ಬಂಗಾರದ ಅಂಗಡಿ ಕಳ್ಳತನ : ಒಳ ನುಗ್ಗಿದ ಕಳ್ಳರು, ಆಭರಣ ದೋಚಿಕೊಂಡು ಪರಾರಿ
ರಾಣೇಬೆನ್ನೂರ: ಅಂಗಡಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬುಧವಾರ ಬೆಳಗಿನ ಜಾವ ನಗರದಲ್ಲಿ ನಡೆದಿದೆ. ನಗರ ಮೇಡ್ಲೇರಿ ರಸ್ತೆಯಲ್ಲಿನ ಶ್ರೀನಿಧಿ ಗೋಲ್ಡನ್ ಜ್ಯೂವೆಲರಿ ಅಂಗಡಿಯಲ್ಲಿನ ಕಬ್ಬಿಣದ ಶೆಟರ್ಸನ್ನು ಗ್ಯಾಸ್ ಕಟ್ಟರ್ ನಿಂದ ಬೇರ್ಪಡಿಸಿ ಸುಮಾರು ಒಂದೂವರೆ ಕೇಜಿಗೂ ಅಧಿಕ ಮೌಲ್ಯದ ಬೆಳ್ಳಿಯ ಆಭರಣ ಕಳುವು ಮಾಡಿದ್ದಾರೆ.
ಬಂಗಾರದ ಆಭರಣಗಳನ್ನು ಕಳವು ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ ತಂಡ ಮತ್ತು ಸ್ಥಳೀಯ ಹಿರಿಯ ಕಿರಿಯ ಪೊಲೀಸಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸಿಸಿ ಕ್ಯಾಮೆರಾಲ್ಲಿನ ದೃಶ್ಯಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.