ಇಂಡಿ

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹುಮುಖ್ಯ: ಪಾಟೀಲ

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹುಮುಖ್ಯ: ಪಾಟೀಲ
ಇಂಡಿ ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಅವರ ನೂತನ ಕಟ್ಟಡ ಭವನ ಲೋಕಾರ್ಪಣೆಗೊಳಿಸಿ ಶಾಸಕ ಯಶವಂತ್ರಾ

ಇಂಡಿ: ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಸಂಸ್ಕಾರ ನೀಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಅವರ ನೂತನ ಕಟ್ಟಡ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು.

ಶಿಕ್ಷಣ ಮನುಷ್ಯನ, ಸಂಸ್ಕಾರ ನಡೆ, ನುಡಿ ಮಾನವೀಯ ಬದುಕಿಗೆ ದಾರಿ ದೀಪವಿದ್ದಂತೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಶಿಕ್ಷಣ ಪಡೆದು ಸಮಾಜ ನಿರ್ಮಾಣ ಮಾಡಿದ್ದಾರೆ. ಭಾರತ ದೇಶ ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದೆ. ನಮ್ಮಲ್ಲಿ ಇರುವಷ್ಟು ಗುಡಿ ಗುಂಡಾರ, ಮಠ, ಪುಣ್ಯಕ್ಷೇತ್ರಗಳು ಬೇರೆ ದೇಶಗಳಲ್ಲಿ ಕಾಣುವುದಿಲ್ಲ ಎಂದರು.

ಇತಿಹಾಸ ಮರೆತವರು ಇತಿಹಾಸ ಸೃಷಿಸಲಾರರು. ಈ ಹಿಂದೆ ನಿಮ್ಮ ಗ್ರಾಮದ ಸಾರ್ವಜನಿಕರಿಗೆ ಹಾಯ್ದಾಡಲು ತೊಂದರೆಯಾಗಿತ್ತು. ಇದನ್ನು ನಾನು ಹೇಳಿದಂತೆ ಮಾಡಿರುವೆ. ಈ ಭಾಗದಲ್ಲಿ ನೀರಿನ ತೊಂದರೆ ಇತ್ತು ಸದ್ಯ ತಡವಲಗಾ, ಕಪನಿಂಬರಗಿ, ಕೋಟ್ನಾಳ ಕೆರೆಗಳು ತುಂಬಿವೆ. ಮುಂಬರುವ ದಿನಗಳಲ್ಲಿ ಸಂಪೂರ್ಣ ನೀರಾವರಿಯಾಗಲಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ರಾಚಯ್ಯ ಹಿರೇಮಠ ವಹಿಸಿದ್ದರು. ಸಿದ್ದರಾಯ ಹಡಪದ, ಬಮಾಜ ಪೂಜಾರಿ, ಚಂದ್ರಕಾಂತ ಗೋಡೆಕಾರ, ಮಲ್ಲುಗೌಡ ಕುಮಟಗಿ, ಶಿಕ್ಷಕ ಉಮದಿ, ಜಕ್ಕರಾಯ ಪೂಜಾರಿ, ಮಾಂತು ಪೂಜಾರಿ, ಪರಶುರಾಮ ಕಾಂಬಳೆ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಿದ್ದಪ್ಪ ಹೊಸಮನಿ, ಸುರೇಶ ಕಾಂಬಳೆ, ಬಸವರಾಜ ದೊಡಮನಿ, ಮಂಜುನಾಥ ಕಾಂಬಳೆ ಹುಸನಪ ಹೊಸಮನಿ, ಜಯಕುಮಾರ ಹೊಸಮನಿ, ಶಿವಪ್ಪ ಹೊಸಮನಿ, ರಾಹುಲ ಕಾಂಬಳೆ, ಪ್ರವಾಹ ಕಾಂಬಳೆ, ಮಹೇಶ ಕಾಂಬಳೆ, ಕಾಂಬಳೆ, ಅನೀಲ ಹೊಸಮನಿ, ಗಣಪತಿ ಹೊಸಮನಿ, ಯಲ್ಲಪ್ಪ ಕಾಂಬಳೆ ಹೊನ್ನಪ್ಪ ಕಾಂಬಳೆ ಸೇರಿದಂತೆ ಕೊಟ್ನಾಳ ಗ್ರಾಮದ ದಲಿತ ಮುಖಂಡರು ಇದ್ದರು.


ಸುದ್ದಿ ಓದಿ