ಬಿಜೆಪಿ ಬೃಹತ್ ಸಾರ್ವಜನಿಕ ಸಭೆ: ಇಂದು ಪೂರ್ವಭಾವಿ ಸಭೆ
ಇಂಡಿ: ಭಾರತೀಯ ಜನತಾ ಪಾಟರ್ಿ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ಅರುಣ್ ಸಿಂಗ್ ಅವರು ನ.8ರಂದು ಇಂಡಿ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಬೃಹತ್ ಸಾರ್ವಜನಿಕ ಸಭೆಗೆ ಆಗಮಿಸುತ್ತಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾಜರ್ುನ ಕಿವುಡೆ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂದು ನಡೆಯುವ ಕಾರ್ಯಕ್ರಮದ ಪೂರ್ವಭಾವಿಯಾಗಿ ನ.5ರಂದು ಶನಿವಾರ ಬೆಳಗ್ಗೆ 11 ಘಂಟೆಗೆ ಶಾಂತೇಶ್ವರ ಮಂಗಲಕಾಯರ್ಾಲಯದಲ್ಲಿ ಪೂರ್ವಭಾವಿ ಸಭೆ ಕರೆದಿದ್ದು, ಈ ಸಭೆಗೆ ಜಿಲ್ಲೆಯಿಂದ ಬಿಜೆಪಿ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ್ ಕವಟಗಿ ಮತ್ತು ಬೆಳಗಾವಿ ವಿಭಾಗ ಪ್ರಧಾನ ಕಾರ್ಯದಶಿ ಪ್ರಕಾಶ್ ಅಕ್ಕಲಕೋಟ, ಹಾಗೂ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವರುದ್ರ ಬಾಗಲಕೋಟ, ಮಲ್ಲಿಕಾಜರ್ುನ್ ಜೋಗುರ್, ಬಸವರಾಜ್ ಬಿರಾದಾರ್, ರಾಜು ಪೂಜಾರಿ ಸೇರಿದಂತೆ ಅನೇಕ ನಾಯಕರು ಆಗಮಿಸುತ್ತಿದ್ದು. ಪೂರ್ವಭಾವಿ ಸಭೆಗೆ ಇಂಡಿ ಮಂಡಲದ ಬಿಜೆಪಿ ಪಕ್ಷದ ಮುಖಂಡರು ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಲು ಕೋರಿದರು.