ಬೈಲಹೊಂಗಲ

ಬೂದಿಹಾಳ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಬೂದಿಹಾಳ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಬೈಲಹೊಂಗಲ 22: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನದ ಅಂಗವಾಗಿ ಮುಖ್ಖ ಶಿಕ್ಷಕ ಎನ್‌.ಆರ್‌. ಠಕ್ಕಾಯಿ ಅವರ ನೇತೃತ್ವದಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು. 

9 ನೇ ವಿಶ್ವ ಯೋಗ ದಿನದ ಅಂಗವಾಗಿ ಶಾಲಾ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳೆಲ್ಲರೂ ಯೋಗಾಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಖ ಶಿಕ್ಷಕ ಎನ್‌.ಆರ್‌. ಠಕ್ಕಾಯಿ ಮಾತನಾಡಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಹಾಗೂ ಸದಾ ಸಕ್ರಿಯವಾಗಿರಲು ಯೋಗ ಬಹಳ ಸಹಾಯಕವಾಗುತ್ತದೆ, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಮಹತ್ವದ್ದಾಗಿದೆ ಜೊತೆಗೆ ಅಧಿಕ ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ದೈಹಿಕ ಸಾಮರ್ಥ್ಯ ಹೆಚ್ಚಳ ,ಮಾನಸಿಕ ಸಮಸ್ಯೆಯನ್ನು ಯೋಗದ ಮೂಲಕ ನಿವಾರಣೆಗೆ ಮಾಡಿಕೊಳ್ಳಬಹುದು ಮತ್ತು ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧಿಸಲು ಯೋಗ ಸಹಾಯವಾಗುತ್ತದೆ ಎಂದು ಹೇಳಿದರು. 

ದೈಹಿಕ ಶಿಕ್ಷರಾದ ಪ್ರವೀಣ ಗುರುಣಗೌಡರ ವಿದ್ಯಾರ್ಥಿಗಳಿಗೆ ಪ್ರಾಣಾಯಾಮ, ಓಂಕಾರ, ಸೂರ್ಯ ನಮಸ್ಕಾರ, ಚಕ್ರಾಸನ ಮುಂತಾದ ಯೋಗಾಸನಗಳಮ್ಮು ಹೇಳಿಕೊಡುತ್ತ ವಿಶ್ವಯೋಗದಿನದ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಟ್ಟರು. 

ಶಾಲಾ ಮಕ್ಕಳಾದ ಸುನಿತಾ ಚಿಲಮೂರ ಮತ್ತು ಪ್ರೀತಂ ವಾರಿ ಯೋಗ ದಿನಾಚರಣೆ, ಆರೋಗ್ಯಕರ ಹವ್ಯಾಸಗಳು ಹಾಗೂ ಉತ್ತಮ ಜೀವನ ಶೈಲಿಯ ಬಗ್ಗೆ ಮಾತನಾಡಿದರು. 

ಶಿಕ್ಷರಾದ ಜಗದೀಶ ನರಿ, ಸುನೀಲ ಭಜಂತ್ರಿ, ಶ್ರೀಪಾಲ ಚೌಗಲಾ, ರೇಖಾ ಸೊರಟೂ, ಹೇಮಲತಾ ಪುರಾಣಿಕ, ವಿರೇಂದ್ರ ಪಾಟೀಲ, ಹಾಗೂ ವಿದ್ಯರ್ಥಿ ವಿದ್ಯಾರ್ಥಿನೀಯರು ಇದ್ದರು. ಲಕ್ಷ್ಮೀ ನಾಗಣ್ಣವರ ಸ್ವಾಗತಿಸಿದರು, ಪೃಥ್ವಿ ಗರಗದ ನಿರೂಪಿಸಿದರು ಹಾಗೂ ಸುಶ್ಮಿತಾ ಸೊಗಲದ ವಂದಿಸಿದರು. 


ಸುದ್ದಿ ಓದಿ