ರಾಣೆಬೆನ್ನೂರ

ಜಾನಪದ ಕೇವಲ ಕಲೆಯಲ್ಲ ತಳಮೂಲದ ಬದುಕು: ಬಾಲಾಜಿ

ಜಾನಪದ ಕೇವಲ ಕಲೆಯಲ್ಲ ತಳಮೂಲದ ಬದುಕು: ಬಾಲಾಜಿ

ರಾಣೆಬೆನ್ನೂರು 03:  ಜಾನಪದ ಕೇವಲ ಕಲೆ ಅಲ್ಲ ಅದು ಗ್ರಾಮೀಣ ಜನರ ನೆಲ ಮೂಲದ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಮತ್ತು ಜಾನಪದ ಯುವ ಬ್ರಿಗೇಡ್ ಅಧ್ಯಕ್ಷ ಡಾ. ಎಸ್ ಬಾಲಾಜಿ ಹೇಳಿದರು. ಅವರು ನಗರ ಹೊರ ವಲಯದ ಆರ್ ಟಿ ಇ ಎಸ್ ಕಾಲೇಜು ಸಾಹುಕಾರ ಸಭಾಭವನದಲ್ಲಿ ನಡೆದ ಎನ್ ಎಸ್ ಎಸ್ ಘಟಕಗಳ ಟ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜನಪದ ಸಂಸ್ಕೃತಿ ವೇದ ಇತಿಹಾಸ ಕಾಲಗಳಿಂದಲೂ ಸಾಗಿಬಂದಿದೆ. ಆಧುನಿಕ ಭರಾಟೆ ಎಷ್ಟೇ ಇದ್ದರೂ ಸಹ ಬದುಕಿನ ಸೆಲೆಯಾಗಿರುವ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಗೆ ಎಂದಿಗೂ ಸಾವಿಲ್ಲ ಎಂದರು. 

ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಯುವ ಜನಾಂಗದ ಭವಿಷ್ಯ ಅದಿಲ್ಲದೆ ಹೋದರೆ ವ್ಯಕ್ತಿತ್ವ ನಿರ್ಮಾಣವಿಲ್ಲ ಹಾಗಾಗಿ ಇಂದಿನ ವಿದ್ಯಾರ್ಥಿ ಗಳು ಇವೆಲ್ಲವುಗಳನ್ನು ಪಾಠ ಪ್ರವಚನಗಳ ಜೊತೆಗೆ ಮೈಗೂಡಿಸಿಕೊಂಡು ಈ ದೇಶದ ಮತ್ತು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಇಂದಿನ ಅಗತ್ಯವಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾ.ತಾ.ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸೀತಾ ಕೋಟಿ ಅವರು ಮಾತನಾಡಿ, ಜನಪದರ ಬದುಕು ಅತ್ಯಂತ ಸರಳ ಮತ್ತು ಸುಂದರವಾಗಿತ್ತು.ಆಧುನಿಕ ಬದುಕಿನಲ್ಲಿ ಎಲ್ಲವೂ ಯಂತ್ರಮಯವಾಗಿ, ಯಾವುದೇ ದೈಹಿಕ ಶ್ರಮವಿಲ್ಲದ ಕಾರಣ ಅನೇಕ ರೀತಿಯ ರೋಗ ರುಜಿನಗಳಿಗೆ ಈಡಾಗುತ್ತಿದ್ದೇವೆ ಎಂದು ವಿಷಾದಿಸಿದರು. ಪರಿಷತ್ ರಾಜ್ಯ ಸಂಚಾಲಕ ಕೆ.ಎಸ್. ಕೌಜಲಗಿ ಅವರು ಜನಪದ ಸಂಸ್ಕೃತಿ ರಕ್ಷಣೆಯಲ್ಲಿ ಯುವ ಜನಾಂಗದ ಪಾತ್ರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಡಾ. ನಾಗರಾಜ ಎಸ್, ಡಾ. ರಮೇಶ್ ತೆವರಿ, ಆನಂದಪ್ಪ ಬಿ. ಹೆಚ್. ಜೋಗಿ, ಜೆ. ಸಿ. ಕಾಂತಪ್ಪ, ಜ್ಯೋತಿ ಗೌಳಿ, ತೌಶಿಫ್  ನದಾಫ್, ಡಾ. ಸರಸ್ವತಿ ಬಮ್ಮನಾಳ, ಎಫ್.ಎಚ್. ಮಾಚೇನಹಳ್ಳಿ, ಶಿವಕುಮಾರ್ ಬೆಣ್ಣಿ, ಡಾ.ಪಾಂಡಪ್ಪ ಕೊಪ್ಪದ, ಅಂಜನಾ ಪವಾರ್, ಬಿ ಎಂ ಗುಂಡಗಟ್ಟಿ, ಶಿವಯೋಗಿ ಹಾವೇರಿ ಸೇರಿದಂತೆ ಮತ್ತಿತರ ಗಣ್ಯರು, ವಿವಿಧ ವಿಭಾಗಗಳ  ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು. ಕಾಲೇಜು ಪ್ರಾಚಾರ್ಯ ಸಿ. ಎಹರಿಹರ ಅವರು ಸಮಾರಂಭದ ಅಧ್ಯಕ್ಷತೆ.ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧಾ  ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.ವರ್ಷ ಸಂಗಡಿಗರು ಪ್ರಾರ್ಥಿಸಿದರು, ವರ್ಷಿಣಿ ನಿರೂಪಿಸಿ, ಶಿವಕುಮಾರ್ ಬೆಣ್ಣಿ ವಂದಿಸಿದರು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಲಾಪ್ರದರ್ಶನವು ಸಾರ್ವಜನಿಕರ ಗಮನ ಸೆಳೆದವು 

ಸುದ್ದಿ ಓದಿ