ಶೀತಲ ಕುಂಬಾರಗೆ “ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ
ಲೋಕದರ್ಶನ ವರದಿ
ಕಾಗವಾಡ 26: ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಸಮಾಜ ಸೇವಕ ಶೀತಲ ಕುಂಬಾರ ಅವರಿಗೆ ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಶ್ರೀ ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ ವತಿಯಿಂದ ಶೀತಲ ಕುಂಬಾರ ಅವರಿಗೆ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳು,
ಸೇವಾ ಮನೋಭಾವ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯನ್ನು, ಕನ್ನಡ ಸಾಹಿತ್ಯದ ಉಳಿವಿಗಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗುರುತಿಸಿ, ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ವೇಳೆ ಫೌಂಡೇಶನ ಅಧ್ಯಕ್ಷ ಮಹಾಂತೇಶ ಕೂಡಲಗಿ, ರಮೇಶ ಕಾಂಬಳೆ, ಪೋಪಟ ಕಾಂಬಳೆ ಉಪಸ್ಥಿತರಿದ್ದರು. ಪ್ರಶಸ್ತಿ ಪಡೆದ ಶೀತಲ ಕುಂಬಾರ ಅವರಿಗೆ ಗ್ರಾಮಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.