ಭಾವೈಕ್ಯತೆಯ ಸಂಕೇತ ಯಕ್ಕುಂಡಿ ಉರಸ್
ಬೈಲಹೊಂಗಲ 15: ಬೈಲಹೊಂಗಲ ಸಮೀಪದ ಹೊಸ ಯಕ್ಕುಂಡಿ ಗ್ರಾಮದಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಇಲ್ಲಿನ ಪೀರ ದಿಲಾವರ ಗೋರಿ ಶಾಹವಲಿ ಸಂದಲ್ ಮತ್ತು ಉರುಸ್ ಅಂಗವಾಗಿ ಸುತ್ತಲಿನ ಗ್ರಾಮಸ್ಥರು ಸಂತಸದಲ್ಲಿದ್ದಾರೆ.
ಹೊಸ ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ ಹಾಗೂ ಕಾರ್ಲಕಟ್ಟಿ ತಾಂಡಾ ಒಂದಕ್ಕೊಂದು ಹೊಂದಿಕೊಂಡಿವೆ. ಇವುಗಳಲ್ಲದೆ ಸುತ್ತ ಮುತ್ತಲಿನ ಗ್ರಾಮದ ಜನರೆಲ್ಲರೂ ಉರುಸ್‌ನಲ್ಲಿ ಭಾಗಿಯಾಗುವುದು ವಾಡಿಕೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾದ ಗ್ರಾಮದಲ್ಲಿ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಗುರುವಾರ ಬೆಳಿಗ್ಗೆ ನಾಲ್ಕು ಘಂಟೆಗೆ ಜರುಗಿದ ಫೀರ ದಿಲಾವರಗೋರಿ ಶಹಾವಲಿ ಗಂಧ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಭಾವೈಕ್ಯೆತೆ ಮೆರೆದು ನಾಡಿಗೆ ಮಾದರಿಯಾದರು. ಗುರುವಾರ ಬೆಳಿಗ್ಗೆ 3 ಘಂಟೆಗೆ ಸಕಲ ಗುರು ಹಿರಿಯರು ಮತ್ತು ಸದ್ಬಕ್ತರು ಕೂಡಿ ಧೂಪದಾಳ ಗ್ರಾಮದ ಮೋಹನರಾವ ದೇಸಾಯಿ ಅವರ ಮನೆಯಿಂದ ಸಕಲ ವಾದ್ಯ ಮೇಳದೊಂದಿಗೆ ಪೀರ ದಿಲಾವರಗೋರಿ ಶಹಾವಲಿಯ ದರ್ಗಾ ವರೆಗೆ ಭವ್ಯ ಮೆರವಣಿಗೆ ನಡೆಸಿದರು.
ಇತಿಹಾಸ: ಮಲಫ್ರಭಾ ನದಿ ದಡದಲ್ಲಿರುವ ಯಕ್ಕುಂಡಿ ಗ್ರಾಮವು ತನ್ನದೇ ಆದ ಐತಿಹಾಸಿಕ, ಧಾರ್ಮಿಕ ಪರಂಪರೆಗೆ ಹೆಸರಾಗಿದೆ. ಇತಿಹಾಸದ ಪುಟಗಳಲ್ಲಿ ಯಜ್ಞಕುಂಡ ಎಂದೇ ಪ್ರಸಿದ್ಧಿ ಪಡೆದ ಈ ಊರಿಗೆ ಬಂದ ಪೀರದಿಲಾವರ ಗೋರಿ ಶಾಹವಲಿ ಬಾಬಾ ಅವರು, ಅಲ್ಲಾಹುವಿನ ಸಂದೇಶ ಸಾರುತ್ತ ಬಂದು ನೆಲೆಸಿದ್ದು ಇತಿಹಾಸ. ಯಕ್ಕುಂಡಿ ಧೂಪದಾಳ ನಡುವೆ ಚಿಕ್ಕ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಅಲ್ಲಿಯೇ ಕಾಲವಾದ ನಂತರ ದರ್ಗಾ ನಿರ್ಮಿಸಿದ್ದಾರೆ. ಹೀಗಾಗಿ ಯಾವುದೇ ಧರ್ಮ, ಜಾತಿಯ ಕಟ್ಟಪಾಡು ಇಲ್ಲದೇ ಎಲ್ಲರೂ ಈ ಸಂತರಿಗೆ ಭಕ್ತರಾದರು.
ಹಿರಿಯರಾದ ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ವಿನೋದರಾವ ದೇಸಾಯಿ, ಅಬ್ದುಲ್‌ಖಾದರ ಜೈಲಾನಿ ಬಾರಿಗಿಡದ, ಸುಲ್ತಾನ ಅಲಿ ಶಾ ಚಿಸ್ತಿ, ಪಿಡಿಒ ಶ್ರೀಶೈಲಗೌಡ ಎನ್, ಮೋಹನ ಮೇಟಿ, ಶಂಕರ ಪಾಶ್ಚಾಪೂರ, ಜಾಮುದ್ದಿನ ಬಾರಿಗಿಡದ, ಕಾಸಯ್ಯಾ ಮಠದ, ಬಂದೇನವಾಜ ಮುಲ್ಲಾ, ಅಕ್ಬರಸಾಬ ಬಾರಿಗಿಡದ, ಮಕ್ತುಮಸಾಬ ಬಡೇಖಾನ, ದಿಲಾವರಸಾಬ ಪರಸಪ್ಪನವರ, ಮುಕ್ತಾರಅಹ್ಮದ ಮುಲ್ಲಾ, ಇಸ್ಮಾಯಿಲ್ ಮುಜಾವರ, ನಾಗಪ್ಪ ಹಿಟ್ಟಣಗಿ, ಕೆ ಎಸ್ ಪೀರಜಾದೆ, ಗಂಗಪ್ಪ ಪೂಜೇರ ಇನ್ನೂ ಮುಂತಾದ ಹಿರಿಯರು ಉಪಸ್ಥಿತರಿದ್ದರು.
ಹಾಗೂ ಸವದತ್ತಿಯ ಪೋಲಿಸ ಠಾಣೆಯ ಸಿ ಪಿ ಆಯ್ ಕರುಣೇಶಗೌಡ ಜೆ. ಪೋಲಿಸ ಇಲಾಖೆಯ ಸಿಬ್ಬಂದಿವರ್ಗ ಗಂಧ ಕಾರ್ಯಕ್ರಮ ಯಶಸ್ವಿ ಆಗುವಂತೆ ಸಹಕಾರ ನೀಡಿದರು. ಹಾಗೂ ಲಕ್ಷಾಂತರ ಭಕ್ತರು ಇದ್ದರು.