ಇಂಡಿ

ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆ

ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆ

ಇಂಡಿ 03: 12 ನೇ ಶತಮಾನದ ಶರಣರ ವಚನಗಳನ್ನು ಸಮಾಜಕ್ಕೆ ನೀಡಿದ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಎಂದು ಸಿದ್ಧೇಶ್ವರ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿ.ಜಿ. ಬಿರಾದಾರ ಹೇಳಿದರು.

ಶನಿವಾರ ಪಟ್ಟಣದ ಸಿದ್ದೇಶ್ವರ ಬ್ಯಾಂಕಿನ ಆವರಣದಲ್ಲಿ ನಡೆದ ಹಳಕಟ್ಟಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಎಮ್.ಎಸ್. ಪಾಟೀಲ ಮಾತನಾಡಿ, ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು ವಚನಗಳನ್ನು ಮುದ್ರಿಸಿದವರು ಫ.ಗು.ಹಳಕಟ್ಟಿಯವರು. ಈ ರೀತಿ 250 ವಚನಕಾರರ ಸಾಹಿತ್ಯವನ್ನು ಸಂಶೋಧಿಸಿ ಪ್ರಕಟಿಸಿದರು ಎಂದರು. 

ಆರ್.ಆಯ್. ಮಠ, ಡಿ.ಸಿ. ಮಿರಜಿ, ಬಿ.ಆರ್. ಪಾಟಿಲ, ಭಾಗ್ಯಾ ಪಂಡಿತ, ದಯಾನಂದ ಹಿರೋಳಿ, ಅಣ್ಣಾರಾಯ ಬಳ್ಳೊಳ್ಳಿ, ವಿಶ್ವನಾಥ ಬಿಸನಾಳ ಮತ್ತಿತರಿದ್ದರು. 


ಸುದ್ದಿ ಓದಿ