ಅಥಣಿ

ಟಿಕೇಟ್ ಯಾರಿಗಾದರೂ ನೀಡಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ: ಕುಮಠಳ್ಳಿ

ಟಿಕೇಟ್ ಯಾರಿಗಾದರೂ ನೀಡಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ: ಕುಮಠಳ್ಳಿ

ವರದಿ ವೆಂಕಟೇಶ ದೇಶಪಾಂಡೆ 

ಅಥಣಿ 14: ಪಕ್ಷದ ಹೈ ಕಮಾಂಡ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೇಟ್ ಹಂಚಿಕೆ ಮಾಡುತ್ತಾರೆ. ನನಗೆ ಅಥವಾ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಇಬ್ಬರಲ್ಲಿ ಯಾರಿಗಾದರೂ ನೀಡಿದರೂ ಕೂಡ ನಾವಿಬ್ಬರೂ ಸೇರಿ ಚುನಾವಣೆ ಎದುರಿಸಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಹೇಳಿದರು.  ಅವರು ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ 80 ಲಕ್ಷ ವೆಚ್ಚದ ದೊಡ್ಡವಾಡ ಸೀಮಿ ಲಕ್ಷ್ಮೀ ದೇವಸ್ಥಾನದವರೆಗೆ, 53 ಲಕ್ಷ ವೆಚ್ಚದಲ್ಲಿ ಮನೆ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಜಲಜೀವನ್ ಮೀಶನ್ ಯೋಜನೆಗೆ, ಝುಂಜರವಾಡ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದ ಝುಂಜರವಾಡ ತುಂಗಳ ರಸ್ತೆ ಕಾಮಗಾರಿಗೆ, 90 ಲಕ್ಷ ವೆಚ್ಚದ ಝುಂಜರವಾಡ ತುಬಚಿ ರಸ್ತೆಗೆ, 80 ಲಕ್ಷ ವೆಚ್ಚದ ಸುಟ್ಟಟ್ಟಿಯಿಂದ ಝುಂಜರವಾಡ ಆರ್‌.ಸಿ ಸೆಂಟರ್ ವರೆಗೆ  ಹಾಗೂ 54 ಲಕ್ಷ ವೆಚ್ಚದ ಜಲಜೀವನ್ ಮೀಶನ್ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಕೂಡ 2023 ರ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮಿಬ್ಬರಲ್ಲಿ ಯಾರಿಗಾದರೂ ಕೂಡ ನಾವಿಬ್ಬರೂ ಸೇರಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಹೀಗಾಗಿ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.  

ನನ್ನ ಮೇಲೆ ವಿಶ್ವಾಸ ಇಟ್ಟು ಅಥಣಿ ಮತಕ್ಷೇತ್ರದ ಮತದಾರರು ಎರಡು ಬಾರಿ ಚುನಾವಣೆಯಲ್ಲಿ ಮತ ನೀಡಿ ಆಯ್ಕೆ ಮಾಡಿದ್ದಾರೆ ಹೀಗಾಗಿ ನಾನು ಅವರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಅನುದಾನ ತರುವ ಮೂಲಕ ಪ್ರಯತ್ನಿಸುತ್ತಿರುವೆ ಎಂದ ಅವರು ಟಿಕೇಟ್ ಅಥವಾ ಚುನಾವಣೆಯ ಬಗೆಗೆ ನಾನು ಗೊಂದಲದಲ್ಲಿ ಇಲ್ಲ ಏನಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ತಲೆ ಖೆಡಿಸಿಕೊಳ್ಳುವೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶಂಖರ ಮೋರೆ, ಸತ್ಯಪ್ಪಾ ಪೂಜಾರಿ, ಶಿವಪುತ್ರ ನಾಯಿಕ, ಬಸವರಾಜ ಮಗದುಮ್, ಸಾಜೀದ್ ಬಿರಾದಾರ, ರಾಜುಗೌಡ ಕುಂಗಿ, ಚಿದಾನಂದ ಬಿರಾದಾರ, ದಸ್ಯಗೀರ ಮುಲ್ಲಾ, ಧುರೀಣರಾದ ನಿಂಗಪ್ಪ ನಂದೇಶ್ವರ, ಮಲ್ಲಿಕಾರ್ಜುನ ಹಂಚಿನಾಳ, ರಾವಸಾಹೇಬ ಐಗಳಿ, ಅಣ್ಣಪ್ಪಾ ಹುದ್ದಾರ, ಸಿದ್ದಪ್ಪಾ ಮುದಕಣ್ಣವರ, ಶೀತಲ್ ಪಾಟೀಲ, ಜಯಪಾಲ ಪಾಟೀಲ, ಶ್ರೀಕಾಂತ ಯಡೂರ, ನೀರಾವರಿ ನಿಗಮದ ಪ್ರದೀಪ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ