ಅಥಣಿ

ವಿರೋಧ ಪಕ್ಷದವರಿಗೆ ನನ್ನನ್ನು ಟೀಕಿಸಲು ಯಾವುದೇ ವಿಷಯ ಸಿಕ್ಕಿಲ್ಲ

ವಿರೋಧ ಪಕ್ಷದವರಿಗೆ ನನ್ನನ್ನು ಟೀಕಿಸಲು ಯಾವುದೇ ವಿಷಯ ಸಿಕ್ಕಿಲ್ಲ

ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ವಿಷ್ಣುವಾಡಿ, ಬೊಮ್ಮನಾಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಸಂಬರಗಿ 15: ವಿರೋಧ ಪಕ್ಷದವರಿಗೆ ನನ್ನನ್ನು ಟೀಕಿಸಲು ಯಾವುದೇ ವಿಷಯ ಸಿಕ್ಕಿಲ್ಲ. ಹೀಗಾಗಿ ಅಪ್ರಸ್ತುತ ಅಥವಾ ಸುಳ್ಳು ಮಾಹಿತಿ ಕೊಟ್ಟು ಮತದಾರರಲ್ಲಿ ಗೊಂದಲ ಅಥವಾ ಅಪಪ್ರಚಾರ ಮಾಡುವ ಯತ್ನ ನಡೆಸಿದ್ದು, ಮತದಾರರ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದು ಶಾಸಕ ಶ್ರೀಮಂತ ಪಾಟೀಲರು ಹೇಳಿದರು. 

ಅವರು ವಿಷ್ಣುವಾಡಿ ಹಾಗೂ ಬೊಮ್ಮನಾಳ ಗ್ರಾಮದಲ್ಲಿ 7.23 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮಾತನಾಡುತ್ತಿದ್ದರು.  

       ಕಾಗವಾಡ ಮತಕ್ಷೇತ್ರದಲ್ಲಿ ನನ್ನ ಅಧಿಕಾರವಧಿಯಲ್ಲಿ 3000 ಕೋಟಿಗೂ ಅಧಿಕ ಅನುದಾನದಲ್ಲಿ ಜನಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದ್ದು, ಈ ಪೈಕಿ  ಮದಭಾವಿ ಭಾಗದಲ್ಲಿ 100 ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸಿರುವೆ.  ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಮತ ನೀಡಿದ ವಿಷ್ಣುವಾಡಿ ಗ್ರಾಮದ ಗ್ರಾಮಸ್ಥರ ಸಹಕಾರಕ್ಕೆ ನಾನು ಚಿರ ಋಣಿಯಾಗಿರುವೆ. ಎಂದರು. ಬಡ, ನಿರ್ಗತಿಕರಿಗೆ ಮಾಡಿದ ಸೇವೆಗೆ ಸಮಾಜ ಮನ್ನಣೆ ನೀಡುತ್ತದೆ ಎನ್ನುವುದಕ್ಕೆ ವಿಷ್ಣುವಾಡಿ ಗ್ರಾಮಸ್ಥರು ನನಗೆ ಮಾಡಿದ ಆತ್ಮೀಯ ಸನ್ಮಾನವೇ ಸಾಕ್ಷಿ ಎಂದ ಅವರು ಜನಸೇವೆಯೇ ಜನಾರ್ಧನ ಸೇವೆ ಎಂದು ನಾನು ನಂಬಿರುವೆ ಎಂದರು. 

     ಮದಭಾವಿ ಗ್ರಾಮದ ಮಹಾದೇವ ಕೋರೆ ಮಾತನಾಡಿ, ಗ್ರಾಮಗಳ ಅವಶ್ಯಕತೆ ಅನುಸಾರ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಶಾಸಕ ಶ್ರೀಮಂತ ಪಾಟೀಲರು ಅನುಷ್ಠಾನ ಗೊಳಿಸುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡದವರೂ ಕೂಡ ನನಗೆ ಮತ್ತೊಂದು ಅವಕಾಶ ಕೊಡಿ ಎಂದು ಹೇಳಿದರು. 

      ಚುನಾವಣೆ ಸಮಯದಲ್ಲಿ ಕೇಳುತ್ತಿರುವವರಿಗೂ ಮತದಾರ ಬಂಧುಗಳು ತಕ್ಕ ಉತ್ತರ ನೀಡಬೇಕು ಎಂದ ಅವರು ಕುಡಿಯುವ ನೀರು, ನೀರಾವರಿ, ಶಿಕ್ಷಣ, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಗೆ ಶ್ರೀಮಂತ ಪಾಟೀಲರು ಆದ್ಯತೆ ನೀಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಭಾರೀ ಬಹುಮತದಿಂದ ಆಯ್ಕೆಗೊಳಿಸೋಣ ಎಂದರು. 

       ವಿಷ್ಣುವಾಡಿ ಗ್ರಾಮದ ರಾಮ ಕದಮ್ ಮಾತನಾಡಿ, ಕಾಗವಾಡ ಶಾಸಕರು ತಮ್ಮ ಹೆಸರಿನಂತೆ ಹೃದಯದಿಂದಲೂ ಶ್ರೀಮಂತರಾಗಿದ್ದು, ಇದೇ ಮೊದಲ ಬಾರಿಗೆ ಸುಮಾರು 4 ಕೋಟಿ ರೂ.ಅನುದಾನದಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದರು. 

      ವಿಷ್ಣು ವಾಡಿ ಗ್ರಾಮದ ಮುಖಂಡ ಭಾನುದಾಸ ಖೋತ, ಸಂಬರಗಿ ಗ್ರಮದ ಧುರೀಣ ಅಬ್ದುಲ್ ಮುಲ್ಲಾ ಮಾತನಾಡಿದರು. ಈ ಸಂದರ್ಭದಲ್ಲಿ ಧುರೀಣರಾದ ಈಶ್ವರ ಕುಂಬಾರೆ, ಡಿ.ಕೆ.ಪವಾರ, ಆರ್.ಎಮ್.ಪಾಟೀಲ, ಮುರುಘೇಶ್ ಪಾಟೀಲ, ಸಿದ್ಧು ಖೋತ, ಅರುಣ ಪಾಟೀಲ, ರವಿ ಗಾವಡೆ, ರಾವಸಾಹೇಬ ಘೋರ್ಪಡೆ, ಅಶೋಕ ಮೋರೆ, ಬಾಳು ಮಗದುಮ್, ಪೊಪಟ ಜಾಧವ, ಜಿ.ಪಂ ಉಪವಿಭಾಗದ ವೀರಣ್ಣಾ ವಾಲಿ, ಅಮರ ಮೇತ್ರಿ ಸಿಡಿಪಿಒ ಸಂಜೀವ ಕುಮಾರ ಸದಲಗಿ ಉಪಸ್ಥಿತರಿದ್ದರು.  

   ಶಾಸಕ ಶ್ರೀಮಂತ ಪಾಟೀಲರು ವಿಷ್ಣುವಾಡಿ ಗ್ರಾಮದಲ್ಲಿ 173 ಲಕ್ಷ ವೆಚ್ಚದ ಜಲಜೀವನ್ ಮೀಧನ್, 10 ಲಕ್ಷ ವೆಚ್ಚದ ವಿಠ್ಠಲ್ ಮಂದಿರ ಸಮುದಾಯ ಭವನ, 150 ಲಕ್ಷ ವೆಚ್ಚದ ಹೈ ಮಾಸ್ಕ ಲೈಟ್ ಕಾಮಗಾರಿ, 200 ಲಕ್ಷ ವೆಚ್ಚದ ವಿಷ್ಣುವಾಡಿ ಭೋಸಲೆ ತೋಟ ರಸ್ತೆ ಕಾಮಗಾರಿ, 80 ಲಕ್ಷ ವೆಚ್ಚದ ವಿಷ್ಣುವಾಡಿ ಲಕ್ಷ್ಮೀವಾಡಿ ರಸ್ತೆ, 14 ಲಕ್ಷ ವೆಚ್ಚದ ಶಾಲಾ ಕೊಠಡಿ ಹಾಗೂ ಮೊಮ್ಮನಾಳ ಗ್ರಾಮದಲ್ಲಿ 130.50 ಲಕ್ಷ ವೆಚ್ಚದ ಜಲಜೀವನ ಮೀಶನ್, 100 ಲಕ್ಚ ವೆಚ್ಚದ ಹನುಮಾನ ಮಂದಿರದಿಂದ ಸಲಗರ ರಸ್ತೆ, 14 ಲಕ್ಷ ವೆಚ್ಚದ ಶಾಲಾ ಕೊಠಡಿ ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು 

ಸುದ್ದಿ ಓದಿ