ಯರಗಟ್ಟಿ

ಯೋಗದಿಂದ ಮನಸ್ಸು ಪ್ರಫುಲ್ಲ: ಯೋಗಗುರು ಪಾಟೀಲ

ಯೋಗದಿಂದ ಮನಸ್ಸು ಪ್ರಫುಲ್ಲ: ಯೋಗಗುರು ಪಾಟೀಲ

ಯರಗಟ್ಟಿ 22: ಹಣದಿಂದ ಆರೋಗ್ಯವನ್ನು ಕೊಂಡಕೊಳ್ಳಲು ಆಗುವುದಿಲ್ಲ ಆದರೆ ದಿನನಿತ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಸುಲಭವಾಗಿ ಪಡೆಯಬಹುದು. ದಿನಾಲು ಕ್ರಮವರಿತು ಯೋಗ ಮಾಡುತ್ತ ಹೋದರೆ ಒಳ್ಳೆಯ ಮನಸ್ಸು, ಆರೋಗ್ಯ ನಮ್ಮದಾಗುತ್ತದೆ ಎಂದು ಯೋಗ ಗುರು ಆರ್‌.ಎಚ್‌.ಪಾಟೀಲ ಹೇಳಿದರು.  

ಅವರು ಪಟ್ಟಣದ ಪುರಸಭೆ, ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಮುನವಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಪಂಚಲಿಂಗೇಶ್ವರ ಕುಸ್ತಿ ಮೈದಾನದಲ್ಲಿ ಜರುಗಿದ 8ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 

ಕಾರ್ಯಕ್ರಮದ ಸಾನಿಧ್ಯವನ್ನು ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತ ಯೋಗದಿಂದ ರೋಗವನ್ನು ದೂರ ಮಾಡಬಹುದು. ಯೋಗದಿಂದ ಎಲ್ಲ ವಯೋಮಾನದವರು ಕೂಡ ಕ್ರಿಯಾಶೀಲರಾಗುತ್ತಾರೆ. ಪ್ರಾಣಾಯಾಮ, ಧ್ಯಾನ, ಯೋಗದಿಂದ ಮನಸ್ಸು ಪ್ರಫುಲ್ಲವಾಗುತ್ತದೆ ಎಂದರು.  

ಪುರಸಭೆ ಮುಖ್ಯಾಧಿಕಾರಿ ರಮೇಶ ಹಿಟ್ಟಣಗಿ, ವೀರೇಶ ಬ್ಯಾಹಟ್ಟಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನುರಾಧಾ ಮಂಜುನಾಥ ಬೆಟಗೇರಿ, ಸವಿತಾ ಹಂಜಿ, ಗೀತಾ ಜಾವೂರ, ಶಾರದಾ ದ್ಯಾಮನಗೌಡರ, ಮೀರಾ ಮುರನಾಳ, ಉಮಾ ಕೊಳಕಿ, ಪವಿತ್ರಾ ಚಿಕ್ಕನಗೌಡ್ರ, ಗೌರಿ ಜಾವೂರ, ಅನಿಲ ಗಿಡ್ನಂದಿ, ಮನೋಹರ ಅಜಮನಿ, ಯಲ್ಲಪ್ಪ ಭಜಂತ್ರಿ, ಅಡಿವೆಪ್ಪ ಬಿರಸಿದ್ದಿ, ಮುತ್ತು ಪಾಗಾದ, ಮಂಜುನಾಥ ಭಂಡಾರಿ, ಪ್ರಾ. ಎಂ.ಎಚ್‌.ಪಾಟೀಲ, ಶ್ರೀಶೈಲ ಗೋಪಶೆಟ್ಟಿ, ಬಿ.ಎಚ್‌.ಖೊಂದುನಾಯ್ಕ, ದಾನು ಗದಗಿನ, ಅಜ್ಜು ಹಿರಲಿಂಗಣ್ಣವರ, ಎಂ.ಎ.ಕಮತಗಿ, ಅಶೋಕ ಸಂಕಣ್ಣವರ, ಬಾಳು ಹೊಸಮನಿ ಸೇರಿದಂತೆ ಇತರರು ಇದ್ದರು.  

ಪಟ್ಟಣದ ಎಲ್ಲ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಯೋಗಪಟುಗಳು, ಸಾರ್ವಜನಿಕರು, ಪುರಸಭೆ ಸದಸ್ಯರು, ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು. ಸಾಯಿ ಯೋಗ ವಿದ್ಯಾ ಕೇಂದ್ರ ಹಾಗೂ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದ ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು. 


ಸುದ್ದಿ ಓದಿ