ರಾಣೆಬೆನ್ನೂರ

ಪೌರ ಸೇವಾ ನೌಕರರ ಗೌರವ ಸನ್ಮಾನ ಕಾರ್ಯಕ್ರಮ

ಪೌರ ಸೇವಾ ನೌಕರರ ಗೌರವ ಸನ್ಮಾನ ಕಾರ್ಯಕ್ರಮ

ರಾಣೇಬೆನ್ನೂರು 26:  ಪುಣ್ಯ ಮತ್ತು ಪಾಪ ಇವೆರಡನ್ನೂ ಜೊತೆಯಲ್ಲಿಯೇ ನಾವು ಬರೆದುಕೊಂಡು ಬಂದಿದ್ದೇವೆ.ದೈವಿ, ಮತ್ತು ದೇವತಾ ಗುಣಗಳು ಬೆಳೆಸಿಕೊಳ್ಳಬೇಕಾದರೆ ಭಗವಂತನ ಸಾಕ್ಷಾತ್ಕಾರ ಪಡೆಯಬೇಕಾಗುತ್ತದೆ ಎಂದು ರಾಣೇಬೆನ್ನೂರ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಮಾಲತಿಜಿಅಕ್ಕ ಹೇಳಿದರು.    

ರವಿವಾರ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಮಹಾಶಿವರಾತ್ರಿಯ ನಿಮಿತ್ತ ಆಯೋಜಿಸಿದ್ದ, "ಅನಂತ ಶಿವಲಿಂಗು" ದರ್ಶನ ಹಾಗೂ ಪೌರ ಸೇವಾ ನೌಕರರ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಭಗವಂತನಿಗೆ ಯಾವುದೇ ಜಾತಿ, ಮತ,ಭಿನ್ನ, ಭೇದ, ಭಾವ,ಇಲ್ಲ ಆತನ ದೃಷ್ಟಿಯಲ್ಲಿ ಮನುಷ್ಯರೆಲ್ಲರೂ ಒಂದೇ. ಕಾಯಕ ಮಾಡಲು  ನಾವೆಲ್ಲರೂ ಕರುಣಿಸಿದ ಮಾನವ ಜನ್ಮಕ್ಕೆ ಬಂದಿದ್ದೇವೆ, ಅವನು ಕೊಟ್ಟ ಆದೇಶವನ್ನು ಪರಿಪಾಲಿಸಿ, ಪೂರ್ಣಗೊಳಿಸಿ, ಮಾನವ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಾದ, ಬಹು ಜವಾಬ್ದಾರಿ ನಮ್ಮ ಮೇಲಿದೆ ಎಂದರು.     

   ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅನಂತ ಶಿವಲಿಂಗು ದರ್ಶನ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಅವರು ಮಾತನಾಡಿ, ಸಮಾಜದಲ್ಲಿ ಸಮಾನತೆಯಿಂದ ಬದುಕಿ ಬಾಳುವುದೇ, ನಿಜವಾದ ಮಾನವ ಧರ್ಮವಾಗಿದೆ, ಧರ್ಮದಲ್ಲಿ ಜನ್ಮವನ್ನು ಸಾರ್ಥಕ ಪಡಿಸಿಕೊಂಡಾಗ ಮಾತ್ರ ಪ್ರತಿಯೊಬ್ಬರೂ ಮುಕ್ತಿ ಹೊಂದಲು ಸಾಧ್ಯವಿದೆ ಎಂದರು.        

ಮಾನವನು ಶಾಂತಿ ನೆಮ್ಮದಿಯ ಬದುಕಿಗೆ, ಒತ್ತಡ ಮುಕ್ತ ಜೀವನಕ್ಕೆ, ಈಶ್ವರಿಯ  ವಿಶ್ವವಿದ್ಯಾಲಯವು, ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಲಿವೆ ಎಂದ ಅವರು, ವಾಣಿಜ್ಯ ನಗರದಲ್ಲಿರುವ ಕೇಂದ್ರವು ಸಾಕಷ್ಟು ಪ್ರಗತಿ ಕಂಡಿದ್ದರು ಸಹ, ಇಲ್ಲಿನ  ಭಕ್ತರ ಸಂಖ್ಯೆಗನುಗುಣವಾಗಿ ಮತ್ತಷ್ಟು ಅಭಿವೃದ್ಧಿ ಕಾಣಬೇಕಾದರೆ ಅಗತ್ಯವಿದೆ ಅದಕ್ಕಾಗಿ ತಾವು ಸಹ, ಇದರ  ಪ್ರಗತಿಗಾಗಿ ಆಥರ್ಿಕ ಸಹಾಯ ಓದಗಿಸುವುದಾಗಿ ಶಂಕರ್ ಅವರು ಭರವಶೆ, ನೀಡಿದರು.      

     ಮತ್ತೋರ್ವ ಅತಿಥಿ, ಶಾಸಕ ಅರುಣ್ ಕುಮಾರ್ ಪೂಜಾರ್ ಅವರು, ಒತ್ತಡ ಮುಕ್ತ ಜೀವನಕ್ಕಾಗಿ ವಿಶ್ವವಿದ್ಯಾಲಯ ಅತ್ಯುತ್ತಮ ಸೇವೆ ಸಲ್ಲಿಸುತ್ತಲಿದೆ. ಅಪಾರ ನಂಬಿಕೆ ಹೊಂದಿರುವ, ಸತತ ಪರಿಶ್ರಮ ಪಡುತ್ತಿರುವ, ಬಿಕೆ ಮಾರುತಿಜಿ ಅಕ್ಕ ಅವರು, ಧರ್ಮಭಿಮಾನದ ಸೇವೆ ಸಲ್ಲಿಸುತ್ತಿದ್ದಾರೆ, ಇದುವರೆಗೂ ಯಾವುದನ್ನು ಬಯಸದ ಅವರು ಭಕ್ತರ ಅನುಕೂಲಕ್ಕಾಗಿ, ಕಟ್ಟಡದ ವಿಸ್ತೀರ್ಣ ಬಯಸಿದ್ದಾರೆ ತಾವು ಇದಕ್ಕೆ ಸಹಕರಿಸುವುದಾಗಿ ಹೇಳಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್ ಅಡಿವೆಪ್ಪನವರ್, ಸದಸ್ಯ ರಮೇಶ್ ಪಾಟೀಲ, ಪತ್ರಕರ್ತ ಕೆ.ಎಸ್.ನಾಗರಾಜ್, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಪವನ್ ಕುಮಾರ್ ಮಲ್ನಾಡದ, ಶೇಖಪ್ಪ ನರಸಗೊಂಡರ, ಮಂಜಪ್ಪ ಗಡ್ಡದಗೂಳಿ, ಬಸವರಾಜ ಚಳಗೇರಿ  ಸೇರಿದಂತೆ ಮತ್ತಿತರ ಗಣ್ಯರು, ಜನ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಸೇವೆಯ ಭಾಗವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾಯಕಯೋಗಿಗಳಾದ ನಗರಸಭೆಯ ನೂರಾರು ಮಹಿಳಾ ಹಾಗೂ ಪುರುಷ ಕಾಮರ್ಿಕರನ್ನು ಅಭಿನಂದಿಸಿ, ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಈಶ್ವರಿಯ  ವಿಶ್ವವಿದ್ಯಾಲಯದ ಸಹ ಸಂಚಾಲಕಿ ಬಿ.ಕೆ. ವರ್ಷಾ, ಬಿ.ಕೆ.ವಿವೇಕ್, ಬಿ.ಕೆ. ಅಂಜಲಿದೇವಿ, ಬಿ.ಕೆ.ಮಂಜುಳಾ, ಬಿ.ಕೆ. ನಿರಂಜನ್, ಬಿ.ಕೆ. ಸುಮಂಗಲಕ್ಕ, ಬಿ.ಕೆಲಲಿತಕ್ಕ, ಬಿ.ಕೆ.ಸರ್ವಮಂಗಳಕ್ಕ, ಬಿ.ಕೆ. ರೇಖಾ ಸೇರಿದಂತೆ ಮತ್ತಿತರ ಸಾಧಕಿಯರು ಉಪಸ್ಥಿತರಿದ್ದರು. 

ಸುದ್ದಿ ಓದಿ