ರಾಣೆಬೆನ್ನೂರ

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಂದಿನ ನಾಯಕರಿಗೆ ದಾರಿ ದೀಪ: ಪೂಜಾರ

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಂದಿನ ನಾಯಕರಿಗೆ ದಾರಿ ದೀಪ: ಪೂಜಾರ

ರಾಣಿಬೆನ್ನೂರ 20: ಈ ದೇಶ ಕಂಡ ಅಪ್ರತಿಮ ಹೋರಾಟಗಾರ , ಹಿಂದೂ  ರಾಷ್ಟ್ರ ನಿಮರ್ಾಣಕ್ಕಾಗಿ ಶ್ರಮಿಸಿದ್ದ,  ದಕ್ಷ ಆಡಳಿತಗಾರರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ಇಂದಿನ ನಾಯಕರಿಗೆ ದಾರಿ ದೀಪವಾಗಿವೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ನಗರದ ತಹಸೀಲ್ದಾರ ಕಚೇರಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಶಿವಾಜಿ ಮಹಾರಾಜರ ಶೌರ್ಯ, ಸಾಹಸ ರಾಷ್ಟ್ರ ಪ್ರೇಮ ನಿಜಕ್ಕೂ ಶ್ಲಾಘನೀಯವಾಗಿವೆ.  ಇಂತಹ ಮಹಾನ್ ವ್ಯಕ್ತಿಯ ತತ್ವ-ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.  ತಹಸೀಲ್ದಾರ ಕೆ.ಗುರುಬಸವರಾಜ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ ನರಸಗೊಂಡರ, ತಾಲೂಕು ಕ್ಷತ್ರೀಯ ಮರಾಠ ಸಮಾಜದ ಅಧ್ಯಕ್ಷ ಪವಿತ್ರಕುಮಾರ ನಾಗೇನಹಳ್ಳಿ, ನಗರ ಘಟಕದ ಅಧ್ಯಕ್ಷ ಶಿವಮೂರ್ತಿ  ದಿಲ್ಲಿವಾಲ, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಪವಾರ, ಉದಯ ಗಾವಡೆ, ಶಿವಾನಂದ ಆರೇರ, ಅನಿಲ ಶಿಂಧೆ, ನಾಗಪ್ಪ ಡಂಬಳ, ಪ್ರಶಾಂತ ಪವಾರ, ಕಾಶಿಬಾಯಿ ಮಾದಾಪುರ, ಜ್ಯೋತಿ ನಾಗೇನಹಳ್ಳಿ, ಶೈಲಾಶ.ಮಾಕನೂರ ಮತ್ತಿತರರು ಇದ್ದರು 

ಸುದ್ದಿ ಓದಿ