ಅಥಣಿ

ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ

ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ

ಸಂಬರಗಿ : 2023 ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಶಿರೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಿರೂರ ಹಾಗೂ ಪಾಂಡೇಗಾಂವ ಗ್ರಾಮಗಳ ಮತಗಟ್ಟೆಯಲ್ಲಿ ಪ್ರತಿಶತ 100 ರಷ್ಟು ಮತದಾನ ಮಾಡುವಂತೆ ಗುರಿ ಹೊಂದಿದ್ದೆವೆ ಎಂದು ಶಿರೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಸಂತೆ ಹೇಳಿದರು.

ಶಿರೂರ ಗ್ರಾಮದಲ್ಲಿ ಪ್ರಜಾಪ್ರಭುತ್ವ ರಾಷ್ರ್ಟೀಯ ಹಬ್ಬದ ಮಾದರಿಯಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.

 ಗಡಿ ಗ್ರಾಮಗಳಲ್ಲಿ ಮತದಾರರಿಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಹಾಗೂ ಯಾವೂದೇ ಆಮಿಷಗಳಿಗೆ ಮೊರೆ ಹೋಗದಂತೆ, ತಮ್ಮ ಮತವನ್ನು ಯಾರಿಗೂ ಮಾರಾಟಮಾಡದೆ ಮತ ಚಲಾಯಿಸುವಂತೆ ಮನವಿ ಮಾಡಿ ಜಾಗೃತಿ ಮೂಡಿಸಲಾಯಿತು ಎಂದು ಹೇಳಿದರು. 

ಗ್ರಾಮದ ವೃದ್ದ ಮಹಿಳೆಯಾದ ಭಾಮಾಬಾಯಿ ಚೌಗುಲೆ ವಯಸ್ಸು 75 ಆದರೂ ಸಹ ಇಲ್ಲಿಯವರೆಗೆ 13 ನೇ ವಿಧಾನಸಭಾ ಚುನಾವಣೆ ಮತ ಚಲಾಯಿಸುತ್ತೆನೆ. ನಾನು ಯಾವೂದೆ ಆಮಿಷಗಳಿಗೆ ಮೊರೆ ಹೋಗದೆ ಮತ ಚಲಾಯಿಸುತ್ತೆನೆ. ಎಲ್ಲಾ ಮತದಾರರೂ ನಿಸ್ಪಕ್ಷಪಾತ ಮತಚಲಾಯಿಸಬೇಕು. ಭಾರತದ ಸಂವಿಧಾನ ಮತದಾನ ಮಾಡಲು ಅಧಿಕಾರ ನೀಡಿದೆ. ಪ್ರತಿಯೊಂದು ಕುಟುಂಬದಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ವಿನಂತಿ ಮಾಡಿದರು.

ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಎಮ್.ಬಿ.ಪಾಟೀಲ, ಗ್ರಾ.ಪಂ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಡಗಿ, ಗ್ರಾ.ಪಂ ಕ್ಲಾರ್ಕ ಸಂಜಯ ಸಕಾನಟ್ಟಿ ವಿನಾಯಕ ಗಡದೆ, ಶಾಲಾ ಮುಖ್ಯೋಪಾಧ್ಯಯ ಕೆ.ಡಿ.ಖುಟ್ಟೆ, ಮತಗಟ್ಟೆ ಅಧಿಕಾರಿಗಳಾದ ಕುಸುಮ ಕೋಳೆಕರ ಹಾಗೂ ಅಶ್ವಿನಿ ಮೊಪಗಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಹಿರಿಯ ಮತದಾರರು ಉಪಸ್ಥಿತರಿದ್ದರು.

ಜಂಬಗಿ

ನಮ್ಮ ನಡೆ ಮತಗಟ್ಟೆಯ ಕಡೆ ಈ ಕಾರ್ಯಕ್ರಮದ ದ್ವಜಾರೋಹಣ ಮತಗಟ್ಟೆ ಅಧಿಕಾರಿಯಾದ ವಿಠ್ಠಲ ಕನ್ನೂರ ನೆರವೆರಿಸಿದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಮುತ್ತಪ್ಪ ಪೂಜಾರಿ, ಪಿಡಿಓ ಸೋಮು ರಾಥೋಡ, ಮತಗಟ್ಟೆ ಅಧಿಕಾರಿ ಸುಭಾಸ ನಾಗನ್ನವರ ಶಿವಾಜಿ ಕೋಳೆಕರ, ವಿಠ್ಠಲ ಹಳಬ, ಇನ್ನಿತರರು ಉಪಸ್ಥಿತರಿದ್ದರು.

ಸಂಬರಗಿ

ಸಂಬರಗಿ ಗ್ರಾಮದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಈ ಕಾರ್ಯಕ್ರಮದ ದ್ವಜಾರೋಹಣ ಮತಗಟ್ಟೆ ಅಧಿಕಾರಿಯಾದ ಕೆ.ಬಿ.ಅಪ್ಪಾಜಿ ನೆರವೇರಿಸಿದರು. ಈ ವೇಳೆ ಪ್ರಾನ ಗುರುಗಳು ತಾನಾಜಿ ಪಾಟೀಲ, ಆರ್ ಕೆ ಸೋನಾರ, ಎ.ಸಿ ಕುಂಬಾರ, ರಾಘು ಹೊಸಮನಿ, ಪಿಡಿಓ ಧರೆಪ್ಪಾ ತಗಲಿ, ಆಡಳಿತಾಧಿಕಾರಿ ಮಂಜುಗೌಡಾ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಸುದ್ದಿ ಓದಿ