ಗದಗ

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ

ಲೋಕದರ್ಶನ ವರದಿ  

           ಗದಗ     26:  ಕರ್ನಾಟಕ ರಾಜ್ಯ ಏಡ್ಸ್‌ ಪ್ರೀವೆನ್ಶನ್ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಏಡ್  ್ಸತಡೆಗಟ್ಟುವಿಕೆ ಮತ್ತು ನಿಯಂತ್ರಣ  ಘಟಕ, ಜಿಲ್ಲಾ ವಾರ್ತಾ ಮತ್ತು ಸಾ.ಸಂ. ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಕೆ.ಹೆಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಕ್ತ ನಿಧಿ ಕೇಂದ್ರ, ಐ.ಎಮ್‌.ಎ. ರಕ್ತನಿಧಿ ಕೇಂದ್ರ  ಗದಗ ಇವರುಗಳ ಸಹಯೋಗದಲ್ಲಿ  ಕೆ.ಹೆಚ್‌. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಲ್ಲಸಮುದ್ರ ಗದಗನಲ್ಲಿ  ರಾಷ್ಟ್ರೀಯ  ಸ್ವಯಂ ಪ್ರೇರಿತರಕ್ತದಾನ ದಿನಾಚರಣೆ ಹಾಗು ಬೃಹತ್ ರಕ್ತದಾನ ಶಿಬಿರ ಜರುಗಿತು.  


                    ಸಮಾರಂಭವನ್ನು ಉದ್ಘಾಟಿಸಿದ ಕೆ.ಹೆಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ಧೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ ರವರು ಮಾತನಾಡಿ ರಕ್ತದಾನ ಶ್ರೇಷ್ಠ ದಾನ, ರಕ್ತದಾನಕ್ಕೆ ಸಾಟಿ ಯಾವುದೂ ಇಲ್ಲ, ರಕ್ತಕ್ಕೆ ಸಾಟಿ ರಕ್ತವೇ ಆಗಿದೆ. ಎಲ ್ಲಆರೋಗ್ಯವಂತರು ರಕ್ತದಾನ ಮಾಡುವುದರ ಮುಖಾಂತರ ಗರ್ಭೀಣಿ ಮಹಿಳೆಯರಿಗೆ, ರಕ್ತಹೀನತೆ ಇರುವವರಿಗೆ  ರಕ್ತದಾನ ಮಾಡುವುದರ ಮುಖಾಂತರ ಮಾದರಿಯಾಗಲು ತಿಳಿಸಿದರು. ರಕ್ತದಾನ ಮಾಡಲು ಯಾವ ರೀತಿ ನಾವು 18 ವರ್ಷ ತುಂಬಿದ ಕೂಡಲೇ  ಲೈಸೆನ್ಸ್‌ ಪಡೆಯುವಂತೆ ಹಾಗೂ ಮತದಾನದ ಅಧಿಕಾರ ಪಡೆಯುವಂತೆ ರಕ್ತದಾನ ಮಾಡುವುದನ್ನು ಪ್ರಾರಂಭಿಸಬೇಕು. ರಕ್ತದಾನ ಮಾಡುವವರು 45 ಕೆ.ಜಿತೂಕ ಹೊಂದಿರಬೇಕು, ಹೆಚ್‌.ಬಿ ಪ್ರಮಾಣ 12.5ಮಿ.ಗ್ರಾ ಗಿಂತ ಹೆಚ್ಚಿರಬೇಕು. ಯಾವುದೇತರಹದ ದೀರ್ಘಾವಧಿ ಖಾಯಿಲೆಗೆ ಓಷಧಿ ಪಡೆದಿರಬಾರದು, ಹಾಗೂ ಧೂಮಪಾನ ಮದ್ಯಪಾನ ಮಾಡಿರಬಾರದು ಈ ರೀತಿ ಅರ್ಹತೆ ಇರುವವರು ಪುರುಷರು ವರ್ಷಕ್ಕೆ 4 ಬಾರಿ, ಮಹಿಳೆಯರು ವರ್ಷಕ್ಕೆ  3 ಬಾರಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು. 


              ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಸ್‌.ಎಸ್‌. ನೀಲಗುಂದ ಮಾತನಾಡಿ ರಕ್ತದಾನ ಶ್ರೇಷ್ಠದಾನ, ರಕ್ತದಾನ ಜೀವದಾನ, ರಕ್ತದಾನ ಮಹಾದಾನ ಎನ್ನುವಂತೆ ಎಲ್ಲರೂ ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ಹೃದಯರೊಗ, ಕ್ಯಾನ್ಸರ್, ಕೊಲಸ್ಟ್ರಾಲ್ ಇವುಗಳನ್ನು ನಿಯಂತ್ರಿಸಬಹುದು ಹಾಗು ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹದಲಿ ್ಲಚೈತನ್ಯ ಬರುವುದು. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಎಲ್ಲರು ಕೈ ಜೋಡಿಸಬೇಕೆಂದು ಹೇಳಿದರು.  


ಸುದ್ದಿ ಓದಿ