ರಾಣೆಬೆನ್ನೂರ

ಇಂದು ಯುವ ಮೋರ್ಚಾ ಸಮಾವೇಶ, ಮುಖಂಡರ ಸ್ವಾಗತಕ್ಕೆ ವೇದಿಕೆ ಸಿದ್ಧ

ಇಂದು ಯುವ ಮೋರ್ಚಾ  ಸಮಾವೇಶ, ಮುಖಂಡರ ಸ್ವಾಗತಕ್ಕೆ ವೇದಿಕೆ ಸಿದ್ಧ

 ರಾಣೇಬೆನ್ನೂರು 14: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ದೇಶಾಭಿಮಾನದ ಪ್ರತಿಕವಾಗಿ ದೇಶವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿರುವುದು ದೇಶವಾಸಿಗಳಿಗೆ ಅತ್ಯಂತ ಅಭಿಮಾನದ ಸಂಗತಿಯಾಗಿದೆ ಎಂದು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಅರುಣಕುಮಾರ್ ಪೂಜಾರ್ ಹೇಳಿದರು.     

 ಅವರು ಸೋಮವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಮಾ. 15ರಂದು ಬುಧವಾರ ಮ. 1: ಗಂಟೆಗೆ, ಪಿ.ಬಿರಸ್ತೆಯ  ಹವಾಲ್ದಾರ್ ಹೊಂಡದ ಆವರಣದಲ್ಲಿ ಜನ ಸಂಕಲ್ಪ ಯಾತ್ರೆ ಹಾಗೂ ಯುವ ಮೋರ್ಚಾ  ಸಮಾವೇಶ ಆಯೋಜಿಸಲಾಗಿದೆ. , ಅಂದು ತಾಲೂಕಿನ ಮತ್ತು ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ 25 ಸಾವಿರಕ್ಕೂ ಹೆಚ್ಚು ಜನರು  ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.  ಯುವ ಮೋರ್ಚಾ ಸಮಾವೇಶವನ್ನು ಅತ್ಯಂತ ವಿಜೃಂಭಣೆಯಿಂದ, ಅದ್ದೂರಿಯಾಗಿ  ನೆರವೇರಿಸಲು ಯುವ ಕಾರ್ಯಕರ್ತರ ಪಡೆಯು  ಸನ್ನದ್ದವಾಗಿದೆ.ಬಿ. ವೈ, ವಿಜಯೇಂದ್ರ ಅವರ ನೇತೃತ್ವದಲ್ಲಿ ಯುವ ಪಡೆ ಸಿದ್ಧತೆ ನಡೆಸಿದ್ದು,  ಯುವ ಮೋರ್ಚಾ ಮತ್ತು ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಸಲು ಸಾರ್ವಜನಿಕರು ಮುಂದಾಗಬೇಕೆಂದು ಕೋರಿದರು. ಮಾ. 15 ರಂದು ಬುಧವಾರ ನಗರಕ್ಕೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಬಾಳೆಕಾಯಿ, ಬಿ ವೈ ವಿಜಯೇಂದ್ರ, ಮಹೇಶ್ ತೆಂಗಿನಕಾಯಿ, ಡಾ: ಸುದೀಪ್ ಕೆ ಸಿ, ಅಜಿತ್ ಹೆಗಡೆ, ಡಾ : ಶಿವಯೋಗಿ ಸ್ವಾಮಿ, ಸೇರಿದಂತೆ ಪಕ್ಷದ ಅನೇಕ ಮುಖಂಡರು, ಯುವ ನಾಯಕರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.  ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ, ದೀಪಕ್ ಹರಪನಹಳ್ಳಿ ಬಸವರಾಜ ಕೇಲಗಾರ, ಕೆ ಶಿವಲಿಂಗಪ್ಪ, ಶಿವಕುಮಾರ್ ನರಸಗೊಂಡರ, ಡಾ . ಬಸವರಾಜ ಕೇಲಗಾರ್, ಪವನ್ ಕುಮಾರ್ ಮಲ್ಲಾಡದ, ಮಣಿ ಪವಾರ್, ಮಲ್ಲಣ್ಣ ಅಂಗಡಿ, ಅನಿಲ್ ಸಿದ್ಧಾಳಿ, ಪರಮೇಶಪ್ಪ ಗೋಳಣ್ಣನವರ್, ಸಿದ್ದಣ್ಣ ಚಿಕ್ಕಬಿದರಿ, ಚೋಳಪ್ಪ ಕಸವಾಳ, ಎ.ಬಿ. ಪಾಟೀಲ್, ರಮೇಶ್ ನಾಯಕ್, ರಾಜೇಂದ್ರ ಬಸೇನಾಯ್ಕರ್, ಸೇರಿದಂತೆ ಪಕ್ಷದ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ