ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ: ಪಾಟೀಲ
ಇಂಡಿ. ಪ್ರತಿಯೊಬ್ಬರು ಅಂತರಂಗದ ಧ್ವನಿಗೆ ಓಗೊಟ್ಟು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿದರು.
ಗುರುವಾರ ತಾಲೂಕಿನ ಅಗರಖೇಡ ಗ್ರಾಮದ ಸಿದ್ದಾರೂಢ ಮಠದಲ್ಲಿ 108 ಲಿಂಗಗಳ ಪ್ರಾಣ ಪ್ರತಿಷ್ಠಾಪನೆಯ ಧರ್ಮಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ನಾಗರಿಕ ಸಮಾಜದ ಪ್ರಗತಿಗೆ ಮಠ ಮಾನ್ಯಗಳು ಅಪಾರ ಕೊಡುಗೆ ನೀಡುತ್ತಿವೆ. ಭಕ್ತರ ಸಹಕಾರದಿಂದ ಮಠಗಳು ವಿವಿಧ ಧಾಮರ್ಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದರು.
ಧರ್ಮಸಭೆಯಲ್ಲಿ ಅಭಿನವ ಸಿದ್ದಾನಂದ ಮಹಾಸ್ವಾಮಿಗಳು, ಅಭಿನವ ಶಿವಾನಂದ ಮಹಾಸ್ವಾಮಿಗಳು, ಕೈಲಾಸಪತಿ ಮಹಾಸ್ವಾಮಿಗಳು, ಮದ್ದಾನಿ ಮಹಾರಾಜರು, ಬಸವಾನಂದ ಸ್ವಾಮಿಗಳು, ನಾಗಲಿಂಗಯ್ಯ ಸ್ವಾಮಿಗಳು, ಚಂದ್ರಶೇಖರ ಶಾಸ್ತ್ರಿಗಳು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಮಲ್ಲಣ್ಣ ಸಾಹುಕಾರ ತೋಳನೂರ, ಸಂಜೀವ ಐಹೊಳೆ, ವೆಂಕಟೇಶ ಕಟ್ಟಿ, ಗುರುನಾಥ ಹಾವಳಗಿ, ವಿಠ್ಠಲಗೌಡ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.
ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ಮಾಜಿ ತಾ.ಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ ಕಲ್ಪಿಸಿದ್ದರು.