ಬೈಲಹೊಂಗಲ

ಹಾವು ಕಚ್ಚಿ ಮಹಿಳೆ ಸಾವು

ಹಾವು ಕಚ್ಚಿ ಮಹಿಳೆ ಸಾವು

ಬೈಲಹೊಂಗಲ: ವಿಷಕಾರಿ ಹಾವು ಕಚ್ಚಿದ್ದರ ಪರಿಣಾಮ ಓರ್ವ ರೈತ ಮಹಿಳೆ ಮೃತಪಟ್ಟ ಘಟನೆ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದಲ್ಲಿ ಜರುಗಿದೆ.  

ಮಂಜುಳಾ ಮಡಿವಾಳಪ್ಪ ಕಮತಗಿ (40) ತನ್ನ ಪ್ರತಿನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ, ಜಮೀನಿಗೆ ಬುತ್ತಿ ಗಂಟನ್ನು ತೆಗೆದುಕೊಂಡು ಹೋಗುವ ಅವಸರದಲ್ಲಿ, ಕಸಗೂಡಿಸಲು ಹೋಗಿದ್ದಾಳೆ. ಈ ಸಂದರ್ಭದಲ್ಲಿ ಕಟ್ಟಿಗೆಯನ್ನು ಪಕ್ಕಕ್ಕೆ ಎತ್ತಿಡಲು ಹೋದಾಗ, ಕೈ ಬೆರಳಿಗೆ ಹಾವು ಕಚ್ಚಿದೆ. ತಕ್ಷಣವೇ ಮನೆಯವರು ಚಿಕಿತ್ಸೆಗೆಂದು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಮಹಿಳೆಯನ್ನು ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ. 

ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಸವದತ್ತಿ ಎಪಿಎಂಸಿ ಮಾಜಿ ಅದ್ಯಕ್ಷ ಎಪ್‌.ಎಸ್‌.ಸಿದ್ದನಗೌಡರ, ಮಲಪ್ರಭಾ ನೀರು ಬಳಕೆದಾರರ ಸಂಘದ ನಿರ್ದೇಶಕ ಚನ್ನಪ್ಪ ಬೂದಿಹಾಳ, ಶಂಕ್ರೆಪ್ಪ ಸೊಗಲ, ಎಸ್‌.ಬಿ.ಪಾಟೀಲ, ಉಮೇಶ ಬೊಳೆತ್ತಿನ ಹಾಗೂ ಹೊಸೂರ ಗ್ರಾಮದ ಜನತೆ ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ