿಯನ್ನು ವಿವಿರಿಸುತ್ತ ಸರಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ವಿಶೇಷ ಚೇತನ ಮಕ್ಕಳಿಗಾಗಿ ಪ್ರತಿ ತಿಂಗಳು ಒಂದು ಸಾವಿರ ಸಹಾಯ ಧನ ಹಾಗೂ ಉಚಿತ ಸಾಧನ ಸಲಕರಣೆಗಳನ್ನು ನೀಡುತ್ತದೆ. ಪಾಲಕರು ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವಂತೆ ಕರೆ ಣಿಡಿದರು.
ಈ ಶಿಭಿರದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಮ್ ಬಿ ಪಾಟೀಲ, ಮುಖ್ಯೋಪಾಧ್ಯಾಯ ಜಿ ಆರ್ ಮಾಳಗಿ, ಆರ್ ಬಿ ಢವಳೇಶ್ವರ, ಎಸ್ ಬಿ ಕೊಂಡಿ, ಡಾ. ಗೋಪಾಲ ವಾಘ್ಮೋಡೆ, ಡಾ. ಬಿ ಎಚ್ ಬಾಗಲಕೋಟ, ಡಾ. ಸಾವೀತ್ರಿ, ಡಾ. ನೀತೇಶಕುಮಾರ ಸೇರಿದಂತೆ ಅನೇಕರು ಇದ್ದರು.