ರಾಣೆಬೆನ್ನೂರ

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ವಿಜ್ಞಾನಿ ಶ್ರೀನಿವಾಸ

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ವಿಜ್ಞಾನಿ ಶ್ರೀನಿವಾಸ

ರಾಣೇಬೆನ್ನೂರ 10:  ಹೆಚ್ಚುತ್ತಿರುವ ತಂತ್ರಜ್ಞಾನ ಮತ್ತು ವಿಜ್ಞಾನದ ಸಂಗತಿಯನ್ನು ಅರಿತುಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಇಸ್ರೋ ಸಂಸ್ಥೆಯ ವಿಜ್ಞಾನಿ ಶ್ರೀನಿವಾಸ ಎಚ್.ಎಲ್. ಹೇಳಿದರು.

ನಗರದ ಹುಣಸಿಕಟ್ಟಿ ರಸ್ತೆಯ ಡೆಲ್ಲಿ ಸೆಂಟ್ರಲ್ ಸ್ಕೂಲಿನಲ್ಲಿ ಗುರುವಾರ ಬೆಂಗಳೂರಿನ ಇಸ್ರೋ ಸಂಸ್ಥೆಯ ವತಿಯಿಂದ ಸ್ಪೇಸ್ ಆನ್ ವ್ಹೀಲ್ಸ್ (ಗಾಲಿಯ ಮೇಲೆ ಅಂತರಿಕ್ಷ) ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1963ರಲ್ಲಿ ಆರಂಭವಾದ ಇಸ್ರೋ ಸಂಸ್ಥೆ ಇಲ್ಲಿವರೆಗೂ ಅನೇಕ ಸಾಧನೆಗಳನ್ನು ಮಾಡಿದೆ ಹಾಗೂ ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಯೋಜನೆಗಳ ಕುರಿತು ವಿದ್ಯಾರ್ಥಿ ಗಳಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.

ಆರ್ಟಿಇಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ಟಿ.ಉದಪುಡಿ ಮಾತನಾಡಿ, ಇಸ್ರೋ ಸಂಸ್ಥೆಯಿಂದ ದೇಶದಲ್ಲಿ ಅನೇಕ ಸಾಧನೆಗಳನ್ನು ಮಾಡಲಾಗಿದೆ. ಮೊದಲ ಬಾರಿಗೆ ಉಡಾವಣೆಯಾದ ಆರ್ಯಭಟ ಉಪಗ್ರಹದಿಂದ ಇಲ್ಲಿವರೆಗೂ ಅನೇಕ ಉಪಗ್ರಹ ಉಡಾವಣೆಯಾಗಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಅವಕಾಶವಿದೆ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೋಗಟವೀರ, ಮಂಜುನಾಥ ತೋಟಗವೀರ, ಡಾ.ರಾಜು ಶಿರೂರ, ಶಾಲೆಯ ಪ್ರಾಚಾರ್ಯ  ಆನಂದಿ ಭಟ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿ ಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.ರಾಣೇಬೆನ್ನೂರಿನ ಹುಣಸಿಕಟ್ಟಿ ರಸ್ತೆಯ ಡೆಲ್ಲಿ ಸೆಂಟ್ರಲ್ ಸ್ಕೂಲಿನಲ್ಲಿ ಗುರುವಾರ ಬೆಂಗಳೂರಿನ ಇಸ್ರೋ ಸಂಸ್ಥೆಯ ವತಿಯಿಂದ ಸ್ಪೇಸ್ ಆನ್ ವ್ಹೀಲ್ಸ್ (ಗಾಲಿಯ ಮೇಲೆ ಅಂತರಿಕ್ಷ)ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ವಿಜ್ಞಾನಿ ಶ್ರೀನಿವಾಸ ಎಚ್.ಎಲ್. ಉದ್ಘಾಟಿಸಿದರು.


ಸುದ್ದಿ ಓದಿ