ನ್ಯಾಯಾಲಯಕ್ಕೆ ಹೆಚ್ಚಿನ ಭದ್ರತೆಗೆ ಒತ್ತಾಯಿಸಿ ಮನವಿ
ಬೈಲಹೊಂಗಲ 02: ಪಟ್ಟಣದ ನ್ಯಾಯಾಲಯಕ್ಕೆ ಹೆಚ್ಚಿನ ಭದ್ರತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿ, ಬಾರ ಅಸೋಯೇಶನ್ ವತಿಯಿಂದ ವಕೀಲರು ಕಲಾಪಗಳಿಂದ ದೂರು ಉಳಿದು ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಎಂ.ಆರ್.ಸೋಮಣ್ಣವರ, ಕಾರ್ಯದರ್ಶಿ ಸಂತೋಷ ಬಾಂವಿ ಮಾತನಾಡಿ, ಕರುನಾಡಿನ ವೀರರ ನಾಡಿನಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಜನಿಸಿದ ಹೆಮ್ಮೆಯ ನಾಡಿನಲ್ಲಿರುವ ಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ 125 ವರ್ಷಗಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಇಂದಿನ ವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಈಚೆಗೆ ಸೆ. 29 ರಂದು ನ್ಯಾಯಾಲಯದ ಆವರಣದಲ್ಲಿ ವೈವಾಹಿಕ ಪ್ರಕರಣದ ಸಂಬಂದ ಬಂದ ಪಕ್ಷಗಾರ ಶಿವಪ್ಪ ನಿಂಗಪ್ಪ ಅಡಕಿ ಇವರು ತಮ್ಮ ಪತ್ನಿ ಜಯಮಾಲಾ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವದರಿಂದ ಇತಿಹಾಸ ಹೊಂದಿದ ನ್ಯಾಯಾಲಯಕ್ಕೆ ಕಪ್ಪು ಚುಕ್ಕೆಯಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರ ನ್ಯಾಯಾಲಯಕ್ಕೆ ಬರುವ ವಕೀಲರು, ಸಿಬ್ಬಂದಿ ವರ್ಗ, ಪಕ್ಷಗಾರರು ಭಯಭೀತರಾಗಿದ್ದಾರೆ. ಆದ್ದರಿಂದ ನ್ಯಾಯಾಲಯಕ್ಕೆ ಪ್ರತಿದಿನ ಮಹಿಳಾ ಮತ್ತು ಪುರುಷ ಪೊಲೀಸ ಸಿಬ್ಬಂದಿ ನೇಮಿಸಿ, ಆವರಣ ಪ್ರವೇಶಿಸುವ ಪ್ರತಿಯೊಬ್ಬರ ಪರೀಶೀಲನೆ, ಮೆಟಲ್ ಡಿಟೆಕ್ಟರ್ , ಸಿಸಿ ಕ್ಯಾಮರಾ ಅಳವಡಿಸಬೇಕು ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ವಿಶೇಷ ಪ್ಯಾಕೇಜ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಕೀಲರಾದ ಎ.ಆಯ್.ಅಥಣಿ, ಡಿ.ಆರ್.ಜೋಶಿ, ಎಸ್.ಎಸ್.ಆಲದಕಟ್ಟಿ, ಎಸ್.ಎಸ್.ಮಠದ, ಎಪ್.ಎ.ನಧಾಪ, ಆಯ್.ಎಸ್.ಪಾಟೀಲ, ಎಂ.ಎಂ.ಮಲ್ಲೇಶನವರ, ಎಂ.ಬಿ.ಶಿದ್ದನ್ನವರ, ವಿ.ಜಿ.ಕಟದಾಳ, ಎ.ಎಂ.ಶಿದ್ರಾಮನಿ, ಬಸವರಾಜ ದೊತರದ, ಈರ್ಪ ಹುಣಶೀಕಟ್ಟಿ, ವಿಶ್ವನಾಥ ಪೂಜೇರಿ, ಪೂಜಾ ಅಸುಂಡಿ, ಜಯಶೀ ಬೂದಿಹಾಳ, ರವಿ ದೊಡಮನಿ, ಅರುಣ ಎಲಿಗಾರ, ಸಂತೋಷ ಲದ್ದಿಕಟ್ಟಿ, ಶ್ರೀಕಾಂತ ವನಜಾರಿ, ಶಿವಾನಂದ ಹೊಸಮನಿ, ವಿಜಯಲಕ್ಷ್ಮಿ ಹಿರೇಮಠ, ಶಾಂತಾ ಸಿದ್ರಾಮನ್ನವರ, ಬಿ.ಆರ್.ಹರಿದಾಸ, ದೀಪಾ ಅಸುಂಡಿ, ಡಿ.ಎಸ್.ದೊಡಮನಿ, ಬಸವರಾಜ ಬೈಲವಾಡ, ವಿ.ಸಿ.ಸಂಗೊಳ್ಳಿ, ಎಸ್.ಎಂ.ಮೂಡಗಲಿ, ರಮೇಶ ಪತ್ತಾರ, ಡಿ.ಎಸ್.ಸಂಗೊಳ್ಳಿ, ಎ.ಬಿ.ನರಸನ್ನವರ ಮತ್ತಿತರರು ಇದ್ದರು.