ಪಂಚಾಯ್ತಿಗಳಲ್ಲಿ ಸಿಗುತ್ತಿಲ್ಲ ಪಿಡಿಒಗಳು
ಲೋಕದರ್ಶನ ವರದಿ
ಆದೇಶ ಉಲ್ಲಂಘನೆ* ಗೊತ್ತಿದ್ದರೂ ಸುಮ್ಮನಿರುವ ಮೇಲಾಧಿಕಾರಿಗಳು* ಅಭಿವೃದ್ಧಿ ಕಾರ್ಯಕ್ಕೂ ಹಿನ್ನೆಡೆ
ಸಂತೋಷಕುಮಾರ್ ಕಾಮತ
ಮಾಂಜರಿ : ಗ್ರಾಮ ಅಧಿಕಾರಿಗಳು ಪಂಚಾಯತ ಅಭಿವೃದ್ಧಿ ಗ್ರಾಮಗಳಲ್ಲಿ ವಾಸ ಮಾಡಬೇಕೆಂದು ರಾಜ್ಯ ಸರಕಾರದ ಆದೇಶವಿದೆ. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 207 ಗ್ರಾಮ ಪಂಚಾಯಿತಿಗಳು ಬರುತ್ತಿವೆ.
ಬಹುತೇಕ ಪಂಚಾಯಿತಿಗಳ ಪಿಡಿಒಗಳು ತಾವೂ ಕರ್ತವ್ಯ ನಿರ್ವಹಿಸುವ ಗ್ರಾಮಗಳ ಮುಖ್ಯ ಕೇಂದ್ರದಲ್ಲಿ ಇರಬೇಕೆಂಬ ನಿಯಮವಿದೆ. ಇದರಲ್ಲಿ ಬೆರಳಣಿಕೆ ಪಿಡಿಒಗಳನ್ನು ಹೊರತುಪಡಿಸಿ ಬಹುತೇಕರು ತಾವು ಕಾರ್ಯ ನಿರ್ವಹಿಸುವ ಕೇಂದ್ರ ಬಿಟ್ಟು ನಗರ, ತಾಲೂಕು ಕೇಂದ್ರಗಳಲ್ಲಿ ವಾಸ ಮಾಡುವ ಮೂಲಕ ಸರಕಾರದ ಆದೇಶ ಗಾಳಿಗೆ ತೂರಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಥಣಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ತಾಲೂಕುಗಳು ಬರುತ್ತವೆ. ಈ ತಾಲೂಕಿನಲ್ಲಿ ಒಟ್ಟು 207 ಗ್ರಾಮ ಪಂಚಾಯಿತಿಗಳಿವೆ. ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಸಚಿವೆಯಾಗಿದ್ದ ಶೋಭ ಕರಂದ್ಲಾಜೆ ಅವರ ಅವಧಿಯಲ್ಲಿ ಪಿಡಿಒಗಳ ಹುದ್ದೆ ಸೃಜಿಸಲಾಯಿತು. ಗ್ರಾಮಗಳ ಅಭಿವೃದ್ಧಿಗಾಗಿ ಈ ಹುದ್ದೆಗಳ ನೇಮಕ ಸಹ ಸರಕಾರ ಮಾಡಿತ್ತು.
ಪ್ರತಿದಿನ 24 ಗಂಟೆಗಳ ಕಾಲ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ. ಆದರೆ ಕೆಲವು ಪಿಡಿಒಗಳು ಮಾತ್ರ ಎರಡೆರಡು ಪಂಚಾಯಿತಿಗಳ ಕಾರ್ಯಭಾರ ವಹಿಸಿಕೊಂಡಿದ್ದಾರೆ.
ಪಿಡಿಒಗಳು ಕರ್ತವ್ಯ ನಿರ್ವಹಿಸುವ ಯಾವುದಾದರೂ ಒಂದು ಸ್ಥಳದಲ್ಲಿ ವಾಸ ಮಾಡಬೇಕು ಎಂಬ ಸರಕಾರದ ನಿಯಮವಿದೆ. ಆದರೆ ಪ್ರತಿ ತಾಲೂಕಿನ ಯಾರೊಬ್ಬರೂ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸುವುದಿಲ್ಲ. ಬಹುತೇಕ ಎಲ್ಲರೂ ಸ್ವಂತ ಅಥವಾ ಸಮೀಪದ ಪಟ್ಟಣಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಬಹಳಷ್ಟು ಪಿಡಿಒಗಳು ತಾಲೂಕ ಪಂಚಾಯಿತಿಗಳ ಎಮರೇ ಅಲೆದಾಡುತ್ತಿರುತ್ತಾರೆ. ಸಾರ್ವಜನಿಕರು ಇದರ ಬಗ್ಗೆ ಯಾವುದಾದರೂ ಪ್ರಶ್ನೆ ಮಾಡಿದರೆ ತಾಪಂದಲ್ಲಿ ಸಭೆ ಅದಕ್ಕಾಗಿ ಬಂದಿದ್ದೇವೆ.
ಎಂದು ಸಬೂಬು ಹೇಳುತ್ತಾರೆ.ಇನ್ನು ನಿತ್ಯ ಸಕಾಲಕ್ಕೆ ಕಚೇರಿಗೆ ಹಾಜರಾಗುವುದಿಲ್ಲ. ಎಂಬ ಆರೋಪಗಳು ಸಹ ಬಹಳಷ್ಟು ಪಿಡಿಒಗಳ ಮೇಲೆ ಇವೆ. ಪಿಡಿಓಗಳು ಎಲ್ಲಿಗೆ ಹೋಗುತ್ತಾರೆ. ಯಾವಾಗ ಬರುತ್ತಾರೆ ಎಂಬ ಮಾಹಿತಿಯೂ ಗ್ರಾಮಸ್ಥರಿಗೆ ಸಿಗುವುದಿಲ್ಲ. ಕನಿಷ್ಠ ಸಾರ್ವಜನಿಕರಿಗೆ ಮುಕ್ತವಾಗಿ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಸಹ ದೊರೆಯುತ್ತಿಲ್ಲ.
ಹಲವು ಗ್ರಾಮ ಪಂಚಾಯಿತಿಗಳಲ್ಲಿ ಚಲನವಲನ ರಜಿಸ್ಟರ್ ಸಹ ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿವೆ.
*ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ರೈತಾಪಿ ಕುಟುಂಬ ಮತ್ತು ಕೂಲಿಕಾರರು ಹೆಚ್ಚಾಗಿ ವಾಸಿಸುತ್ತಿದ್ದು ಪ್ರತಿ ನಿತ್ಯ ಕೆಲಸಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒಗಳಿಗಾಗಿ ಜನರು ಕಾಯುತ್ತಿದ್ದಾರೆ. ರಾಜ್ಯ ಸರಕಾರ ಎಲ್ಲಾ ಪಿಡಿಒಗಳು ತಾವು ಕಾರ್ಯ ನಿರ್ವಹಿಸುವ ಗ್ರಾಮಗಳಲ್ಲಿ ವಾಸ ಮಾಡುವಂತೆ ಆದೇಶ ಹೊರಡಿಸಿದೆ. ಆದರೆ ಬಹಳಷ್ಟು ಪಿಡಿಒಗಳು ನಗರದಲ್ಲೇ ವಾಸ ಮಾಡುತ್ತಿದ್ದಾರೆ. ಕಚೇರಿ ಸಮಯದಲ್ಲಿ ಸಹ ಪಿಡಿಒಗಳು ಇದರಿಂದಾಗಿ ಪಂಚಾಯಿತಿಗಳಿಗೆ ಬರುತ್ತಿಲ್ಲ. ಸಾರ್ವಜನಿಕರಿಗೆ ಸಾಕಷ್ಟು
ತೊಂದರೆಯಾಗುತ್ತಿದೆ.
-ಚಂದಕಾಂತ ಹುಕ್ಕೇರಿ
ಸಮಾಜ ಸೇವಕರು, ಚಿಕ್ಕೋಡಿ