ರಾಣೆಬೆನ್ನೂರ

ಗ್ರಾಮೀಣ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್

ಗ್ರಾಮೀಣ ಮಟ್ಟದ ಹಾರ್ಡ್  ಟೆನ್ನಿಸ್ ಬಾಲ್ ಕ್ರಿಕೆಟ್

ರಾಣೆಬೆನ್ನೂರು 10:  ಮಾನಸಿಕ ದೈಹಿಕ ಬೌದ್ಧಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಇಂದಿನ ಯುವ ಜನಾಂಗ ನಿತ್ಯದ ಬದುಕಿನಲ್ಲಿ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಶಾಸಕ ಅರುಣ್ ಕುಮಾರ್ ಪೂಜಾರ ಹೇಳಿದರು. ಅವರು ಗುರುವಾರ  ತಾಲೂಕಿನ ಕುಪ್ಪೇಲೂರು ಗ್ರಾಮದ ಚೌಡೇಶ್ವರಿ  ಜಾತ್ರೋತ್ಸವದ ಪ್ರಯುಕ್ತ ಗ್ರಾಮದ  ಕುಮದ್ವತಿ ಕ್ರಿಕೆಟ್ ಕ್ಲಬ್  ಆಯೋಜಿಸಿದ್ದ ಗ್ರಾಮೀಣ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದರು. ಯುವಕರು ದೇಶದ ಆಸ್ತಿ  ಆರೋಗ್ಯವಂತ ಜೀವನ ಇರಬೇಕಾದರೆ ಕಬಡ್ಡಿ, ಕುಸ್ತಿ ಮತ್ತಿತ ರೆ ಕ್ರೀಡೆಗಳು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ್ ನರಸಗೊಂಡರ, ಬಿಜೆಪಿ ಮುಖಂಡ ಬಸವರಾಜ ಹುಲ್ಲತ್ತಿ, ಇನ್ನೋರ್ವ ಮುಖಂಡ ಬಸವರಾಜ ಚಳಗೇರಿ ಸೇರಿದಂತೆ ಗ್ರಾಮದ ಮತ್ತಿತರ ಗಣ್ಯರು ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ಯುವಕರು ಕ್ರೀಡಾಪಟುಗಳು ಉಪಸ್ಥಿತರಿದ್ದರು. 

ಸುದ್ದಿ ಓದಿ