ಜಾನಪದ ಕಲೆ- ಸಂಗೀತ ಕಲಿಯಲು ಸುವರ್ಣ ಅವಕಾಶ
ರಾಣೇಬೆನ್ನೂರು 29: ಜಾನಪದ ಕಲೆ, ದೊಡ್ಡಾಟ, ಸಣ್ಣಾಟ, ಕಂಸಾಳೆ ಮತ್ತು ಜನಪದ ಕಲಾ ಪ್ರಕಾರಗಳ ಕಲೆ ಮತ್ತು ಕಲಾವಿದರು ಇಂದು ಆಧುನಿಕ ಭರಾಟೆಯಲ್ಲಿ ನೇಪತ್ತಕ್ಕೆ ಸರಿಯುವಂತಾಗಿದೆ. ಇಂಥ ಸಂದರ್ಭದಲ್ಲಿ ನಗರದ ಮಾತೋಶ್ರೀ ಜಾನಪದ ಕಲೆ ಹಾಗೂ ಜನಪದ ಸಂಗೀತವನ್ನು ಕಲಿಯಲು ರಾಣೆಬೆನ್ನೂರು ಜನತೆಗೆ ಸುವರ್ಣ ಅವಕಾಶ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆಯು, ಆರಂಭಿಕವಾಗಿ ಕಂಸಾಳೆ ಕಲೆ ಬಗ್ಗೆ ತರಬೇತಿ ಕಾರ್ಯಗಾರ ಹಮ್ಮಿಕೊಂಡಿರುವ ರಾಗಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಸಾವಕ್ಕನವರ್ ಹೇಳಿದರು. ಅವರು ನಗರಸಭಾ ಭವನದಲ್ಲಿ ಆಯೋಜಿಸಿದ್ದ ಕಂಸಾಳೆ ಕಲೆ ತರಬೇತಿ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಣೆಬೆನ್ನೂರು ತಾಲೂಕು ಹಲವು ಕಲಾ ಪ್ರಕಾರಗಳ ಕಲೆಯನ್ನು ಮತ್ತು ಕಲಾವಿದರನ್ನು ಹೊಂದಿರುವ ತವರೂರು ಇಂತಹ ಕಲಾವಿದ ತವರೂರಲ್ಲಿ, ಅಂದಿನ ಕಲೆ ಮತ್ತು ಕಲಾವಿದರು, ನೇಪತ್ಯಕ್ಕೆ ಸರಿಯು ವಂತಾ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಿಷಾದಕರ ಸಂಗತಿ ಎಂದರು ತಮ್ಮ ಸಂಸ್ಥೆ ಕಲಾವಿದರ, ಪರಂಪರೆ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಲಿದೆ. ಎಂದ ಅವರು ಪ್ರಥಮವಾಗಿ ಕಂಸಾಳೆ ಕಲಾ ತರಬೇತಿ ಆಯೋಜಿಸಿದೆ ಪ್ರಯೋಜನವನ್ನು ತಾಲೂಕಿನ ಮತ್ತು ನಗರದ ಕಲಾವಿದರು ಪಡೆಯಬಹುದಾಗಿದೆ ಎಂದು ನೀಡಿದರು. ಶಿಬಿರದಲ್ಲಿ ಖ್ಯಾತ ಗಾಯಕರು, ಸಂಸ್ಕೃತಿ ಚಿಂತಕರು, ಕಲಾ ಗುರು ಎಂದೇ ಖ್ಯಾತನಾಮ ರಾಗಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರಿನ ಲಕ್ಷ್ಮಿ ರಾಮ್ ಅವರ ಮಾಗದರ್ಶನದಲ್ಲಿ ಕಂಸಾಳೆ ಕಲಾ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಂದರು. ಸಂಸ್ಥೆ ಪ್ರತಿ ಬಾರಿಯೂ ಹಂತ ಹಂತವಾಗಿ ಅಲ್ಲದೇ ನೆಲಮೂಲದ ಜಾನಪದ ಗೀತೆಗಳು, ಭಾವಗೀತೆಗಳು, ದೇಶಭಕ್ತಿ ಗೀತೆಗಳು, ವಚನಗಳು,ಅಂಬೇಡ್ಕರ್, ಬುದ್ಧ, ಹಾಗೂ ದಾರ್ಶನಿಕರ ಗೀತೆಗಳ ಕುರಿತು ತರಬೇತಿ ನೀಡಲಾಗುವುದು. ಅಲ್ಲದೆ ವಾದ್ಯ ಪರಿಕರಗಳ ಹಾಗೂ ಜಾನಪದ ನೃತ್ಯಗಳ ಕುರಿತು ಮಾಹಿತಿಯ ಜೊತೆಗೆ ತರಬೇತಿ ನೀಡಲಾಗುವುದು ಎಂದ ಸಾಕ್ಸೋ ಫೋನ್, ಕ್ಲಾರಿಯೋನೆಟ್ ಕಲಾವಿದ ಬಸವರಾಜ.ಸಾವಕ್ಕನವರ ಹೇಳಿದರು . ಕನಿಷ್ಠ 15 ವರ್ಷ ಮೇಲ್ಪಟ್ಟು 60 ವರ್ಷ ಒಳಗಿನ ಮಹಿಳೆಯರು ಮತ್ತು ಪುರುಷರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.ಶಿಬಿರ ಸ್ಥಳ ಮುನ್ಸಿಪಲ್ ಹೈ ಸ್ಕೂಲ್, ನಗರಸಭೆ ಕಲಾಭವನ ರಾಣೇಬೆನ್ನೂರು. ಹೆಸರು ನೊಂದಾಯಿಸಲು, 9945721711 ಸಂಪರ್ಕಿ ಸಬಹುದಾಗಿದೆ