ಮಾಗೋಡು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ರಾಣೇಬೆನ್ನೂರು 24: ಇತಿಹಾಸದಲ್ಲಿ ನಮ್ಮ ಪೂರ್ವಜರು ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ, ದೇವಾಲಯಗಳು, ಧರ್ಮ ಮಂದಿರಗಳು, ನೀರಿನ ಭವಣೆ ನೀಗಿಸಲು ಸಾರ್ವತ್ರಿಕವಾಗಿ ಕೆರೆ ಕಟ್ಟೆಗಳನ್ನು ನಿರ್ಮಿಸುವುದರ ಮೂಲಕ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದರು ಆದರೆ ಕಾಲ ಬದಲಾದಂತೆ ಆ ಪರಂಪರೆ ಇಂದು ಮರೆಯಾಗುತ್ತಿರುವ ಸಂದರ್ಭದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇಂತಹ ಪರೋಪಕಾರ ಕಾರ್ಯಗಳು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು, ಜಿಲ್ಲಾ ಯೋಜನಾ ನಿರ್ದೇಶಕ ನಾಗರಾಜ ಶೆಟ್ಟಿ ಹೇಳಿದರು. ಅವರು ತಾಲೂಕಿನ ಮಾಗೋಡು ಗ್ರಾಮದ ದೊಡ್ಡ ಕೆರೆಯ ಪುನ:ಛೇತ ನ ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಮಳೆ ಪ್ರಮಾಣ ಕಡಿಮೆಯಾದಾಗ, ಕೆರೆ,ಕಟ್ಟೆಗಳು ಒಣಗಿ ನೀರಿನ ಅಭಾವ ಸೃಷ್ಟಿಯಾಗುವುದು ಸಹಜ, ಕೆರೆ ಮಣ್ಣು ಹೊಳೆತ್ತುವುದರಿಂದ, ನೀರಿನ ಸೆಲೆ ಹೆಚ್ಚಾಗಿ, ಅಂತರ್ಜಲ ಪುನಃ ಚೇತನಗೊಂಡು ಸದಾಕಾಲ ಕೆರೆ ಭರ್ತಿಯಾಗಿರಲು ಸಹಕಾರಿಯಾಗಲಿದೆ ಎಂದರು.
ಗ್ರಾಮೀಣ ನಾಗರಿಕರು ಇಂಥಹ ಮಹತ್ವದ ಕಾರ್ಯಗಳಿಗೆ ಮುಂದಾಗಿ ಗ್ರಾಮದಲ್ಲಿ ಕೆರೆಗಳು ಪುನ್ಹ ಚೇತನ ಗೊಳಿಸಲು ಕೈಜೋಡಿಸಬೇಕು ಎಂದ ಅವರು ಇಲ್ಲಿವರೆಗೂ ರಾಜ್ಯದಲ್ಲಿ 519 ಕೆರೆಗಳನ್ನು ಪುನ: ಚೇತನಗೊಳಿಸಲಾಗಿದೆ ಎಂದರು. ಕಳೆದಾರು ವರ್ಷಗಳ ಅವಧಿಯಲ್ಲಿ ಕೆರೆಗಳ ಪುನಜರ್ಿವನಕ್ಕೆ ಮತ್ತು ಜೀವಸಂಕುಲ ರಕ್ಷಣೆಗಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಜಿ ಅವರು ಪವಿತ್ರ ಕಾರ್ಯಕ್ಕೆ ಮುಂದಾಗಿದ್ದಾರೆ, ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.