ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮ
ರಾಣಿಬೆನ್ನೂರ 07: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾವೇರಿ ಹಾಗೂ ನಗರಸಭೆ ಇವರುಗಳ ಸಹಯೋಗದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಸಂಖ್ಯೆ: 121, 122, 143 ಮತ್ತು 145 ಕೇಂದ್ರಗಳಲ್ಲಿ ಹಾಗೂ ಸಂಬಂಧಿಸಿದ ವಾರ್ಡುಗಳಲ್ಲಿ ಶುಕ್ರವಾರ ಮತದಾನದ ಜಾಗೃತಿ ಮೂಡಿಸು ಜಾಥಾ ಹಮ್ಮಿಕೊಳ್ಳಲಾಗಿದ್ದು,
ಮೇ 07 ರಂದು ಮತದಾನ ಕೇಂದ್ರಕ್ಕೆ ಆಗಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಸಾರ್ವಜನಿಕರಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಬಿಎಲ್ಓಗಳು ಮನವಿ ಮಾಡಿಕೊಂಡರು.
ಜಾಥಾದಲ್ಲಿ ಕಂದಾಯ ಅಧಿಕಾರಿ ಪಿ ವಸಂತ, ಕಚೇರಿ ವ್ಯವಸ್ಥಾಪಕ ಮಂಜುನಾಥ, ಸಹಾಯಕ ಅಭಿಯಂತರರು, ಎಮ್.ಎಸ್. ಗುಡಿಸಲಮನಿ, ಪ್ರಭುದೇವ ಬಾಲೆಹೊಸೂರು, ಮಾಧವ್ ಸಾತೇನಹಳ್ಳಿ, ಮಾರುತಿ ಪಾಟೀಲ್, ಅಬ್ದುಲ್ ಗಫಾರ್, ಏಳುಕೋಟೆಪ್ಪ ಗೋಣಿಬಸಮ್ಮನವರ, ಹರೀಶ ಉದಗಟ್ಟಿ, ಗಣೇಶ ಪಾಸೀಗಾರ, ಆರೋಗ್ಯ ನೀರೀಕ್ಷಕಿ ಶೃತಿ, ಮಧು ಕಂಭಳಿ, ರಾಘವೇಂದ್ರ ಗಾವಡೆ ಇದ್ದರು.