ಗೋಕಾಕ್

'ಪ್ರವಚನದಿಂದ ಸಾಮರಸ್ಯ ಬೆಳೆಯಲು ಸಾಧ್ಯ'

'ಪ್ರವಚನದಿಂದ ಸಾಮರಸ್ಯ ಬೆಳೆಯಲು ಸಾಧ್ಯ'

ಲೋಕದರ್ಶನ ವರದಿ

ಗೋಕಾಕ 13: ಪ್ರವಚನದಿಂದ ಸಾಮರಸ್ಯ ಬೆಳೆಯಲು ಸಾಧ್ಯವೆಂದು ಕಪರಟ್ಟಿ ಬಸವರಾಜ ಹಿರೇಮಠ ಸ್ವಾಮಿಜಿ ಹೇಳಿದರು.

ಅವರು 11ರಂದು ತಾಲೂಕಿನ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಮಠದ 17ನೇ ಜಾತ್ರಾ ಮಹೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಧಾಮರ್ಿಕತೆಯ ಕಡೆಗೆ ಜನರ ಒಲವು ಕಡಿಮೆಯಾಗಿದೆ. ಮನುಷ್ಯ ಜಗತ್ತಿನಲ್ಲಿ ಪ್ರೀತಿಯಿಂದ ನಡೆದುಕೊಂಡರೇ ಏನೆಲ್ಲ ಸಾಧಿಸಬಹುದು. ಜನರ ಪ್ರೀತಿಯ ಕೊರತೆ ಎದ್ದು ಕಾಣುತ್ತಿರುವುದು ಖೇಧಕರ ಸಂಗತಿ. ಇದಕ್ಕೆ ಪ್ರವಚನ ಮೂಲಕ ಸಾಮರಸ್ಯ ತರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಕುಮಾರದೇವರು ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹೂಲಿಕಟ್ಟಿ-ಕೊಳವಿ ಗ್ರಾಮದ ಸದ್ಭಕ್ತರು ಇದ್ದರು.

ಸುದ್ದಿ ಓದಿ