ಗೋಮಾತೆಗೆ ಸೀಮಂತ ಕಾರ್ಯಕ್ರಮ
ಸಂಬರಗಿ: ಶಿನಾಳ ಗ್ರಾಮದ ಪ್ರಗತಿಪರ ರೈತ ರಾಮಚಂದ್ರ ಬಾಬು ಕವಠೆಕರ ಇವರು ತಮ್ಮ ಮನೆಯ ಗೋಮಾತೆಯ(ಆಕಳು) ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದ ಎಲ್ಲಾ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಮಯದಲ್ಲಿ ವಿಮಲ ಕವಠೇಕರ, ದೀಪಕ ಕವಠೆಕರ, ಮೋಹಿಣ ಕವಠೇಕರ, ಜಯಶ್ರೀ ಪಾಟೀಲ, ಬಾಬಾಸಾಹೆಬ ಪಾಟೀಲ ಹಾಗೂ ಗ್ರಾಮದ ಅನೇಕ ಗಣ್ಯರು ಇದ್ದರು.