ಪದ್ಮಾವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಎಸ್.ಆರ್. ಪೂಜಾರಗೆ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ..!
ಲೋಕದರ್ಶನ ವರದಿ
ಕಾಗವಾಡ 26 : ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಪದ್ಮಾವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಎಸ್.ಆರ್. ಪೂಜಾರ ಅವರಿಗೆ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಲಭಿಸಿದೆ.
ಇತ್ತಿಚಿಗೆ ಬೆಳಗಾವಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆಯ ವತಿಯಿಂದ ನಡೆದ ಕರ್ನಾಟಕ ರಾಜೋತ್ಸವ ಸಮಾರಂಭದಲ್ಲಿ ಎಸ್.ಆರ್. ಪೂಜಾರ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ವೇಳೆ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ ಮೆಚ್ಚನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಎಸ್.ಆರ್. ಪೂಜಾರ ಅವರನ್ನು ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರ ಸೇರಿದಂತೆ ಎಲ್ಲ ನಿರ್ದೇಶಕರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.