ಇಂಡಿ

ನಾಡದೇವಿಯ ನವರಾತ್ರಿ ಉತ್ಸವ ಚಾಲನೆ ನೀಡಿದ ಯಶವಂತರಾಯಗೌಡ ಪಾಟೀಲ

ನಾಡದೇವಿಯ ನವರಾತ್ರಿ ಉತ್ಸವ ಚಾಲನೆ ನೀಡಿದ ಯಶವಂತರಾಯಗೌಡ ಪಾಟೀಲ

ಇಂಡಿ, 3:  ತಾಲೂಕಿನ ತಾಂಬಾ ಗ್ರಾಮದಲ್ಲಿ  ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್‌, ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ತಾಂಬಾ ಗ್ರಾಮಸ್ಥರ ಸಹಯೋಗದೊಂದಿಗೆ  ಹಮ್ಮಿಕೊಂಡಿದ್ದ 53 ನೇ ನಾಡದೇವಿಯ ನವರಾತ್ರಿ ಉತ್ಸವಕ್ಕೆ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಸುಮಾರು 53 ವರ್ಷಗಳ ಕಾಲದಿಂದ ತಾಂಬಾ ಗ್ರಾಮದಲ್ಲಿ ಮೈಸೂರು ಮಾದರಿಯಲ್ಲಿ ನಡೆಸಿಕೊಂಡು ಬರುತ್ತಿದ್ದು ತುಂಬಾ ಸಂತೋಷ ವಿಷಯ,ವಿಜಯಪೂರ ಜಿಲ್ಲೆಯ BLDE  ಸಂಸ್ಥೆಯ ನಂತರ ಎರಡೇ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಹೊಂದಿರುವ ಸಂಸ್ಥೆ ಅಂದರೆ ಜಗದಂಬಾ ಶಿಕ್ಷಣ ಸಂಸ್ಥೆ ಎಂದರೆ ತಪ್ಪಾಗಲಾರದು.  

ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿ ನಮ್ಮ ಹಿರಿಯರು ಹಾಕಿಕೊಂಡು ಬಂದ ಪದ್ಧತಿಯಂತೆ ನಾವು ಎಲ್ಲರೂ ಭಕ್ತಿ ಶ್ರದ್ಧೆಯಿಂದ ಹಿಂತಾ ಹಬ್ಬವನ್ನು ಆಚರಣೆ ಮಾಡಿ ಜಗದಂಬಾ ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ಹೇಳಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಮಾತನಾಡಿ  ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಾಡದೇವಿ ಉತ್ಸವ ನಿಮಿತ್ತವಾಗಿ ಸಾವಿರಾರು ಮಹಿಳೆಯರು ಕುಂಭ ಮಹೋತ್ಸವದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಲು ಸಹಕರಿಸಿದ ಎಲ್ಲಾ ತಾಯಿಯಂದಿರ ಶ್ರಮ  ತುಂಬಾ ದೊಡ್ಡದು. ಆ ತಾಯಿ ಜಗನ್ಮಾತೆ ಆರ್ಶಿವಾದ ನಮ್ಮ ನಿಮ್ಮಲರ ಮೇಲೆ ಸದಾ ಆಗಿರಲಿ ಎಂದು ಹೇಳಿದರು. ಈ ಭವ್ಯ ಮೆರವಣಿಗೆಗೆ  ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ  ಅವರು ಚಾಲನೆ ನೀಡಿ ಮಾತನಾಡಿದ ಅವರು ಈ ಜಗದಂಬಾ ಆರ್ಶಿವಾದಿಂದ ಈ ಬಾರಿ ಸಕಾಲಕ್ಕೆ ಮಳೆ ಬಂದು ಒಳ್ಳೆಯ ಮಳೆ ಬೆಳೆ ಇದೆ ಈ ಬಾರಿ ತಾಯಿ ಆರ್ಶಿವಾದಿಂದ ರೈತರಿಗೆ ಈ ಬಾರಿ ಒಳ್ಳೆಯ ಬೆಳೆ ಕರುಣಿಸಲಿ ಎಂದು ಆ ತಾಯಿ ಜಗನ್ಮಾತೆಯಲ್ಲಿ ಪ್ರಾರ್ಥನೆ ಮಾಡೋಣ ಎಂದು ಹೇಳಿದರು. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಭಿನವ ಮುರುಗೇಂದ್ರ ಮಾಹಾಸ್ವಾಮಿಳು ಶಿರಶ್ಯಾಡ, ಸೋಮಲಿಂಗ ಮಾಹಾಸ್ವಾಮಿಗಳು ಕೆಸರಟ್ಟಿ, ಜಗನುಮಾಹಾರಾಜರು  ಆರ್ಶಿವಚನ ನೀಡಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ನಿವೃತ್ತ ಹೊಂದಿರುವ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಿಂದಗಿ ಮತಕ್ಷೇತ್ರದ ಶಾಸಕರ ಧರ್ಮಪತ್ನಿ ನಾಗರತ್ನ ಮನಗೂಳಿ, ಪ್ರಭುಗೌಡ ಪಾಟೀಲ (ಲಿಂಗದಹಳ್ಳಿ), ಹಾಸೀಂಪೀರ ವಾಲಿಕಾರ, ಜಗದಂಬಾ ವಿದ್ಯಾವರ್ಧಕ ಸಂಘದ, ಅಧ್ಯಕ್ಷರಾದ ಜಿ ಬಿ ಅಂಗಡಿ, ಹಾಗೂ ಕಾರ್ಯದರ್ಶಿ ರವಿಕುಮಾರ್ ಚವ್ಹಾಣ, ಬಸವರಾಜ ಇಂಡಿ, ರಾಜು ಹೋಸಮನಿ, ತಾಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಜಾಕ್ ಚಿಕ್ಕಗಸಿ, ಹಾಗೂ ಜೆ ಎಸ್ ಹತ್ತಳ್ಳಿ, ರಾಚಪ್ಪ ಗಳೇದ,ಅಪ್ಪು ಕಲ್ಲೂರ, ಜಿ ವಾಯ್ ಗೋರನಾಳ, ರಾಜು ಗಂಗನಳ್ಳಿ, ಪ್ರಕಾಶ್ ಮುಂಜಿ,ಕಾಮೇಶ ಉಕ್ಕಲಿ,ಬಿ ಜಿ ರಾಠೋಡ, ರಾಮಸಿಂಗ್ ಕನ್ನೋಳ್ಳಿ, ಅನೇಕರು ಉಪಸ್ಥಿತರಿದ್ದರು.  ವಿ ಆರ್ ದೊಡ್ಡಮನಿ ,ಎಂ ಎಸ್ ಸರಸಂಬಿ, ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ