ಸರ್ವಜ್ಞ ವಿದ್ಯಾಪೀಠದಲ್ಲಿ ಸಂವಿಧಾನ ದಿನಾಚರಣೆ
ತಾಳಿಕೋಟಿ 26: ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರು ಮಾತನಾಡಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ದೇಶವನ್ನು ಪ್ರಗತಿ ಏಕತೆ ಮತ್ತು ಸಮಗ್ರತೆ ಮುನ್ನಡೆಸುವ ಪರಮೋಚ್ಚ ಶಕ್ತಿಯಾಗಿದೆ ನಾವೆಲ್ಲರೂ ಸಂವಿಧಾನವನ್ನು ನಿಷ್ಠೆಯಿಂದ ಪಾಲಿಸೋಣ ಗೌರವಿಸೋಣ ಮತ್ತು ದೇಶವನ್ನು ಮತ್ತಷ್ಟು ಬಲಪಡಿಸೋಣ.
ಡಾ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿ ಹಾಗೂ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಮಹನೀಯರ ದೂರದೃಷ್ಟಿ ತ್ಯಾಗ ಮತ್ತು ಅಪಾರ ಚಿಂತನೆಯ ಫಲವಾಗಿ ನಮಗೆ ಈ ಶ್ರೇಷ್ಠ ಸಂವಿಧಾನ ದೊರಕಿದೆ 1949 ನವಂಬರ್ 26ರಂದು ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದರೂ ಅದರ ಮೌಲ್ಯಗಳನ್ನು ಸ್ವೀಕರಿಸಿ ಗೌರವಿಸುವ ಉದ್ದೇಶದಿಂದ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಎಂದರು.
ಸಮಾಜ ವಿಜ್ಞಾನ ಶಿಕ್ಷಕರಾದ ರಾಜು ಜವಳಗೇರಿ ರವರು ಮಾತನಾಡಿ ಕರ್ನಾಟಕದ ಸಾಮಾಜಿಕ ಸುಧಾರಣೆಯ ಇತಿಹಾಸಕ್ಕೂ ಸಂವಿಧಾನದ ಮೌಲ್ಯಗಳಿಗೂ ಅವಿನಾಭಾವ ಸಂಬಂಧವಿದೆ ಬಸವಣ್ಣನವರ ಕಾಯಕ ದಾಸೋಹ ಮತ್ತು ಸಮಾನತೆಯ ತತ್ವ ಅನುಭವ ಮಂಟಪ ಪ್ರಜಾಸತಾತ್ಮಕ ಚಿಂತನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ. ಸಂವಿಧಾನ ನಮಗೆ ಹಕ್ಕನ್ನು ನೀಡಿದ ಆದರೆ ಈ ಹಕ್ಕನ್ನು ಉಳಿಸಿಕೊಳ್ಳಲು ನಾಗರಿಕರ ಜಾಗೃತಿ ನಾವೆಲ್ಲರೂ ಮಾಡಬೇಕಾಗಿದೆ.
ಸಂವಿಧಾನದ ಹಕ್ಕನ್ನು ಪ್ರಜಾಪೂರಕವಾಗಿ ಬಳಸುವುದು ತಪ್ಪನ್ನು ಪ್ರಶ್ನಿಸುವುದು ಬಿನ್ನಪ್ರಾಯವನ್ನು ಗೌರವಿಸುವುದು, ದ್ವೇಷದ ರಾಜಕಾರಣಗಳನ್ನು ತಿರಸ್ಕರಿಸುವುದು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆಯನ್ನು ಕಟ್ಟಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ ಹಾಗೂ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.