ಜಿಲ್ಲೆಯ ದಿನಗೂಲಿ ಹೊರ ಗುತ್ತಿಗೆ ನೌಕರರಿಗೆ ವೇತನ ಬಿಡುಗಡೆಗೆ ಆಗ್ರಹ
ರಾಣೇಬೆನ್ನೂರು 23: ಹಾವೇರಿ ಜಿಲ್ಲೆಯಲ್ಲಿ ದಿನಗೂಲಿ ಹೊರಗುತ್ತಿಗೆ ನೌಕರರಿಗೆ ಕಳೆದ ಐದಾರು ತಿಂಗಳುಗಳಿಂದ ವೇತನವಿಲ್ಲದೆ ಅನೇಕ ಸಂಕಷ್ಟಗಳು ಎದುರಿಸುವಂತಾಗಿದೆ. ಈ ಕೂಡಲೇ ನೌಕರರಿಗೆ ವೇತನ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಗಿ ಅವರು ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ವಸತಿ ನಿಲಯಗಳಲ್ಲಿ, ಅಡುಗೆಯವರಾಗಿ, ಅಡುಗೆ ಸಹಾಯಕರು, ಜವಾನರು, ರಾತ್ರಿ ಕಾವಲುಗಾರರು ಸಕಾಲಕ್ಕೆ ವೇತನ ವಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕುರಿತು ಸಂಘವು ಅನೇಕ ಬಾರಿ ಮೌಕಿಕವಾಗಿ ಮನವಿ ಸಲ್ಲಿಸುತ್ತಾ ಬಂದಿದೆ.
ಆದರೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು, ಕೂಲಿ ಕಾರ್ಮಿಕರ ವಿರೋಧಿ ಧೋರಣೆ ಅನುಸರಿಸಿದಂತಾಗಿದೆ, ರಸ್ತೆಗಿಳಿದು ಹೋರಾಟ ಮಾಡುವ ಮುನ್ನ, ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕೂಡಲೇ ಬಾಕಿ ಇರುವ ಸಂಪೂರ್ಣ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿ, ಬವರಾಜ ಕೊಂಗಿ ಯವರು ಒತ್ತಾಯಿಸಿದ್ದಾರೆ