ಮಹಿಳೆಯರ ಸಬಲೀಕರಣವೇ ಗ್ರಾಮದ ಸಬಲೀಕರಣ: ಐಹೊಳೆ
ಲೋಕದರ್ಶನ ವರದಿ
ಮಾಂಜರಿ 20: ಸ್ವಸಹಾಯ ಸಂಘಗಳಿಂದ ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಸಾಧ್ಯವಾಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಕುಟುಂಬ ನಿರ್ವಹಣೆಯಲ್ಲಿ ಸಮರ್ಥರಾಗಿದ್ದಾರೆ. ಸಂಘಗಳಿಂದ ಸಿಗುವ ಸಾಲ ಪಡೆದು ಉದ್ಯೋಗಗಳಲ್ಲಿ ತೊಡಗಿದ್ದಾರೆ. ಮಹಿಳೆಯರ ಸಬಲೀಕರಣವೇ ಗ್ರಾಮದ ಸಬಲೀಕರಣ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕೂಡ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲರೂ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಎಂದು ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಬಾಗ ಶಾಸಕರು ಆದ ಧೂರ್ಯೋಧನ ಐಹೊಳೆ ಹೇಳಿದರು.
ಇಂದು ಸಮೀಪದ ಬಾವನ ಸೌಂದತ್ತಿ ಗ್ರಾಮದ ವಸಂತ ನಗರದಲ್ಲಿ ಸ್ಪೂರ್ತಿ ಸಂಸ್ಥೆಯವರ ಸಾವಿತ್ರಿಬಾಯಿ ಪುಲೆ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಸಾಲ ಪಡೆದು ಹೈನುಗಾರಿಕೆ, ಟೈಲರಿಂಗ್, ವ್ಯಾಪಾರ, ಮೊದಲ ಬಸವ ಉದ್ಯೋಗಗಳಿಂದ ಬದುಕು ಕಟ್ಟಿಕೊಳ್ಳಬೇಕು. ಹಾಗೂ ಸಂಘದ ಸಾಲವನ್ನು ಅವಧಿಗೆ ಮುನ್ನ ಮರುಪಾವತಿಸಿ ಸಂಘ ಅಭಿವೃದ್ಧಿಗೆ ಶ್ರಮಿಸಬೇಕು. ಎಂದರು.
ಜಯಶ್ರೀ ಸೂರ್ಯವಂಶಿ, ದೀಪಾ ಗಾಣಿಗೇರ, ಕಾವೇರಿ ಹೊಡೆದ, ತಾತ್ಯಾಸಾಹೇಬ ಕಾಟೆ, ಅಜಿತ ಖೇಮಲಾಪುರೆ, ಅನಿಲ ಹಂಜೆ, ಅಣ್ಣಪ್ಪಾ ಬೋವಿ, ಪ್ರಶಾಂತಕುಮಾರ ಭೂವಿ, ದಿನಕರ ಕಾಟೆ, ಭೈರು ಚೌಗಲೆ, ರಂಜಾನ ಮಕಾಂದಾರ, ಸದಾಶಿವ ಗೋರ್ಪಡೆ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು