ಕಳಪೆ ಕಾಮಗಾರಿ ನಿಲ್ಲಿಸಿ, ಗುಣಮಟ್ಟದ ರಸ್ತೆ ನಿರ್ಮಿಸಿ ಭ್ರಷ್ಟ ಕಂಪನಿ ಹೊಳೆದೊಡಿಸಿ: ಪಾಟೀಲ
ರಾಣೇಬೆನ್ನೂರು 26 :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುತ್ತಿದ್ದು, ರಾಜ್ಯದಲ್ಲಿ ಶೇ. 40 ಕಮಿಷನ್ ದಂದೆ ಖೋರರನ್ನು ಹೊಡೇದೊಡಿಸಿ ಸಾರ್ವಜನಿಕರ ಕಂದಾಯದ ಹಣ ಉಳಿಸಿ ಎನ್ನುವ ಘೋಷವಾಕ್ಯದೊಂದಿಗೆ ಫೆಬ್ರುವರಿ 27ರಂದು ಹಲಗೇರಿ ಠಾಣಾ ವ್ಯಾಪ್ತಿಯ ಗದಗ್ ಹೊನ್ನಾಳಿ ರಸ್ತೆಯ ಕುಪ್ಪೇಲೂರ್ ವೃತ್ತದಲ್ಲಿ ಅಧಿಕಾರಿಗಳ ಭ್ರಷ್ಟ ವ್ಯವಸ್ಥೆಯ ಸ್ಪಷ್ಟ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸೌಮ್ಯ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ಸ್ಪಷ್ಟಪಡಿಸಿದರು.
ಶನಿವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪಾಟೀಲ್, ಗದಗ್ ಹೊನ್ನಾಳಿ ರಾಜ್ಯ ಹೆದ್ದಾರಿ ಕಳಪೆ ಕಾಮಗಾರಿಗಿದ್ದು,ಕಳಪೆ ಕಾಮಗಾರಿ ನಿಲ್ಲಿಸಿ, ಗುಣಮಟ್ಟದ ರಸ್ತೆ ನಿಮರ್ಿಸಿ, ಭ್ರಷ್ಟ ಕಂಪನಿ ಮತ್ತು ಗುತ್ತಿಗೆದಾರರನ್ನು ಹೊಡೆದೊಡಿಸಿ, ಸರ್ಕಾರದ ನಷ್ಟ ತಪ್ಪಿಸಿ, ಸಾರ್ವಜನಿಕರ ಕಂದಾಯದ ಹಣ ಉಳಿಸಿ ಎನ್ನುವ ಸಂದೇಶ ಹೊತ್ತಿರುವ ಪ್ರತಿಭಟನಾಕಾರರು, ಕೆರೆಗೆ ನೀರು ತುಂಬಿಸುವ ಯೋಜನೆ, ಇಲಾಖೆಗಳಲ್ಲಿ ನಡೆಯುತ್ತಿರುವ, ಭ್ರಷ್ಟಾಚಾರ, ಕಮಿಷನ್ ದಂಧೆಯಿಂದ ಆಗುತ್ತಿರುವ ಸಾರ್ವಜನಿಕ ನಷ್ಟ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವುದಾಗಿ ಪಾಟೀಲ್ ಎಚ್ಚರಿಸಿದ್ದಾರೆ.
ಅಂತರ್ ರಾಜ್ಯಕ್ಕೆ ಸಂಪರ್ಕ ಕಲ್ಪಿಸಿ ಕೊಡುವ ಗದಗ್ ಹೊನ್ನಾಳಿ ರಾಜ್ಯ ಹೆದ್ದಾರಿ 57 ರಸ್ತೆ ನಿರ್ಮಾಣದ ಕಳಪೆ ಕಾಮಗಾರಿ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಗಳಿಗೆ ಮನವಿ ಸಲ್ಲಿಸಿದ್ದರು, ಯಾವುದೇ ದೂರುಗಳಿಗೆ ಸ್ಪಂದಿಸದೆ ಆನೆ ನಡೆದಿದ್ದೇ ದಾರಿ ಎನ್ನುವಂತೆ 940 ಕೋಟಿ ರೂಗಳಿಗೆ ಟೆಂಡರ್ ಪಡೆದ ಮೆ : ಗವಾರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್ ಕಂಪನಿಯು ಸಂಪೂರ್ಣ ಕಳಪೆ ಕಾಮಗಾರಿ ಮಾಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಸ್ಟಿಮೇಟ್ ನಲ್ಲಿರುವಂತೆ ಕಾಮಗಾರಿ ನಡೆದಿಲ್ಲ ಸಂಪೂರ್ಣ ಕಳಪೆಯಾಗಿದೆ, ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ, ಇದರಿಂದ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಒಂದು ಅಥವಾ ಎರಡನೇ ಮಳೆಗೆ ರಸ್ತೆ ಹಾಳಾಗುವುದರಲ್ಲಿ ಸಂದೇಹವಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ರವೀಂದ್ರ ಗೌಡ ಅವರು ತನಿಖೆಗೆ ಆಗ್ರಹಿಸಿ ಕಂಪನಿಯ ವಿರುದ್ಧ ಸಾರ್ವತ್ರಿಕವಾಗಿ ಧರಣಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಪಾಟೀಲ್ ಆಗ್ರಹಿಸಿದ್ದಾರೆ.
ಗುತ್ತಿಗೆದಾರ ಕಂಪನಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ಆ ಹಣ ಮರಳಿ ಪಡೆಯಬೇಕು, ಮತ್ತು ಕಂಪನಿಯನ್ನು ಬ್ಲಾಕ್ ಪಟ್ಟಿಗೆ ಸೇರಿಸಬೇಕು, ನೀರು ಹೊಡೆದ ಕಾರಣ ಪಕ್ಕದಲ್ಲಿರುವ ರೈತರ ಜಮೀನು ಬೆಳೆ ಹಾಳಾಗಿದೆ, ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ, ಒಂದು ರೈತರಿಗೆ ವೈಜ್ಞಾನಿಕ ಮಾದರಿಯಲ್ಲಿ ಬೆಳೆ ನಷ್ಟ ಪರಿಹಾರ ಕೊಡಬೇಕು ಎನ್ನುವ ಮುಖ್ಯ ಉದ್ದೇಶ ನಮ್ಮ ದಾಗಿದ್ದು, ರೈತಪರ, ಕನ್ನಡಪರ, ಪ್ರಗತಿಪರ ರೈತ ಸಮುದಾಯದೊಂದಿಗೆ ಬೃಹತ್ಪಾದಯಾತ್ರೆ ಹೊನ್ನಾಳಿಯವರೆಗೂ ಹಮ್ಮಿಕೊಂಡಿರುವದಾಗಿ ಪ್ರಕಟಣೆಯನ್ನು ತಿಳಿಸಿದ್ದಾರೆ. ಅಂದು ಸರಕಾರಕ್ಕೆ ಮನವಿ ಸಲ್ಲಿಸುವ ತಾವು ಕಂಪನಿಗೆ ನೀಡಿರುವ ಈ ಕಾಮಗಾರಿಯ ಬಗ್ಗೆ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಪಾಟೀಲ್ ಆಗ್ರಹಿಸುವದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ಹರಿಹರ ಗೌಡ ಪಾಟೀಲ, ಗುರುರಾಜ ಗೊಜನೂರು, ಎಸ್ ಹೆಚ್ ಅಂಬಿಗೇರ್, ಅಶೋಕ ಗಂಧನಗೌಡ್ರ, ನಿಂಗರೆಡ್ಡಿ ಅಂತರವಳ್ಳಿ, ಎಲ್ಲಪ್ಪ ಓಲೆಕಾರ್, ಶೈಲಕ್ಕ ಕೊಟ್ಟದ, ರೇಣುಕಾ, ವಿರೂಪಾಕ್ಷಪ್ಪ ಗೌಡ್ರು, ಸುರೇಶ್ ವಡ್ರಳ್ಳಿ ಸೇರಿದಂತೆ ಮತ್ತಿತರರು ಇದ್ದರು.