ಬೈಲಹೊಂಗಲ

ಯೋಗಿಜಿ ಎರಡನೇ ಬಾರಿಗೆ ಪ್ರಮಾಣ ವಚನ: ಸಿಹಿ ಹಂಚಿ ಸಂಭ್ರಮ

ಯೋಗಿಜಿ ಎರಡನೇ ಬಾರಿಗೆ ಪ್ರಮಾಣ ವಚನ: ಸಿಹಿ ಹಂಚಿ ಸಂಭ್ರಮ

ಲೋಕದರ್ಶನ ವರದಿ 


 ಬೈಲಹೊಂಗಲ 26: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಬೈಲಹೊಂಗಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಯೋಗಿ ಆದಿತ್ಯನಾಥ್ ಅಭಿಮಾನಿಗಳು ಪಟ್ಟಣದ ಚನ್ನಮ್ಮ ವೃತ್ತ ಹಾಗೂ  ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.  

   ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ದಯಾನಂದ ಪರಾಳಶೆಟ್ಟರ ಬಿಜೆಪಿ ಮಂಡಲದ ಲಕ್ಕಪ್ಪ ಕಾರಗಿ, ಪ್ರಶಾಂತ ಅಮ್ಮಿನಬಾವಿ, ಗದಗಯ್ಯ ರುದ್ರಾಕ್ಷಿಮಠ, ಬಸವರಾಜ ಯಾಸನ್ನವರ, ಅಶೋಕ ಬೋರಕನವರ,  ಅಜ್ಜಪ್ಪ ಪಾಟೀಲ, ಸಿ.ಬಿ.ವಿಭೂತಿಮಠ, ಸುರೇಶ ಮ್ಯಾಕಲ, ಪವನಕುಮಾರ ಅಕ್ಕಿ, ಗುರುಪ್ರಸಾದ ಅಂಗಡಿ, ಬಸವರಾಜ ಪೂಜೇರಿ, ಸಂತೋಷ ಶಿಂತ್ರಿ, ಶ್ರೀನಿಥ ಇಂಗಳಗಿ, ಮಂಜು ಮರಿಶೆಟ್ಟಿ ಸೇರಿದಂತೆ  ಬಿಜೆಪಿ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ