ತಾಳಿಕೋಟಿ

ತಾಲೂಕಾಡಳಿತದಿಂದ ಸಂವಿಧಾನ ದಿನಾಚರಣೆ

ತಾಲೂಕಾಡಳಿತದಿಂದ ಸಂವಿಧಾನ ದಿನಾಚರಣೆ


            ತಾಳಿಕೋಟಿ 26: ತಾಲೂಕ ಆಡಳಿತದ ವತಿಯಿಂದ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಲುಂಬಿನಿ ಉದ್ಯಾನವನದಲ್ಲಿರುವ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರೆ​‍್ಣ ಮಾಡಿ ಗೌರವ ಸಮರೆ​‍್ಣ ಸಲ್ಲಿಸುವುದರೊಂದಿಗೆ ಗುರುವಾರ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

             ಈ ಸಂದರ್ಭದಲ್ಲಿ ದಲಿತ ಯುವ ಮುಖಂಡ ಜೈ ಭೀಮ್ ಮುತ್ತಗಿ ಹಾಗೂ ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿ ಆರ್‌. ಬಿ. ದಮ್ಮೂರಮಠ ಅವರು ಮಾತನಾಡಿ ಭಾರತದಲ್ಲಿರುವ ಎಲ್ಲ ಜಾತಿ ಜನಾಂಗದವರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಅವರೆಲ್ಲರಿಗೂ ಸಮಾನ ಅವಕಾಶವನ್ನು ನೀಡುವ ಈ ಶ್ರೇಷ್ಠ ಸಂವಿಧಾನವನ್ನು ರಚಿಸಲು ಡಾ. ಅಂಬೇಡ್ಕರ್ ಅವರು ಸಾಕಷ್ಟು ಕಷ್ಟಪಟ್ಟು ತ್ಯಾಗಗಳನ್ನು ನೀಡಿ ರಚಿಸಿಕೊಟ್ಟು ಹೋಗಿದ್ದಾರೆ ಇದನ್ನು ರಕ್ಷಿಸುವುದರ ಜೊತೆಗೆ ಇದರ ಪ್ರಾಮಾಣಿಕ ಅನುಕರಣೆಯನ್ನು ನಾವೆಲ್ಲರೂ ಮಾಡಬೇಕಾಗಿದೆ.

                ಈ ಪ್ರಜ್ಞೆಯನ್ನು ಜಾಗೃತಿ ಗೊಳಸಲಿಕ್ಕಾಗಿಯೇ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಎಂದರು. ತಾಪಂ ಇಓ ಅನಸೂಯಾ ಚಲವಾದಿ ಧ್ವಜಾರೋಹಣವನ್ನು ನೆರವೇರಿಸಿದರು. ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಜ್ಯೋತಿ ಖೋತ್ ಸಂವಿಧಾನ ಪೀಠಿಕೆಯನ್ನು ಭೋದಿಸಿದರು. ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಚೌವ್ಹಾಣ, ದಲಿತ ಮುಖಂಡರಾದ ಮುತ್ತಪ್ಪ ಚಮಲಾಪೂರ, ನ್ಯಾಯವಾದಿ ಕಾರ್ತಿಕ ಕಟ್ಟಿಮನಿ, ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿ ಅಧ್ಯಕ್ಷ ಸದ್ದಾಮ್ ಮನಗೂಳಿ,                         ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ, ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಕರವೇಯ ಅಬೂಬಕರ ಲಾಹೋರಿ, ಜಾಕೀರ ಬಡಗಣ, ಮೌಲಾನಾ ಅಬುಲ್ ಕಲಾಂ ಆಜಾದ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಶಫೀಕ ಇನಾಮದಾರ, ಕಾಂಗ್ರೆಸ್ ಯೂಥ್ ಕಮಿಟಿ ಅಧ್ಯಕ್ಷ ಆಸಿಫ್ ಕೆಂಭಾವಿ, ಸದ್ದಾಮ್ ಹೊನ್ನಳ್ಳಿ, ನದೀಮ್ ಕಡು, ಬೇಪಾರಿ ಸದ್ದಾಮ, ಆಡಳಿತ ವೈದ್ಯಾಧಿಕಾರಿ ಡಾ.ಎ.ಜಿ. ಬಿರಾದಾರ, ಪುರಸಭೆಯ ಸುರೇಶ ಅಮರಣ್ಣವರ, ಅಗ್ನಿಶಾಮಕ ದಳದ ಅಧಿಕಾರಿ ಸರ್ಫ್ರಾಜ್ ಕಂದಗಲ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಎಸ್ ಎನ್ ಮಲ್ಲಾಡೆ, ಎಸ್‌ಎಂ ಕಲಬುರ್ಗಿ, ರೇಣುಕಾ ಪಾಟೀಲ, ವಿಶ್ವನಾಥ ಮಳಗಿ, ರಮೇಶ ಸಂಗಮ ಮತ್ತಿತರರು ಇದ್ದರು. 


ಸುದ್ದಿ ಓದಿ