ಇಂಡಿ

ಸರ್ಕಾರ ಮಧ್ಯಮ ವರ್ಗದ ಮಕ್ಕಳಿಗೂ ಉಚಿತ ಶಿಕ್ಷಣ ನೀಡುತ್ತಿದೆ: ಈಶ್ವರ

ಸರ್ಕಾರ  ಮಧ್ಯಮ ವರ್ಗದ ಮಕ್ಕಳಿಗೂ ಉಚಿತ ಶಿಕ್ಷಣ ನೀಡುತ್ತಿದೆ: ಈಶ್ವರ
ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕ

ಇಂಡಿ: ಸಮಾಜದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಸಕರ್ಾರ 16 ವರ್ಷಗಳವರೆಗೆ ಉಚಿತ ಶಿಕ್ಷಣ ಕಡ್ಡಾಯವೆಂದು ಘೋಷಿಸಿ, ಬಡ, ಮಧ್ಯಮ ವರ್ಗದ ಮಕ್ಕಳಿಗೂ ಉಚಿತವಾಗಿ ಶಿಕ್ಷಣ ನೀಡುತ್ತಿದೆ ಎಂದು ದಿವಾಣಿ ನ್ಯಾಯಾಧೀಶ ಈಶ್ವರ ಎಸ್.ಎಮ್ರವರು ಹೇಳಿದರು.

ಶನಿವಾರ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ಹಕ್ಕು ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.

ಬಡ ಮಕ್ಕಳ ಶಿಕ್ಷಣಕ್ಕಾಗಿ ವಿಷೇಶ ಯೋಜನೆಯ ಮೂಲಕ ಅವರಿಗೂ ಶಿಕ್ಷಣ ನೀಡುವ ಕಾರ್ಯ ಮಾಡಿದೆ. ಪ್ರಕೃತಿಯ ವಿಕೋಪದಿಂದ ಅನಾಥರಾದ ಮಕ್ಕಳಿಗೆ ಮತ್ತು ಸಮಾಜದಲ್ಲಿ ನಡೆದ ಅಹಿತಕರ ಘಟನೆಗಳಲ್ಲಿ ಅನಾಥರಾದ ಮಕ್ಕಳಿಗೆ ಸರ್ಕಾರ  ಅವರ ಶಿಕ್ಷಣ ಮತ್ತು ಅವರ ಬದುಕಿಗೆ ಆಸರೆಗಾಗಿ ಮಕ್ಕಳ ವೀಕ್ಷಣಾಲಯಗಳನ್ನು ತೆರೆದು ಅವರ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ವಕೀಲ ಜೆ.ಬಿ.ಬೇನೂರ ಅವರು ಮಕ್ಕಳ ಹಕ್ಕು ಕುರಿತು ಉಪನ್ಯಾಸ ನೀಡಿ ಮಗು ತಾಯಿಯ ಗರ್ಭದಲ್ಲಿಯೆ ತಂದೆಯ ಆಸ್ತಿಯ ಹಕ್ಕನ್ನು ಹೊಂದಿರುತ್ತದೆ ಮತ್ತು ಮಕ್ಕಳ ಹಕ್ಕು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುತ್ತೆಯಂದು ತಿಳಿದರು.

ಪ್ರಾಚಾರ್ಯ ಸಿ.ಸಿ.ಷೇಠೆ ಅದ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದೇವರಾಜು ಎಚ್.ಆರ್, ವಕೀಲಎಸ್.ಆರ್. ಬಿರಾದಾರ, ಎನ್.ಕೆ. ನಾಡಪುರೋಹಿತ ಉಪಸ್ಥಿತರಿದ್ದರು.



ಸುದ್ದಿ ಓದಿ